ಅಬ್ಬಾ!! ಕೊನೆಗೂ ಟಾಕೀಸ್​​​ ಆಗ್ತಿವೆ ಓಪನ್​: ಸಿನಿಪ್ರಿಯರಿಗೆ ಸಿಗಲಿದೆ ಭರ್ಜರಿ ಆಫರ್​, ಏನು?

ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್‌ಲಾಕ್ 5.0 ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳನ್ನ ಓಪನ್‌ ಮಾಡಲು ಅನುಮತಿ ನೀಡಿದೆ. ಹೀಗಾಗಿ, ಚಿತ್ರಮಂದಿರಗಳನ್ನು ತೆರೆಯಲು ಸಿದ್ಧತೆ ಶುರುವಾಗಿದೆ. ಈ ಬಗ್ಗೆ ಮಾತನಾಡಿದ ಫಿಲ್ಮ್ ಛೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಚಿತ್ರವೀಕ್ಷಣೆಗೆ ಅನುಮತಿ ನೀಡಿದರೆ ಕಷ್ಟವಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರ ದೊಡ್ಡ ಸಿನಿಮಾಗಳ ಬಿಡುಗಡೆಗೆ ತೊಂದರೆಯಾಗಲಿದೆ. ಆದರೆ, ಮೊದಲು UFO, CUBEನಲ್ಲಿರುವ […]

ಅಬ್ಬಾ!! ಕೊನೆಗೂ ಟಾಕೀಸ್​​​ ಆಗ್ತಿವೆ ಓಪನ್​: ಸಿನಿಪ್ರಿಯರಿಗೆ ಸಿಗಲಿದೆ ಭರ್ಜರಿ ಆಫರ್​, ಏನು?
Edited By:

Updated on: Oct 01, 2020 | 1:56 PM

ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್‌ಲಾಕ್ 5.0 ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳನ್ನ ಓಪನ್‌ ಮಾಡಲು ಅನುಮತಿ ನೀಡಿದೆ. ಹೀಗಾಗಿ, ಚಿತ್ರಮಂದಿರಗಳನ್ನು ತೆರೆಯಲು ಸಿದ್ಧತೆ ಶುರುವಾಗಿದೆ. ಈ ಬಗ್ಗೆ ಮಾತನಾಡಿದ ಫಿಲ್ಮ್ ಛೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಚಿತ್ರವೀಕ್ಷಣೆಗೆ ಅನುಮತಿ ನೀಡಿದರೆ ಕಷ್ಟವಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರ ದೊಡ್ಡ ಸಿನಿಮಾಗಳ ಬಿಡುಗಡೆಗೆ ತೊಂದರೆಯಾಗಲಿದೆ. ಆದರೆ, ಮೊದಲು UFO, CUBEನಲ್ಲಿರುವ ಹಳೆಯ ಹಿಟ್ ಚಿತ್ರಗಳನ್ನು ಮತ್ತೆ ರಿಲೀಸ್ ಮಾಡುವ ಮೂಲಕ ಟ್ರಯಲ್ ಮಾಡ್ತೇವೆ. ಇದರಿಂದ ಜನರನ್ನು ಚಿತ್ರಮಂದಿರಗಳತ್ತ ಸೆಳೆಯಬಹುದು ಎಂದು ಹೇಳಿದ್ದಾರೆ.

15ರಿಂದ 20 ದಿನ ಇದೇ ರೀತಿ ಟ್ರಯಲ್ ಮಾಡಲಾಗುತ್ತೆ. ಈಗಾಗಲೇ, UFO ಮತ್ತು CUBE ಜತೆ ಮಾತುಕತೆ ನಡೆಸಲಾಗಿದೆ. ಟಿಕೆಟ್ ಬೆಲೆ ಏರಿಕೆಯ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ. ಜನ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಟಿಕೆಟ್ ಬೆಲೆ ಏರಿಕೆ ಮಾಡಲ್ಲ. ಈ ಸಂದರ್ಭದಲ್ಲಿ ಟಿಕೆಟ್ ಬೆಲೆ ಕಡಿಮೆ ಮಾಡಬೇಕು. ಆಗ ಮಾತ್ರ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುತ್ತಾರೆ ಎಂದು ಸಾ.ರಾ.ಗೋವಿಂದು ತಿಳಿಸಿದ್ದಾರೆ.