ವೃದ್ಧೆ ಹೆಸರಿನಲ್ಲಿದ್ದ ಆಸ್ತಿ ಬೇರೊಬ್ಬರಿಗೆ ನೋಂದಣಿ ಮಾಡಿ ಮೋಸ ಮಾಡುತ್ತಿದ್ದ ಖತರ್ನಾಕ್ ರಿಯಲ್ ಎಸ್ಟೇಟ್ ಗ್ಯಾಂಗ್ ವಿರುದ್ಧ FIR

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಭಕ್ತನಪಾಳ್ಯ ಗ್ರಾಮದ 85 ವರ್ಷದ ವೃದ್ಧೆ ಅಕ್ಕಯಮ್ಮ ಹೆಸರಿನಲ್ಲಿದ್ದ ಜಮೀನನ್ನು ಅದೇ ಹೆಸರಿನ 55 ವರ್ಷದ ಅಕ್ಕಯಮ್ಮಗೆ ನೋಂದಣಿ ಮಾಡಿಸಿದ್ದಾರೆ. ಖಾತೆ ವರ್ಗಾವಣೆ ಬಳಿಕ ರಿಯಲ್ ಎಸ್ಟೇಟ್ ಉದ್ಯಮಿಗಳು ಆ ಜಮೀನನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ.

ವೃದ್ಧೆ ಹೆಸರಿನಲ್ಲಿದ್ದ ಆಸ್ತಿ ಬೇರೊಬ್ಬರಿಗೆ ನೋಂದಣಿ ಮಾಡಿ ಮೋಸ ಮಾಡುತ್ತಿದ್ದ ಖತರ್ನಾಕ್ ರಿಯಲ್ ಎಸ್ಟೇಟ್ ಗ್ಯಾಂಗ್ ವಿರುದ್ಧ FIR
85 ವರ್ಷದ ವೃದ್ಧೆ ಅಕ್ಕಯಮ್ಮ

Updated on: Dec 28, 2020 | 11:24 AM

ನೆಲಮಂಗಲ: ವೃದ್ಧೆ ಹೆಸರಿನಲ್ಲಿದ್ದ ಆಸ್ತಿಯನ್ನು ಅದೇ ಹೆಸರಿನ ಬೇರೊಬ್ಬರಿಗೆ ನೋಂದಣಿ ಮಾಡಿಸಿದ ಆರೋಪ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ನಡೆಸ್ತಿದ್ದ ಗ್ಯಾಂಗ್ ವಿರುದ್ಧ ನೆಲಮಂಗಲ ಠಾಣೆಯಲ್ಲಿ FIR ದಾಖಲಾಗಿದೆ. ಅಕ್ಕಯಮ್ಮ, ಮಂಜುನಾಥ್, ರಾಮಸ್ವಾಮಿ, ನಿಂಗರಾಜು, ಮೂರ್ತಿ, ಬೆಟ್ಟಯ್ಯ, ರಾಮಣ್ಣ ಸೇರಿದಂತೆ ಒಟ್ಟು 7 ಜನರ ವಿರುದ್ಧ FIR ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಭಕ್ತನಪಾಳ್ಯ ಗ್ರಾಮದ 85 ವರ್ಷದ ವೃದ್ಧೆ ಅಕ್ಕಯಮ್ಮ ಹೆಸರಿನಲ್ಲಿದ್ದ ಜಮೀನನ್ನು ಅದೇ ಹೆಸರಿನ 55 ವರ್ಷದ ಅಕ್ಕಯಮ್ಮಗೆ ನೋಂದಣಿ ಮಾಡಿಸಿದ್ದಾರೆ. ಖಾತೆ ವರ್ಗಾವಣೆ ಬಳಿಕ ರಿಯಲ್ ಎಸ್ಟೇಟ್ ಉದ್ಯಮಿಗಳು ಆ ಜಮೀನನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ. ಜಮೀನು ಕೊಂಡವನು ಸ್ಥಳಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಈ ಖತರ್ನಾಕ್ ರಿಯಲ್ ಎಸ್ಟೇಟ್ ಗ್ಯಾಂಗ್ ಮಾಡ್ತಿದ್ದ ಮೋಸ ಬಯಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 419, 420, 465, 504, 468, 471, 120(b), 149ರ ಅಡಿ ಪ್ರಕರಣ ದಾಖಲಾಗಿದೆ. ನೆಲಮಂಗಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕೃತ್ಯದಲ್ಲಿ ಅಧಿಕಾರಿಗಳು ಶಾಮೀಲಾದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

’ನನ್ನದು ರಿಯಲ್ ಎಸ್ಟೇಟ್ ವ್ಯವಹಾರ.. ಸ್ನೇಹ ಹೊರತಾಗಿ BDA ಡಾ.ಸುಧಾ ಜೊತೆ ಯಾವುದೇ ವ್ಯವಹಾರಿಕ ಸಂಬಂಧ ಮಾಡಿಲ್ಲ’

Published On - 9:10 am, Mon, 28 December 20