ದಕ್ಷಿಣ ಕನ್ನಡ: ಎಸ್ಎಸ್ಎಲ್ಸಿ ಪರೀಕ್ಷಾ( SSLC Exam ) ಕೇಂದ್ರದ ಲ್ಯಾಬ್ನಲ್ಲಿ ಅಗ್ನಿ ಅವಗಢ ಸಂಭವಿಸಿದ ಘಟನೆ ಮಂಗಳೂರು ಹೊರವಲಯದ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಪರೀಕ್ಷೆ ಆರಂಭವಾದ ಅರ್ಧ ಗಂಟೆಯಲ್ಲೇ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಾಲೇಜು ಲ್ಯಾಬ್ನಲ್ಲಿ ಉಂಟಾದ ಶಾಟ್೯ ಸರ್ಕ್ಯೂಟ್ನಿಂದ ಬೆಂಕಿ ತಗಲಿದೆ ಎಂದು ಶಂಕಿಸಲಾಗಿದೆ.
ಹಿರಾ ಕಾಲೇಜಿನಲ್ಲಿ 300 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಕಾಲೇಜಿನ ಕೋಣೆಯಲ್ಲಿ ಕಾಣಿಸಿಕೊಂಡ ದಟ್ಟ ಹೊಗೆಗೆ ಎಲ್ಲರೂ ಭಯಭೀತರಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ಲ್ಯಾಬ್ನ ಸಮೀಪದ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನು ಮೇಲಿನ ಮಹಡಿಗೆ ಕಳುಹಿಸಿದ್ದು, ಅಲ್ಲಿ ಪರೀಕ್ಷೆ ಬರೆಯಲು ಶಾಲಾ ಆಡಳಿತ ಮಂಡಳಿ ಅನುವು ಮಾಡಿಕೊಟ್ಟಿದೆ. ತಕ್ಷಣ ಎಚ್ಚೆತ್ತುಕೊಂಡ ಕಾಲೇಜು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.
ಪರೀಕ್ಷಾ ಕೇಂದ್ರ ಕನ್ಫ್ಯೂಸ್ ಮಾಡ್ಕೊಂಡಿದ್ದ ವಿದ್ಯಾರ್ಥಿನಿಗೆ ಖಾಕಿ ಹೆಲ್ಪ್
ಪರೀಕ್ಷಾ ಕೇಂದ್ರ ಕನ್ಫ್ಯೂಶನ್ನಲ್ಲಿದ್ದ ವಿದ್ಯಾರ್ಥಿನಿಗೆ ಪೊಲೀಸ್ ಕಾನ್ಸ್ ಟೇಬಲ್ ಸಹಾಯ ಮಾಡಿದ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ನಡೆದಿದೆ. ಆದರೆ ಲ್ಯಾಮಿಂಗ್ಟನ್ ಬದಲಾಗಿ ನಗರದ ಬೇರೊಂದು ಕೇಂದ್ರದಲ್ಲಿ ವಿದ್ಯಾರ್ಥಿನಿಯ ಪರೀಕ್ಷೆ ಇತ್ತು. ಪರೀಕ್ಷೆಯ ಟೈಂ ಆದ ಹಿನ್ನೆಲೆ ಪೊಲೀಸ್ ಕಾನ್ಟಟೇಬಲ್ ತನ್ನ ಬೈಕ್ನಲ್ಲೇ ವಿದ್ಯಾರ್ಥಿನಿ ಕರೆದುಕೊಂಡು ಹೋಗಿ ಸರಿಯಾದ ಪರಿಕ್ಷಾ ಕೇಂದ್ರ ಅಂದ್ರೆ ಲ್ಯಾಮಿಂಗ್ಟನ್ ಶಾಲೆಯಿಂದ ದುರ್ಗಾದೇವಿ ಶಾಲೆಗೆ ಕರೆದುಕೊಂಡು ಹೋಗಿ ಸಹಾಯ ಮಾಡಿದ್ದಾರೆ.
ಕೊವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ
ಇನ್ನು ರಾಮನಗರದಲ್ಲಿ ಪರೀಕ್ಷೆ ಬರೆಯಲು ಕೊರೊನಾ ಪಾಸಿಟಿವ್ ವಿದ್ಯಾರ್ಥಿ ಆಗಮಿಸಿದ್ದು ಆತನಿಗೆ ಕೊವಿಡ್ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಬಾದಗೆರೆ ಕೊವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ವಿದ್ಯಾರ್ಥಿ ಪೋಷಕರಿಂದ ಪ್ರಮಾಣ ಪತ್ರ ಪಡೆದು ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಜುಲೈ 12 ರಂದು ವಿದ್ಯಾರ್ಥಿಗೆ ಕೊವಿಡ್ ಪಾಸಿಟಿವ್ ಧೃಡವಾಗಿತ್ತು. ಸದ್ಯ ವಿದ್ಯಾರ್ಥಿ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:
SSLC Exam 2021; ಸುಗಮವಾಗಿ ಆರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆ, ಪರೀಕ್ಷಾ ಕೇಂದ್ರಗಳತ್ತ ಶಿಕ್ಷಣ ಸಚಿವರ ರೌಂಡ್ಸ್
ಒಂದೊಂದು ವಿಷಯಕ್ಕೂ ಪ್ರತ್ಯೇಕ ಬಣ್ಣದ OMR ಹಾಳೆ; ಎಸ್ಎಸ್ಎಲ್ಸಿ ಪರೀಕ್ಷೆ 2021ಕ್ಕೆ ಕ್ಷಣಗಣನೆ
Published On - 12:11 pm, Mon, 19 July 21