ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಅಧರ್ಮದ ಆರೋಪ-ಪ್ರತ್ಯಾರೋಪ.. ಕರಗದ ಹೆಸರಿನಲ್ಲಿ ಅಕ್ರಮ, ಸಮಿತಿ ಅಧ್ಯಕ್ಷನ ವಿರುದ್ಧ ಎಫ್ಐಆರ್

| Updated By: ಆಯೇಷಾ ಬಾನು

Updated on: Jul 01, 2021 | 10:10 AM

ದೇವಸ್ಥಾನದ ಸಮಿತಿ ಅಧ್ಯಕ್ಷ ರಾಜಗೋಪಾಲ್ 21 ಲಕ್ಷ ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಎಂದು ದೇಗುಲದ ಆಡಳಿತಾಧಿಕಾರಿ ವೆಂಕಟರಮಣ ಗುರುಪ್ರಸಾದ್ ಆರೋಪಿಸಿದ್ದಾರೆ. ಹಾಗೂ ಈ ಸಂಬಂಧ ವೆಂಕಟರಮಣ ದೂರು ದಾಖಲಿಸಿದ್ದು ದೂರು ಆಧರಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ರಾಜಗೋಪಾಲ್ ವಿರುದ್ಧ FIR ದಾಖಲಾಗಿದೆ.

ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಅಧರ್ಮದ ಆರೋಪ-ಪ್ರತ್ಯಾರೋಪ.. ಕರಗದ ಹೆಸರಿನಲ್ಲಿ ಅಕ್ರಮ, ಸಮಿತಿ ಅಧ್ಯಕ್ಷನ ವಿರುದ್ಧ ಎಫ್ಐಆರ್
ಸಂಗ್ರಹ ಚಿತ್ರ
Follow us on

ಬೆಂಗಳೂರು: ವಿಶ್ವವಿಖ್ಯಾತ ಕರಗ ಮಹೋತ್ಸವ ನಡೆಯುವ ಧರ್ಮರಾಯಸ್ವಾಮಿ ದೇವಸ್ಥಾನ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಧರ್ಮರಾಯಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇಗುಲದ 21 ಲಕ್ಷ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ದೇವಸ್ಥಾನದ ಸಮಿತಿ ಅಧ್ಯಕ್ಷ ರಾಜಗೋಪಾಲ್ 21 ಲಕ್ಷ ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಎಂದು ದೇಗುಲದ ಆಡಳಿತಾಧಿಕಾರಿ ವೆಂಕಟರಮಣ ಗುರುಪ್ರಸಾದ್ ಆರೋಪಿಸಿದ್ದಾರೆ. ಹಾಗೂ ಈ ಸಂಬಂಧ ವೆಂಕಟರಮಣ ದೂರು ದಾಖಲಿಸಿದ್ದು ದೂರು ಆಧರಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ರಾಜಗೋಪಾಲ್ ವಿರುದ್ಧ FIR ದಾಖಲಾಗಿದೆ.

ಇನ್ನು ರಾಜಗೋಪಾಲ್ ವಿರುದ್ಧ ದೂರು ನೀಡುತ್ತಿದ್ದಂತೆ ಮತ್ತೊಂದು ಹಗರಣ ಬಯಲಾಗಿದೆ. ಸಹಾಯಕ ಆಯುಕ್ತ ವೆಂಕಟರಮಣ ಗುರುಪ್ರಸಾದ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಕೇವಲ 50 ಜನರು ಮಾತ್ರ ಸೇರಿಕೊಂಡು ಕರಗ ಆಚರಣೆ ಮಾಡಿದ್ದರು. ಸರಳವಾಗಿ ಕರಗ ಆಚರಣೆಗೆ ವೆಂಕಟರಮಣ ಗುರುಪ್ರಸಾದ್ ₹39 ಲಕ್ಷ ಖರ್ಚು ಮಾಡಿದ್ದಾರೆ. ಸಮಿತಿಯವರನ್ನು ಕೇಳದೆ ಬಿಬಿಎಂಪಿಗೆ ಬಿಲ್ ಕಳುಹಿಸಿದ್ದಾರೆ. ಕೇವಲ 50 ಜನರಿದ್ದ ಕರಗ ಆಚರಣೆಗೆ 10 ಲಕ್ಷ ಸಹ ಖರ್ಚು ಆಗಿಲ್ಲ. ಆದರೆ ₹21 ಲಕ್ಷ ಹೂವಿಗೆ ಖರ್ಚು ಆಗಿದೆ ಎಂದು ವೆಂಕಟರಮಣ ಬಿಬಿಎಂಪಿಗೆ ಸುಳ್ಳು ಲೆಕ್ಕವನ್ನು ನೀಡಿದ್ದಾರೆ. ಶಾಸಕರ ಶಿಷ್ಯ, ಅಧಿಕಾರಿಗಳು ಸೇರಿ ಸುಳ್ಳು ಲೆಕ್ಕ ಕೊಟ್ಟಿದ್ದಾರೆ ಎಂದು ವೆಂಕಟರಮಣ ವಿರುದ್ಧ ಅಧ್ಯಕ್ಷ ರಾಜಗೋಪಾಲ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಟಿವಿ9ಗೆ ಧರ್ಮರಾಯಸ್ವಾಮಿ ದೇವಸ್ಥಾನದ ಅಧ್ಯಕ್ಷ ರಾಜಗೋಪಾಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಳೆದ ವರ್ಷದಂತೆ.. ಈ ಬಾರಿಯೂ ಬೆಂಗಳೂರು ಕರಗದ ಸಂಭ್ರಮಕ್ಕೆ ಕೊರೊನಾ ಬ್ರೇಕ್