ದಾವಣಗೆರೆ: ಕಲ್ಲು, ದೊಣ್ಣೆ, ಚೇರ್ಗಳಿಂದ ಹೊಡೆದಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಎರಡು ಕುಟುಂಬಗಳ ನಡುವೆ ಆಸ್ತಿಗಾಗಿ ಗಲಾಟೆ ನಡೆದಿದ್ದು, ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಹೊಡೆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ತಿ ವಿಚಾರವಾಗಿ ಗಲಾಟೆ ನಡೆದು ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದ ಎರಡು ಕುಟುಂಬಸ್ಥರ ನಡುವೆ ಮತ್ತೆ ಗಲಾಟೆಯಾಗಿದೆ. ಮಾತಿನಚಕಮಕಿ ನಂತರ ಹೊಡೆದಾಟದ ಸ್ವರೂಪ ತಾಳಿದ್ದು, ಹೆಣ್ಣುಮಕ್ಕಳು, ಮಕ್ಕಳು ಎಂದು ನೋಡದೆ ಕಲ್ಲು ಮತ್ತು ಚೇರಿನಿಂದ ಹಲ್ಲೆ ಮಾಡಿದ್ದಾರೆ. ಟಿಹೆಚ್ಓ ಪ್ರಭು ಅವರ ಎದುರೆ ಈ ಹೊಡೆದಾಟ ನಡೆದಿದೆ. ಸದ್ಯ ಎರಡು ಕುಟುಂಬಸ್ಥರ ಮೇಲೆ ಚನ್ನಗಿರಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಅಂತ್ಯಕ್ರಿಯೆಗೆ ಕಡಿಮೆ ಹಣ ಪಡೆಯಿರಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ
ಸ್ಮಶಾನದಲ್ಲಿ ಗುಂಡಿ ತೆಗೆಯಲು 10 ರಿಂದ 15 ಸಾವಿರಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು. ಕೊರೊನಾ ಹಿನ್ನೆಯಲ್ಲಿ ಜನರ ಬಳಿ ದುಡ್ಡಿಲ್ಲ. ಹೀಗಾಗಿ 1,500 ರೂಪಾಯಿ ಮಾತ್ರ ನಿಗದಿ ಪಡಿಸಿ ಎಂದು ಮೌಲಾ ಪಾಷಾ ಮನವಿ ಮಾಡಿದ್ದಾರೆ. ಇದರಿಂದ ಕೋಪಗೊಂಡ ಸಾದಿಕ್ ಪಾಷಾ ಮತ್ತು ಅವರ ಗುಂಪು ಮೌಲಾ ಪಾಷಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸುತ್ತಿಗೆ ಹಿಡಿದು ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾರೆ. ಈ ಕುರಿತಂತೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ:
ಕೋವಿಡ್ ಟೆಸ್ಟ್ ಸೆಂಟರ್ ಬಳಿ ಮಾರಾಮಾರಿ.ಕ್ಯೂನಲ್ಲಿ ನಿಂತಿದ್ದ ವೇಳೆ ಕ್ಯೂ ಬಿಟ್ಟು ಮುಂದೆ ಹೋದ ಕಾರಣಕ್ಕೆ ಹೊಡೆದಾಟ
ಕೆಂಪಮ್ಮನ ದೇವರ ಜಾತ್ರಾ ಮಹೋತ್ಸವದಲ್ಲಿ ಹಲ್ಲೆ; ಕ್ಷುಲ್ಲಕ ಕಾರಣಕ್ಕೆ ಗ್ರಾಮಸ್ಥರ ನಡುವೆ ಮಾರಾಮಾರಿ
ಬೆಂಗಳೂರಿನಲ್ಲಿ ಅಂತ್ಯಕ್ರಿಯೆಗೆ ಹಣ ನೀಡುವ ವಿಚಾರಕ್ಕೆ ಮಾರಣಾಂತಿಕ ಹಲ್ಲೆ