ಜ್ಯೋತಿಷಿ ಮಾತು ಕೇಳಿ ಪೊಷಕರ ಹತ್ಯೆ; ತಂದೆ, ತಾಯಿಯನ್ನು ಕೊಂದ 14 ವರ್ಷದ ಮಗ ಅರೆಸ್ಟ್

ಪಿತೃದೋಷ ಇದೆ. ನೀನು ಚೆನ್ನಾಗಿ ಇರಬೇಕು ಎಂದರೆ ನಿಮ್ಮ ತಂದೆ ಸಾಯಬೇಕು ಎಂದು ಶಾಸ್ತ್ರ ಹೇಳಿದ್ದ ಡೊಂಗಿ ಜ್ಯೋತಿಷಿಯ ಮಾತು ಕೇಳಿದ 14 ವರ್ಷದ ಪುತ್ರ ತಂದೆಯನ್ನು ಕೊಲೆ ಮಾಡಲು ಮುಂದಾಗಿದ್ದಾನೆ.

ಜ್ಯೋತಿಷಿ ಮಾತು ಕೇಳಿ ಪೊಷಕರ ಹತ್ಯೆ; ತಂದೆ, ತಾಯಿಯನ್ನು ಕೊಂದ 14 ವರ್ಷದ ಮಗ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us
preethi shettigar
|

Updated on: May 08, 2021 | 3:40 PM

ಬೆಂಗಳೂರು: ಜೋತಿಷಿ ಮಾತು ಕೇಳಿ ತಂದೆ -ತಾಯಿಯನ್ನು ತಡ ರಾತ್ರಿ ಮೂರು ಗಂಟೆಗೆ ಕಲ್ಲಿನಿಂದ ಜಜ್ಜಿ ಸಾಯಿಸಿದ ಘಟನೆ ಬೆಂಗಳೂರಿನ ಪೀಣ್ಯದ ಕರಹೋಬನಹಳ್ಳಿಯಲ್ಲಿ ನಡೆದಿದೆ. ಪಿತೃದೋಷ ಇದೆ. ನೀನು ಚೆನ್ನಾಗಿ ಇರಬೇಕು ಎಂದರೆ ನಿಮ್ಮ ತಂದೆ ಸಾಯಬೇಕು ಎಂದು ಶಾಸ್ತ್ರ ಹೇಳಿದ್ದ ಡೊಂಗಿ ಜ್ಯೋತಿಷಿಯ ಮಾತು ಕೇಳಿದ 14 ವರ್ಷದ ಪುತ್ರ ತಂದೆಯನ್ನು ಕೊಲೆ ಮಾಡಲು ಮುಂದಾಗಿದ್ದಾನೆ.

ಗಾಂಜಾ ಮತ್ತಲ್ಲಿ ಪೋಷಕರನ್ನು ರಾಕ್ಷಸನಂತೆ ಕೊಂದ ಎರಡನೇ ಮಗ ಕೊಲೆ ಮಾಡಿದ ಬಳಿಕ ತಾನೇ ಕಚೇರಿಯ ಬೀಗ ಹಾಕಿ, ಕೀ ತನ್ನ ಪ್ಯಾಂಟ್​ವೊಂದರಲ್ಲಿ ಬಚ್ಚಿಟ್ಟಿದ್ದ. ಬೆಳಿಗ್ಗೆ ತಂದೆ-ತಾಯಿ ಕಾಣದಾಗ ಪೀಣ್ಯ ಪೊಲೀಸರಿಗೆ ಮೊದಲನೇ ಮಗ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರಿಗೆ ವಿಚಾರಣೆ ವೇಳೆ ಕಚೇರಿಯ ಕೀ ಸಿಕ್ಕಿದ್ದು, ಇದು ಕೊಲೆಯ ಸುಳಿವು ನೀಡಿದೆ. ಸದ್ಯ14 ವರ್ಷದ ಎರಡನೇ ಮಗನನ್ನು ಬಂಧಿಸಿದ ಪೀಣ್ಯ ಪೊಲೀಸರು ಈ ಘಟನೆಗೆ ಮೂಲಕ ಕಾರಣವಾದ ಜ್ಯೋತಿಷಿಯನ್ನು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆಯ ಎರಡು ಕುಟುಂಬಗಳ ನಡುವೆ ಆಸ್ತಿಗಾಗಿ ಹೊಡೆದಾಟ ಜಿಲ್ಲೆಯ ಚನ್ನಗಿರಿ ತಾಲ್ಲೂಕು ಆಸ್ಪತ್ರೆಯ ಮುಂಭಾಗದಲ್ಲಿ ಕಲ್ಲು, ದೊಣ್ಣೆ, ಚೇರ್​ಗಳಿಂದ ಹೊಡೆದಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಎರಡು ಕುಟುಂಬಗಳ ನಡುವೆ ಆಸ್ತಿಗಾಗಿ ಗಲಾಟೆ ನಡೆದಿದ್ದು, ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಹೊಡೆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಸ್ತಿ ವಿಚಾರವಾಗಿ ಗಲಾಟೆ ನಡೆದು ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದ ಎರಡು ಕುಟುಂಬಸ್ಥರ ನಡುವೆ ಮತ್ತೆ ಗಲಾಟೆಯಾಗಿದೆ. ಮಾತಿನಚಕಮಕಿ ನಂತರ ಹೊಡೆದಾಟದ ಸ್ವರೂಪ ತಾಳಿದ್ದು, ಹೆಣ್ಣುಮಕ್ಕಳು, ಮಕ್ಕಳು ಎಂದು ನೋಡದೆ ಕಲ್ಲು ಮತ್ತು ಚೇರಿನಿಂದ ಹಲ್ಲೆ ಮಾಡಿದ್ದಾರೆ. ಟಿಹೆಚ್ಓ ಪ್ರಭು ಅವರ ಎದುರೆ‌ ಈ ಹೊಡೆದಾಟ ನಡೆದಿದೆ. ಸದ್ಯ ಎರಡು ಕುಟುಂಬಸ್ಥರ ‌ಮೇಲೆ ಚನ್ನಗಿರಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೊಲೆ ಪ್ರಕರಣ: ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಮೇಲೆ FIR ದಾಖಲು.. ಪೊಲೀಸರಿಂದ ಹುಡುಕಾಟ

ಕೊಲೆ ಆರೋಪಿಗೆ ಗುಂಡೇಟು ಪ್ರಕರಣ: ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದ ವಿಡಿಯೋ ಲಭ್ಯ