ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ.. ಯೋಗೀಶ್ವರ್ ಜೇಬಿಗೆ ಕೈಹಾಕೋಕೆ ಆಗತ್ತಾ ಎಂದು ಕೇಳಿದ್ದೇಕೆ ಮಾಜಿ ಸಿಎಂ
ರಾಜಕೀಯ ಬಿಟ್ಟು ಗೌರವಯುತವಾಗಿ ಮನೆಯಲ್ಲಿ ಇರುವುದು ಉತ್ತಮ ಎಂದು ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಸಿ.ಪಿ.ಯೋಗೀಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸಿ.ಪಿ.ಯೋಗೀಶ್ವರ್ ವಿರುದ್ಧ, ಅವರ ಹೆಸರನ್ನು ಉಲ್ಲೇಖ ಮಾಡದೆ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಏನೋ ಮಾಡಿಬಿಡುತ್ತೇನೆ, ನಾಳೆ ಮಂತ್ರಿಯಾಗುತ್ತೇನೆ, ನಾಡಿದ್ದು ಮಂತ್ರಿಯಾಗುತ್ತೇನೆ ಎಂದು ಹೇಳಿ ಜನರನ್ನು ಸೆಳೆಯುತ್ತಿದ್ದಾರೆ.. ಇನ್ನೊಂದೆಡೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಅದ್ಯಾವುದೋ ಚೆನ್ನಪಟ್ಟಣ ಸಬ್ಇನ್ಸ್ಪೆಕ್ಟರ್ ವರ್ಗಾವಣೆಗೆ 30 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಇಷ್ಟೆಲ್ಲ ಹಣ ಕೊಟ್ಟು ಬಂದ ಅಧಿಕಾರಿ ಇನ್ನೇನು ಮಾಡುತ್ತಾರೆ? ಅವರು ಯೋಗೀಶ್ವರ್ ಜೇಬಿಗೆ ಕೈಹಾಕಲು ಸಾಧ್ಯವಾಗತ್ತಾ? ಇಲ್ಲ.. ಹಾಗಾಗಿ ಜನರ ಜೇಬಿಗೆ ಕೈಹಾಕುತ್ತಾರೆ.
ಇನ್ನೆಷ್ಟು ದಿನ ಹೀಗೆ ಹಣ ಸಂಪಾದನೆ ಮಾಡಬೇಕು. ಜೀವನದಲ್ಲಿ ಮನುಷ್ಯನಿಗೆ ದುಡ್ಡು ಬೇಕು. ಆದರೆ ಹೀಗೆಲ್ಲ ಹಗಲು ದರೋಡೆ ಮಾಡುವುದು ಸರಿಯಲ್ಲ. ಇಂಥ ರಾಜಕೀಯ ಬಿಟ್ಟು ಗೌರವಯುತವಾಗಿ ಮನೆಯಲ್ಲಿ ಇರುವುದು ಉತ್ತಮ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಡಿಕೆ ಚಹಾ ಕುಡಿದ ಮಾಜಿ ಸಿಎಂ ಇನ್ನು ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಹೋಗುವ ಮಾರ್ಗ ಮಧ್ಯೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಡಿಕೆಯಲ್ಲಿ ಚಹಾ ಕುಡಿದಿದ್ದಾರೆ. ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ, ಜೆಡಿಎಸ್ ಕಾರ್ಯಕರ್ತ ಪ್ರತಾಪ್ ಅವರ ಅಂಗಡಿಯಲ್ಲಿ ಟೀ ಕುಡಿದ ಕುಮಾರಸ್ವಾಮಿಗೆ ಮಾಗಡಿ ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು.
‘ನಾನು ಹೊನ್ನಾಳಿಯ ಅಂಜದ ಗಂಡು..‘ ಎನ್ನುತ್ತ ಯತ್ನಾಳ್ಗೆ ತಿರುಗೇಟು ನೀಡಿದ ಎಂ.ಪಿ.ರೇಣುಕಾಚಾರ್ಯ