ಬೆಳಗಾವಿ, ಆಗಸ್ಟ್ 09: ಕಾರ್ಖಾನೆಯಲ್ಲಿ ಅಗ್ನಿ ದುರಂತದಲ್ಲಿ (Fire Tragedy) ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಕುಟುಂಬಕ್ಕೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಒಟ್ಟು 18 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆ.6ರಂದು ಜಿಲ್ಲೆಯ ನಾವಗೆ ಬಳಿಯ ಸ್ನೇಹಂ ಟೇಪಿಂಗ್ ಕಾರ್ಖಾನೆಯಲ್ಲಿ ನಡೆದಿದ್ದ ದುರ್ಘಟಯಲ್ಲಿ ಲಿಫ್ಟ್‌ನಲ್ಲಿ ಕಾರ್ಮಿಕ ಯಲ್ಲಪ್ಪ ಗುಂಡ್ಯಾಗೋಳ ಸಜೀವದಹನವಾಗಿದ್ದ. ಇದೀಗ ಟಿವಿ9 ವರದಿ ಬೆನ್ನಲ್ಲೇ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೂ ಮೊದಲು ಕಾರ್ಖಾನೆ ಆಡಳಿತ ಮಂಡಳಿ 18 ಲಕ್ಷ ರೂ. ಪರಿಹಾರ ನೀಡಿದೆ.
ಮುಂಚೆ 10 ಲಕ್ಷ ರೂ. ಪರಿಹಾರ ಬೇಡ ಅಂತಾ ಟಿವಿ9 ಮೂಲಕ ಮೃತನ ತಂದೆ ಸಣ್ಣಯಲ್ಲಪ್ಪ ಅಳಲು ತೋಡಿಕೊಂಡಿದ್ದರು. ಬಳಿಕ 18 ಲಕ್ಷ ರೂ. ಪರಿಹಾರದ ಚೆಕ್ವನ್ನು ತಂದೆ ಸಣ್ಣಯಲ್ಲಪ್ಪ, ತಾಯಿ ಬಸವ್ವ ಹೆಸರಿನಲ್ಲಿ ಪರಿಹಾರದ ಚೆಕ್ ಅನ್ನು ಸ್ನೇಹಂ ಟೇಪಿಂಗ್ ಕಾರ್ಖಾನೆ ವಿತರಣೆ ಮಾಡಿದೆ.
ಇದನ್ನೂ ಓದಿ: ಸುಟ್ಟು ಕರಕಲಾದ ಮೃತದೇಹವನ್ನು ಕೈಚೀಲದಲ್ಲಿ ಕೊಟ್ಟರು; ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಭಾರೀ ಆಕ್ರೋಶ
ಮನೆಯ ಜವಾಬ್ದಾರಿಯನ್ನ ತನ್ನ ಮೇಲೆ ಹೊತ್ತು ಅಕ್ಕನ ಮದುವೆ ಮಾಡಿ ಇನ್ನಿಬ್ಬರ ಸಹೋದರಿಯರ ಓದಿನ ಜವಾಬ್ದಾರಿಯನ್ನೂ ಸಹ ತಾನೇ ತಡಗೆದುಕೊಂಡು ಕೆಲಸಕ್ಕೆ ಸೇರಿದ್ದ. ಮಂಗಳವಾರ ಸಂಜೆ ಶಾರ್ಟ್ ಸರ್ಕಿಟ್ನಿಂದ ಹೊತ್ತಿಕೊಂಡ ಬೆಂಕಿಯಲ್ಲಿ ಸಜೀವವಾಗಿ ಯಲ್ಲಪ್ಪ ಬೆಂದು ಹೋಗಿದ್ದ. ಬೆಂಕಿಯ ಕೆನ್ನಾಲಿಗೆಗೆ ಯಲ್ಲಪ್ಪನ ದೇಹ ಸಂಪೂರ್ಣ ಸುಟ್ಟು ಕರಕಲಾಗಿ ಕೇವಲ ಮೂಳೆಗಳು ಮಾತ್ರ ಉಳಿದ್ದಿದ್ದವು.
ಇದನ್ನೂ ಓದಿ: ಅಳಿದುಳಿದ ಮಗನ ಮೊಳೆಗಳನ್ನ ಕೈಚೀಲದಲ್ಲಿ ತುಂಬಿ ತಂದೆ ಕೈಗೆಕೊಟ್ಟಿದ್ದಕ್ಕೆ ಕುಟುಂಬಸ್ಥರು ಆಕ್ರೋಶ
ಲಿಫ್ಟ್ ನ ಒಳಭಾಗದಲ್ಲಿ ಸಿಲುಕಿದ್ದ ಯಲ್ಲಪ್ಪ ಅಕ್ಷರಶಃ ಇನ್ನಿಲ್ಲದ ಸ್ಥಿತಿ ತಲುಪಿದ್ದ. ಕಾರ್ಯಾಚರಣೆ ನಡೆಸಿ ಶವದ ಅವಶೇಷ ಹೊರ ತೆಗೆದ ಅಧಿಕಾರಿಗಳು ಮಡಿಕೆಯಲ್ಲಿ ಹಾಕಿ ಯಲ್ಲಪ್ಪನ ಮೃತದೇಹದ ಅವಶೇಷಗಳನ್ನು ನೀಡಿದ್ದರು. ಸದ್ಯ ಈ ವಿಚಾರ ಜಿಲ್ಲೆ ಹಾಗೂ ಸಮಾಜಿಕ ಜಾಲತಾಣಗಳಲ್ಲಿ ಚರ್ಚಾ ವಿಷಯವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರೊ ಯಲ್ಲಪ್ಪನ ತಂದೆ ಜಿಲ್ಲಾಡಳಿತ ಹಾಗೂ ಕಾರ್ಖಾನೆ ಮೇಲೆ ಅಸಮಾಧಾನ ಹೊರ ಹಾಕಿದ್ದರು. ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.