ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಹೋದ ಎತ್ತಿನ ಬಂಡಿ, ಎತ್ತು ಸೇರಿ ನಾಲ್ವರು ಏನಾದರು?
ರಾಯಚೂರು: ಜಿಲ್ಲೆಯಲ್ಲಿ ವರ್ಷಧಾರೆ ಪ್ರತಾಪ ಮುಂದುವರೆದಿದೆ. ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಸೇತುವೆಯನ್ನು ದಾಟಲು ಹೋಗಿ ಎತ್ತಿನ ಬಂಡಿ ಹಾಗೂ ನಾಲ್ವರು ಮಳುಗಿರುವ ಘಟನೆ ನಡೆದಿದೆ. ರಾಯಚೂರ ತಾಲೂಕಿನ ಪುಚ್ಚಲದಿನ್ನಿ ಗ್ರಾಮದ ಬಳಿ ಇರುವ ಸೇತುವೆ ಮಳೆ ನೀರಿನಿಂದ ಮುಳುಗಿದೆ. ಈ ವೇಳೆ ಬೇರೆ ದಾರಿ ಇಲ್ಲದೆ ಸೇತುವೆ ದಾಟಲು ಮುಂದಾದ ಎತ್ತಿನಬಂಡಿ ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಕೊಂಡುಹೋಗಿದೆ. ಅದೃಷ್ಟವಶಾತ್ ಎತ್ತಿನ ಬಂಡಿಯಲ್ಲಿದ್ದ ನಾಲ್ವರು ಈಜಾಡಿ ದಡ ಸೇರಿದ್ದಾರೆ. ಹಾಗೂ ಎರಡು ಎತ್ತುಗಳನ್ನು ರಕ್ಷಿಸಲಾಗಿದೆ. ಆದರೆ ಎತ್ತಿನಬಂಡಿ […]

ರಾಯಚೂರು: ಜಿಲ್ಲೆಯಲ್ಲಿ ವರ್ಷಧಾರೆ ಪ್ರತಾಪ ಮುಂದುವರೆದಿದೆ. ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಸೇತುವೆಯನ್ನು ದಾಟಲು ಹೋಗಿ ಎತ್ತಿನ ಬಂಡಿ ಹಾಗೂ ನಾಲ್ವರು ಮಳುಗಿರುವ ಘಟನೆ ನಡೆದಿದೆ.
ರಾಯಚೂರ ತಾಲೂಕಿನ ಪುಚ್ಚಲದಿನ್ನಿ ಗ್ರಾಮದ ಬಳಿ ಇರುವ ಸೇತುವೆ ಮಳೆ ನೀರಿನಿಂದ ಮುಳುಗಿದೆ. ಈ ವೇಳೆ ಬೇರೆ ದಾರಿ ಇಲ್ಲದೆ ಸೇತುವೆ ದಾಟಲು ಮುಂದಾದ ಎತ್ತಿನಬಂಡಿ ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಕೊಂಡುಹೋಗಿದೆ. ಅದೃಷ್ಟವಶಾತ್ ಎತ್ತಿನ ಬಂಡಿಯಲ್ಲಿದ್ದ ನಾಲ್ವರು ಈಜಾಡಿ ದಡ ಸೇರಿದ್ದಾರೆ. ಹಾಗೂ ಎರಡು ಎತ್ತುಗಳನ್ನು ರಕ್ಷಿಸಲಾಗಿದೆ.
ಆದರೆ ಎತ್ತಿನಬಂಡಿ ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಹೋಗಿದೆ. ಮಳೆಯಿಂದಾಗಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಆದಷ್ಟು ಬೇಗ ಇದಕ್ಕೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕಿದೆ.







