ಬೆಳಗಾವಿ: ವನ್ಯ ಜೀವಿಯನ್ನು ಬೇಟೆಯಾಡುತ್ತಿದ್ದ ವ್ಯಕ್ತಿಯ ಮನೆ ಮೇಲೆ ಅರಣ್ಯ ಇಲಾಖೆ ಉಪವಿಭಾಗ ಅಧಿಕಾರಿಗಳು ದಾಳಿ ನಡೆಸಿ, ಮನೆಯಲ್ಲಿದ್ದ ಬೇಟೆ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ, ಆರೋಪಿ ಮೆಹಮೂದ್ ಅಲಿಖಾನ್(50) ಪರಾರಿಯಾಗಿದ್ದಾನೆ.
ಮೆಹಮೂದ್ ಅಲಿಖಾನ್ ನೆಹರು ನಗರದಲ್ಲಿ ವಾಸವಾಗಿದ್ದ. ಕಿತ್ತೂರು ತಾಲೂಕಿನ ಕುಲ್ಲವಳ್ಳಿ ಅರಣ್ಯದಲ್ಲಿ ವನ್ಯ ಜೀವಿಗಳನ್ನು ಬೇಟೆಯಾಡುತ್ತಿದ್ದ. ನಾಗರಗಾಳಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ACF) ಸಿ.ಜಿ ಮಿರ್ಜಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿ ಮನೆಯಲ್ಲಿದ್ದ ಚಿಗರೆ ಕೊಂಬು, ಪಾಯಿಂಟ್ 315 ರೈಫಲ್, ಟೆಲಿಸ್ಕೋಪ್, 2 ಚಾಕು, 2 ವಾಕಿಟಾಕಿ ಹಾಗೂ 26 ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
Published On - 10:13 am, Mon, 4 January 21