ಗೌರಿ ಲಂಕೇಶ್, M.M.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ -ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ವಿರುದ್ಧ ಕೇಸ್‌ ದಾಖಲು

ಭಗವಾನ್​ ಮುಖಕ್ಕೆ ಮಸಿ ಬಳಿಸಿದ್ದ ವಕೀಲೆ ಮೀರಾ ಮತ್ತು ಅವರ ಪತಿ ರಾಘವೇಂದ್ರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಕೋರ್ಟ್‌ ಆವರಣದಲ್ಲೇ ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಗೌರಿ ಲಂಕೇಶ್, M.M.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ -ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ  ವಿರುದ್ಧ ಕೇಸ್‌ ದಾಖಲು
K.S.ಭಗವಾನ್ (ಎಡ); ವಕೀಲೆ ಮೀರಾ (ಬಲ)

Updated on: Feb 06, 2021 | 10:39 PM

ಬೆಂಗಳೂರು: ಸಾಹಿತಿ ಕೆ.ಎಸ್​.ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ಇಬ್ಬರ ವಿರುದ್ಧ ಕೇಸ್‌ ದಾಖಲಾಗಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಭಗವಾನ್​ ಮುಖಕ್ಕೆ ಮಸಿ ಬಳಿಸಿದ್ದ ವಕೀಲೆ ಮೀರಾ ಮತ್ತು ಅವರ ಪತಿ ರಾಘವೇಂದ್ರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಕೋರ್ಟ್‌ ಆವರಣದಲ್ಲೇ ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಮೈಸೂರಿಗೆ ಹೋಗುವಷ್ಟರಲ್ಲಿ ನಮ್ಮ ಹುಡುಗರು ನಿನ್ನನ್ನು ಕೊಲ್ಲಲಿದ್ದಾರೆ. ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ ಎಂದು ವಕೀಲೆ ಪ್ರೊ.ಕೆ.ಎಸ್.ಭಗವಾನ್‌ಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪದಡಿ ಐಪಿಸಿ ಸೆಕ್ಷನ್ 506, 341, 34 ಹಾಗೂ 504ರಡಿಯಲ್ಲಿ ಪ್ರಕರಣ ದಾಖಲಾಗಿದೆ.

ಭಗವಾನ್ ಮೇಲೆ ವಕೀಲೆ ಮೀರಾ ಮಸಿ ಬಳಿದಿದ್ದು ಸರಿ ಅಲ್ಲ, ಆದರೆ.. -ಸಚಿವ ಸುರೇಶ್ ಕುಮಾರ್