AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೇಜಸ್ವಿ ಸೂರ್ಯ ಸಂಸದರಾಗಲು ಅನರ್ಹ; ದಿನೇಶ್ ಗುಂಡೂರಾವ್ ವಾಗ್ದಾಳಿ

Tejasvi Surya: ‘ಶೇಕಡಾ 75ರಷ್ಟು ಬೆಡ್‌ಗಳನ್ನು ಬಿಜೆಪಿಗರಿಗೆ ನೀಡುತ್ತಿದ್ದಾರೆ. ಉಳಿದ ಬೆಡ್‌ಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಇದನ್ನು ಸಮರ್ಥಿಸಿಕೊಳ್ಳಬಾರದು.

ತೇಜಸ್ವಿ ಸೂರ್ಯ ಸಂಸದರಾಗಲು ಅನರ್ಹ; ದಿನೇಶ್ ಗುಂಡೂರಾವ್ ವಾಗ್ದಾಳಿ
ತೇಜಸ್ವಿ ಸೂರ್ಯ ಮತ್ತು ದಿನೇಶ್ ಗುಂಡೂರಾವ್
guruganesh bhat
|

Updated on:May 08, 2021 | 3:29 PM

Share

ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಬಿಜೆಪಿ ನಾಯಕರೇ ಬೆಡ್ ಹಗರಣ ನಡೆಸಿದ್ದಾರೆ. ಜತೆಗೆ ಅವರೇ ಹಗರಣ ಆಗಿದೆ ಎಂದು ಆರೋಪಿಸಿ ನಾಟಕ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಶಾಸಕ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದರು. ಬಿಬಿಎಂಪಿ ವಾರ್ ರೂಂಗೆ ಸಂಸದ ತೇಜಸ್ವಿ ಸೂರ್ಯ  ಹೋಗಿ ವಿಡಿಯೋ ಮಾಡದೇ ಕ್ಷಮಾಪಣೆ ಕೇಳಿದ್ದಾರೆ. ಇಂಥವರು ಸಂಸದರಾಗುವುದಕ್ಕೆ ಅನರ್ಹರು. ಬಿಜೆಪಿ ನಾಯಕರು ಮಾಡಿದ ಕೆಲಸ ಪ್ರತಿಯೊಬ್ಬ ರಾಜಕಾರಣಿಗೂ ಅವಮಾನ. ಐಎಎಸ್ ಅಧಿಕಾರಿಗೆ ರಕ್ಷಣೆ ನೀಡಲಾಗದ ಸರ್ಕಾರ ಅರ್ಹ ಸರ್ಕಾರವೇ? ಇವರೆಲ್ಲರನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಕೃಷ್ಣ ಭೈರೇಗೌಡ, ‘ಶೇಕಡಾ 75ರಷ್ಟು ಬೆಡ್‌ಗಳನ್ನು ಬಿಜೆಪಿಗರಿಗೆ ನೀಡುತ್ತಿದ್ದಾರೆ. ಉಳಿದ ಬೆಡ್‌ಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಇದನ್ನು ಸಮರ್ಥಿಸಿಕೊಳ್ಳಬಾರದು. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಧೈರ್ಯ ತುಂಬಬೇಕು. ಬಿಜೆಪಿಯ ದಾಂಧಲೆ ಮುಂದುವರಿದರೆ ಜನ ಸಾಯುವ ಪರಿಸ್ಥಿತು ಉಂಟಾಗಲಿದೆ ಎಂದು ವಾಗ್ಧಾಳಿ ನಡೆಸಿದರು.

ಶಾಸಕ ಸತೀಶ್ ರೆಡ್ಡಿ ವಿರುದ್ಧ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ?

ಬೆಡ್​ ಬ್ಲಾಕಿಂಗ್ ಹಗರಣ ಪ್ರಕರಣದಲ್ಲಿ ಇನ್ನೂ ಕ್ರಮ ಕೈಗೊಂಡಿಲ್ಲವೇಕೆ?. ಕರ್ತವ್ಯನಿರತ ಐಎಎಸ್​ ಅಧಿಕಾರಿಯನ್ನು ಎಳೆದಾಡಿದ್ದಾರೆ. ಆ ಸ್ಥಳದಲ್ಲಿ ಪೊಲೀಸರಿದ್ದರೂ ಇನ್ನೂ ಪ್ರಕರಣ ದಾಖಲಿಸಿಲ್ಲ. ಬೊಮ್ಮನಹಳ್ಳಿಯಲ್ಲಿ ಬೆಡ್​ ಬ್ಲಾಕಿಂಗ್ ಹಗರಣ ಆಗಿದೆ. ಆದರೆ ದಕ್ಷಿಣ ವಲಯದಲ್ಲಿ ಬಂದು ಪರಿಶೀಲನೆ ಮಾಡ್ತಾರೆ. ಸರ್ಕಾರದ ವೈಫಲ್ಯ ಮುಚ್ಚಲು ಈ ರೀತಿ ಆರೋಪಿಸಿದ್ದಾರೆ. ಇದೆಲ್ಲದರ ಬಗ್ಗೆಯೂ ಸಂಪೂರ್ಣವಾಗಿ ತನಿಖೆಯಾಗಬೇಕು ಎಂದು ಬೆಂಗಳೂರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಈವರೆಗೂ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ರಾಜ್ಯದಲ್ಲಿ ಗೃಹ ಇಲಾಖೆ ಇದೆಯಾ ಇಲ್ವಾ ಅನ್ನೋ ಪ್ರಶ್ನೆ ಮೂಡುತ್ತಿದೆ? ಎಂದ ಅವರು ವಾಗ್ಧಾಳಿ ನಡೆಸಿದರು. ಈ ಮೂಲಕ ಕಾಂಗ್ರೆಸ್ ನಾಯಕರು ಬಿಬಿಎಂಪಿ ಬೆಡ್ ಹಗರಣದ ವಿಷಯದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ವಾಗ್ಧಾಳಿ ನಡೆಸಿದರು.

ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್​ರೆಡ್ಡಿ ಬೆಂಬಲಿಗರ ವಿರುದ್ಧ ಪೊಲೀಸರಿಗೆ ದೂರು

12 ಆಸ್ಪತ್ರೆಗಳಲ್ಲಿ ರಾತ್ರೋರಾತ್ರಿ ಬಿಬಿಎಂಪಿಯಿಂದ ಬೆಡ್ ಬುಕ್ಕಿಂಗ್ ದಂದೆ: ಇದು ಭ್ರಷ್ಟಾಚಾರ ಅಲ್ಲ, ಸೋಂಕಿತರ ಹತ್ಯೆ; ಸಂಸದ ತೇಜಸ್ವಿ ಸೂರ್ಯ

(MLA Dinesh Gundu Rao says Tejasvi Surya is unfit to a MP bbmp hospital bed blocking )

Published On - 3:23 pm, Sat, 8 May 21

Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್