ಪತ್ರಿಕಾ ಜಾಹಿರಾತು ವಿರುದ್ಧ ಮಾಜಿ ಸಚಿವ ಸುರೇಶ್ ಕುಮಾರ್ ಅಸಮಾಧಾನ; ಕೇಳಿಬಂತು ಜಾಹಿರಾತು ಬ್ಯಾನ್ಗೆ ಒತ್ತಾಯ
S Suresh kumar: ಮಾಜಿ ಸಚಿವ ಸುರೇಶ್ ಕುಮಾರ್ ಅವರ ಸಾಮಾಜಿಕ ಕಳಕಳಿಯ ಈ ಪ್ರಶ್ನೆಗೆ ಸಾರ್ವಜನಿಕವಾಗಿ ಅದಾಗಲೇ ಜನ ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಮಾಜಿ ಸಚಿವ ಸುರೇಶ್ ಕುಮಾರ್ ಅವರು ಎತ್ತಿರುವ ಪ್ರಶ್ನೆಯನ್ನು ಅನುಮೋದಿಸುತ್ತಾ ಜನ ಸಹ ಇಂತಹ ಜಾಹಿರಾತುಗಳು ಯುವಜನತೆಯನ್ನು ತಪ್ಪು ಹಾದಿಯತ್ತ ಪ್ರಚೋದಿಸುತ್ತದೆ ಎಂದು ಜಾಹೀರಾರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ದಿನ ಪತ್ರಿಕೆಯಲ್ಲಿ ಇಂದು ಮುಖಪುಟದಲ್ಲಿ ಒಂದು ಜಾಹಿರಾತು ಪ್ರಕಟವಾಗಿದ್ದು ಅದರ ವಿರುದ್ಧ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದ್ವಿಚಕ್ರ ವಾಹನ ಮಾರಾಟ ಕುರಿತಾದ ಜಾಹಿರಾತು ಇದಾಗಿದ್ದು, ಮಾಜಿ ಸಚಿವ ಸುರೇಶ್ ಕುಮಾರ್ ಜಾಹಿರಾತು ಬಗ್ಗೆ ಚಿತ್ರ ಸಮೇತ ತಮ್ಮ ಫೇಸ್ ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದು, ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇಂದು ಬೆಳಗ್ಗೆ ಈ ಜಾಹಿರಾತು ನೋಡಿದೆ. Wheeling ಮಾಡಲು ಹೋಗಿ ಆಗಿರುವ ಅನೇಕ ಅನಾಹುತಗಳು ನಮಗೆಲ್ಲರಿಗೂ ಗೊತ್ತು. Wheeling ಪ್ರಚೋದಿಸುವ ಈ ಜಾಹೀರಾತು ಬಗ್ಗೆ ತಮಗೆ ಏನು ಅನಿಸುತ್ತದೆ? ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಕಳಕಳಿಯ ಪ್ರಶ್ನೆ ಎತ್ತಿದ್ದಾರೆ.
ಮಾಜಿ ಸಚಿವ ಸುರೇಶ್ ಕುಮಾರ್ ಅವರ ಸಾಮಾಜಿಕ ಕಳಕಳಿಯ ಈ ಪ್ರಶ್ನೆಗೆ ಸಾರ್ವಜನಿಕವಾಗಿ ಅದಾಗಲೇ ಜನ ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಮಾಜಿ ಸಚಿವ ಸುರೇಶ್ ಕುಮಾರ್ ಅವರು ಎತ್ತಿರುವ ಪ್ರಶ್ನೆಯನ್ನು ಅನುಮೋದಿಸುತ್ತಾ ಜನ ಸಹ ಇಂತಹ ಜಾಹಿರಾತುಗಳು ಯುವಜನತೆಯನ್ನು ತಪ್ಪು ಹಾದಿಯತ್ತ ಪ್ರಚೋದಿಸುತ್ತದೆ ಎಂದು ಜಾಹೀರಾರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಮಾಜಿ ಸಚಿವರು ಎತ್ತಿರುವ ಈ ಪ್ರಶ್ನೆಯನ್ನೇ ಮೂಲಭೂತವಾಗಿ ಪ್ರಶ್ನಿಸಿದ್ದಾರೆ. ನಿಮ್ಮದೇ ಸರ್ಕಾರ ಇದೆ. ಇಂತಹ ಪ್ರಚೋದನಕಾರಿ ಜಾಹಿರಾತುಗಳಿಗೆ ಕಡಿವಾಣ ಹಾಕಬೇಕು. ನೀವೇ ಬ್ಯಾನ್ ಮಾಡಿಬಿಡಿ ಎಂದು ಜನ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಒಂದು ಹಂತದಲ್ಲಿ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್ ಅವರು Wheeling ಬ್ಯಾನ್ ಮಾಡಿದ್ದೇವಲ್ಲಾ? ಎಂದು ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಗರಂ ಆಗಿರುವ ಜನ, ಯುವಜನತೆಯನ್ನು ದಿಕ್ಕುತಪ್ಪಿಸುವ ಇಂತಹ ಪ್ರಚೋದನಕಾರಿ ಜಾಹಿರಾತುಗಳಿಗೆ ಕಡಿವಾಣ ಹಾಕಿ ಎಂದು ಒತ್ತಾಯಿಸಿದ್ದಾರೆ.
ಖುದ್ದು ಮಾಜಿ ಸಚಿವರೇ ಸಾಕ್ಷಿಪ್ರಜ್ಞೆಯಾಗಿ ಜ್ವಲಂತ ಸಮಸ್ಯೆಯ ಬಗ್ಗೆ ತಮ್ಮ ಅನಿಸಿಕೆ ವ್ತಕ್ತಪಡಿಸಿದ್ದಾರೆ. ಹಾಗಾಗಿ ಮುಂದಿನ ಬೆಳವಣಿಗೆಯಲ್ಲಿ ಇಂತಹ ಜಾಹಿರಾತಿಗೆ ಕಡಿವಾಣ ಬೀಳುತ್ತದಾ? ಅಥವಾ ಇಂತಹ ಸಾತ್ವಿಕ ಆಕ್ರೋಶಗಳು ತೋರಿಕೆಗಷ್ಟೇ ಸೀಮಿತವಾಗುತ್ತದಾ? ಕಾದು ನೋಡಬೇಕಿದೆ.
ಮಾಜಿ ಸಚಿವ ಸುರೇಶ್ ಕುಮಾರ್ Facebook ಪೋಸ್ಟ್ ಸಾರಾಂಶ ಹೀಗಿದೆ: ಇಂದು ಬೆಳಗ್ಗೆ ಈ ಜಾಹಿರಾತು ನೋಡಿದೆ. Wheeling ಮಾಡಲು ಹೋಗಿ ಆಗಿರುವ ಅನೇಕ ಅನಾಹುತಗಳು ನಮಗೆಲ್ಲರಿಗೂ ಗೊತ್ತು. Wheeling ಪ್ರಚೋದಿಸುವ ಈ ಜಾಹೀರಾತು ಬಗ್ಗೆ ತಮಗೆ ಏನು ಅನಿಸುತ್ತದೆ?
Published On - 9:02 am, Thu, 7 October 21