‘ರಾಮಮಂದಿರ ಕಟ್ಟೋಕೆ 2,500 ಕೋಟಿ ಸಂಗ್ರಹ ಆಗಿದೆ; ಅದೇ ಒಂದು ಊರಿನಲ್ಲಿ ದೇವಸ್ಥಾನ ಕಟ್ಟೋಕೆ ನಮ್ಮಂಥವರ ಬಳಿ ಬರ್ತೀರಾ’

|

Updated on: Mar 14, 2021 | 6:14 PM

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟೋಕೆ 2,500 ಕೋಟಿ ದೇಣಿಗೆ ಸಂಗ್ರಹ ಆಗಿದೆ. ಅದೇ ಒಂದು ಊರಿನಲ್ಲಿ ದೇವಸ್ಥಾನ ಕಟ್ಟೋಕೆ ನಮ್ಮಂಥವರ ಬಳಿ ದೇಣಿಗೆಗೆ ಬರುತ್ತೀರಾ ಎಂದು ಕುಮಾರಸ್ವಾಮಿ ಹೇಳಿದರು.

‘ರಾಮಮಂದಿರ ಕಟ್ಟೋಕೆ 2,500 ಕೋಟಿ ಸಂಗ್ರಹ ಆಗಿದೆ; ಅದೇ ಒಂದು ಊರಿನಲ್ಲಿ ದೇವಸ್ಥಾನ ಕಟ್ಟೋಕೆ ನಮ್ಮಂಥವರ ಬಳಿ ಬರ್ತೀರಾ’
HD Kumaraswamy: ಮತ್ತೆ ಮುಖ್ಯಮಂತ್ರಿ ಆಗುವ ಅಭಿಲಾಷೆ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ
Follow us on

ಮಂಡ್ಯ: ಗ್ರಾ.ಪಂ. ಚುನಾವಣೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಒಬ್ಬೊಬ್ಬರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ಮೇಗಳಾಪುರ ಗೇಟ್ ಬಳಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರ ಜಿಲ್ಲೆಯ ಗ್ರಾಮವೊಂದರಲ್ಲಿ ಎಲೆಕ್ಷನ್​ಗೆ ಬರೋಬ್ಬರಿ 1 ಕೋಟಿ ಖರ್ಚು ಮಾಡಿದ್ದಾರೆ. ಹೆಚ್ಚು ಹಣ ಖರ್ಚು ಮಾಡಿದವನು ಗೆಲುವು ಪಡೆದಿದ್ದಾನೆ. ಹಣ ಇಲ್ಲದವರು ಚುನಾವಣೆಗೆ ಸ್ಪರ್ಧಿಸುವುದು ಕಷ್ಟ. ಸದ್ಯದ ಸ್ಥಿತಿಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವುದು ಕಷ್ಟ ಎಂದು ಕುಮಾರಸ್ವಾಮಿ ಹೇಳಿದರು.

ಜನ ಎಲ್ಲರ ಬಳಿ ದುಡ್ಡು ತಗೋತಾರೆ. ಆದರೆ, ಯಾರಿಗೆ ಓಟು ಹಾಕ್ತಾರೆ ಅಂತಾ ನಮಗೂ ಗೊತ್ತಾಗಲ್ಲ. ಮುಂದೆ ತಾ.ಪಂ ಚುನಾವಣೆ ಇದೆ. ಅದಕ್ಕೂ ಕೋಟಿ ಕೋಟಿ ಖರ್ಚು ಮಾಡುತ್ತಾರೆ. ಮೊದಲು ಜನರೇ ಹಣ ಕೊಟ್ಟು ಚುನಾವಣೆಗೆ ನಿಲ್ಲಿಸುತ್ತಿದ್ದರು. ಆದರೆ, ಈಗ ಒಂದು ಓಟಿಗೆ ಎಷ್ಟು ಕೊಡುತ್ತೀಯಾ ಎಂದು ಕೇಳ್ತಾರೆ ಎಂದು ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಜೊತೆಗೆ, ತೈಲ ಬೆಲೆ ಹೆಚ್ಚಾದ್ರೂ ವಾಹನಗಳ ಓಡಾಟ ಕಡಿಮೆ ಆಗಿಲ್ಲ. ಪೆಟ್ರೋಲ್​ ಲೀಟರ್​ಗೆ 100 ರೂ. ಆದರೂ ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಬೆಳವಣಿಗೆಗಳ ಕುರಿತು ಯುವಕರು ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಇದಲ್ಲದೆ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟೋಕೆ 2,500 ಕೋಟಿ ದೇಣಿಗೆ ಸಂಗ್ರಹ ಆಗಿದೆ. ಅದೇ ಒಂದು ಊರಿನಲ್ಲಿ ದೇವಸ್ಥಾನ ಕಟ್ಟೋಕೆ ನಮ್ಮಂಥವರ ಬಳಿ ದೇಣಿಗೆಗೆ ಬರುತ್ತೀರಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಲೆಡೀಸ್​ ಬೈಕ್​ ಱಲಿಯಲ್ಲಿ M.P.ರೇಣುಕಾಚಾರ್ಯ.. ಪತ್ನಿ ಜೊತೆ ಹೊನ್ನಾಳಿ ಶಾಸಕರ ಬಿಂದಾಸ್​ ಬೈಕ್ ಸವಾರಿ!

Published On - 6:12 pm, Sun, 14 March 21