‘ಯಶಸ್ವಿ’ ಆನೆ ಅಸ್ವಸ್ಥ; ವಿಷಾಹಾರ ಸೇವಿಸಿರುವ ಶಂಕೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ‘ಯಶಸ್ವಿ’ ಕಳೆದೊಂದು ತಿಂಗಳಿಂದ ಅಸ್ವಸ್ಥವಾಗಿದ್ದು, ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಯಶಸ್ವಿ ಆನೆಯು ಮಾವುತರಿಬ್ಬರ ಜಗಳದಿಂದ ವಿಷಾಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಮಾವುತರ ಬೇಜವಾಬ್ದಾರಿ ಬಗ್ಗೆ ಉಲ್ಲೇಖಿಸಲಾಗಿದೆ. ಯಶಸ್ವಿ ಆನೆಗೆ ಸದ್ಯ ಸ್ಥಳೀಯ ವೈದ್ಯರು ಹಾಗೂ ದುಬಾರೆ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಜರಾಣಿ ವಿಷ ಆಹಾರ ತಿಂದು ಹಲವು ಅಂಗಗಳಿಗೆ ಡ್ಯಾಮೇಜ್ ಆಗಿದೆ ಎಂದು ವೈದ್ಯರು […]

‘ಯಶಸ್ವಿ’ ಆನೆ ಅಸ್ವಸ್ಥ; ವಿಷಾಹಾರ ಸೇವಿಸಿರುವ ಶಂಕೆ
ಸಾಧು ಶ್ರೀನಾಥ್​

Updated on: Sep 10, 2019 | 3:13 PM

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ‘ಯಶಸ್ವಿ’ ಕಳೆದೊಂದು ತಿಂಗಳಿಂದ ಅಸ್ವಸ್ಥವಾಗಿದ್ದು, ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ಯಶಸ್ವಿ ಆನೆಯು ಮಾವುತರಿಬ್ಬರ ಜಗಳದಿಂದ ವಿಷಾಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಮಾವುತರ ಬೇಜವಾಬ್ದಾರಿ ಬಗ್ಗೆ ಉಲ್ಲೇಖಿಸಲಾಗಿದೆ. ಯಶಸ್ವಿ ಆನೆಗೆ ಸದ್ಯ ಸ್ಥಳೀಯ ವೈದ್ಯರು ಹಾಗೂ ದುಬಾರೆ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಗಜರಾಣಿ ವಿಷ ಆಹಾರ ತಿಂದು ಹಲವು ಅಂಗಗಳಿಗೆ ಡ್ಯಾಮೇಜ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ‘ಯಶಸ್ವಿ’ ಆನೆಯನ್ನು ಮಾಜಿ ಸಚಿವ ಆನಂದ್ ಸಿಂಗ್ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದರು.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us