ದಾಸ್ತಾನಿರುವ ಲಸಿಕೆಯಲ್ಲಿ ಎರಡನೇ ಡೋಸ್​ಗೆ ಆದ್ಯತೆ ನೀಡಲು ಸೂಚನೆ

2nd Dose Vaccine: ಕೋವ್ಯಾಕ್ಸಿನ್ ಲಸಿಕೆ ಸದ್ಯ ಕಡಿಮೆ ಪ್ರಮಾಣದಲ್ಲಿ ಹಂಚಿಕೆಯಾಗಿರುವ ಕಾರಣ 2ನೇ ಡೋಸ್ ಬಾಕಿ ಇರುವ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುವುದು ಎಂದು ಸಹ ಅವರು ಟ್ವೀಟ್​ನಲ್ಲಿ ವಿವರಿಸಿದ್ದಾರೆ.

ದಾಸ್ತಾನಿರುವ ಲಸಿಕೆಯಲ್ಲಿ ಎರಡನೇ ಡೋಸ್​ಗೆ ಆದ್ಯತೆ ನೀಡಲು ಸೂಚನೆ
ಕೊರೊನಾ ಲಸಿಕೆ (ಸಂಗ್ರಹ ಚಿತ್ರ)
Follow us
guruganesh bhat
|

Updated on:May 08, 2021 | 4:21 PM

ಬೆಂಗಳೂರು: ಕರ್ನಾಟಕಕ್ಕೆ ಹಂಚಿಕೆಯಾಗಿರುವ ಕೊರೊನಾ ಲಸಿಕೆಯನ್ನು 2ನೇ ಡೋಸ್ ನೀಡಲು ಬಳಸುವಂತೆ ಬಿಬಿಎಂಪಿ, ಜಿಲ್ಲಾಡಳಿತಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಸೂಚಿಸಿದ್ದಾರೆ. ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. 

ರಾಜ್ಯದಲ್ಲಿ ವಿತರಣೆ ಆಗಬೇಕಿರುವ ಕೊರೊನಾ ಲಸಿಕೆಯನ್ನು ಮುಂದಿನ ದಿನಗಳಲ್ಲಿ ವಿತರಣೆ ಮಾಡುವ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಲಭ್ಯವಿರುವ ಕೊವಿಶೀಲ್ಡ್ ಲಸಿಕೆಯಲ್ಲಿ ಶೇಕಡಾ70ರಷ್ಟನ್ನು 2ನೇ ಡೋಸ್ ಬಾಕಿಯಿರುವ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು. ಉಳಿದ ಶೇಕಡಾ 30ರಷ್ಟು ಕೊವಿಶೀಲ್ಡ್ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ 1ನೇ ಡೋಸ್ ನೀಡಲು ಬಳಸಲಾಗುವುದು ಎಂದು ತಿಳಿಸಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆ ಸದ್ಯ ಕಡಿಮೆ ಪ್ರಮಾಣದಲ್ಲಿ ಹಂಚಿಕೆಯಾಗಿರುವ ಕಾರಣ 2ನೇ ಡೋಸ್ ಬಾಕಿ ಇರುವ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುವುದು ಎಂದು ಸಹ ಅವರು ಟ್ವೀಟ್​ನಲ್ಲಿ ವಿವರಿಸಿದ್ದಾರೆ. ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಡಿರುವ ಟ್ವೀಟ್ ಇಲ್ಲಿದೆ.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಕೊವಿಡ್​ ಚಿಕಿತ್ಸೆಗೆ ವೈದ್ಯರ ಅಭಾವ; ತಾತ್ಕಾಲಿಕ ನೇಮಕಾತಿಗೆ ಆರೋಗ್ಯ ಇಲಾಖೆಯಿಂದ ಅರ್ಜಿ ಆಹ್ವಾನ

ಕೊವಿಡ್ 3ನೇ ಅಲೆ ಎದುರಿಸಲು ಮುಂಬೈ ಸಜ್ಜು, ಏನಿದರ ಗುಟ್ಟು? (Karnataka will prioritize 2nd dose vaccine drive in available vaccine)

Published On - 4:00 pm, Sat, 8 May 21