
ಬೆಂಗಳೂರು, ಮೇ 25): ನಿವೃತ್ತ ಡಿಜಿ, ಐಜಿಪಿ ಓಂಪ್ರಕಾಶ್ ಕೊಲೆ ಪ್ರಕರಣದ (Former Karnataka DGP Om Prakash murder case) ತನಿಖೆ ಬಹುತೇಕ ಕೊನೆ ಹಂತ ತಲುಪಿದ್ದು, ತನಿಖೆ ವೇಳೆ ಕೊಲೆಗೆ ಪ್ರಮುಖ ಕಾರಣಗಳನ್ನು ಪತ್ತೆ ಹಚ್ಚಿದೆ. ಕುಟುಂಬದ ಬಗ್ಗೆ ತೋರಿದ ನಿರ್ಲಕ್ಷ್ಯ, ತನ್ನ ಸ್ವಂತ ಕುಟುಂಬಕ್ಕಿಂತಲೂ ತಂಗಿ ಕುಟುಂಬಕ್ಕೆ ಓಂಪ್ರಕಾಶ್ ಹೆಚ್ಚು ಒತ್ತು ಕೊಡುತ್ತಿದ್ದರಂತೆ, ಮಗಳಿಗೆ ಮದುವೆ ಮಾಡ್ತಿಲ್ಲ. ಹೀಗೆ ಸಿಸಿಬಿ ಮಾಡಿದ ತನಿಖೆ ವೇಳೆ ಓಂಪ್ರಕಾಶ್ ಕೊಲೆಗೆ ಹಲವು ಕಾರಣಗಳು ಬಹಿರಂಗವಾಗಿದೆ. ಕೌಟುಂಬಿಕ ಕಾರಣಗಳಿಂದ ಪತಿ ಓಂಪ್ರಕಾಶ್ ಅವರನ್ನ ಪತ್ನಿ ಪಲ್ಲವಿ ಕ್ರೂರವಾಗಿ ಕೊಂದಿದ್ದಾರೆ.ಈ ಸಂಬಂಧ ಸಿಸಿಬಿ ತನಿಖೆ ವೇಳೆ ಸಿಕ್ಕ 9 ಕಾರಣಗಳು ಈ ಕೆಳಗಿನಂತಿವೆ.
ಇನ್ನು ಓಂಪ್ರಕಾಶ್ ಕೊಲೆ ಪ್ರಕರಣ ಸಂಬಂಧ ಸಿಸಿಬಿ ತನಿಖೆ ನಡೆಸಿದ್ದು, ಈ ವೇಳೆ ಪತ್ನಿ ಪಲ್ಲವಿ ಪತಿ ಓಂಪ್ರಕಾಶ್ ಅವರನ್ನು ಏಕೆ ಕ್ರೂವರಾಗಿ ಕೊಲೆ ಮಾಡಿದ್ದಾರೆ? ಇದಕ್ಕೆ ಕಾರಣವೇನು ಎನ್ನುವುದನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಒಟ್ಟು 9 ಕಾರಣಗಳು ಸಿಕ್ಕಿವೆ.
ಈ ಎಲ್ಲಾ ಕಾರಣಗಳಿಂದ ಗಂಡನ ಮೇಲೆ ಪಲ್ಲವಿಗೆ ದ್ವೇಷ ಹುಟ್ಟಿಸಿಕೊಂಡಿತು. ಅಲ್ಲದೇ ಎಲ್ಲಾ ವಿಚಾರಗಳಿಂದ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದರು. ಕೊನೆ ಓಂಪ್ರಕಾಶ್ ಅವರನ್ನು ಪತ್ನಿ ಪಲ್ಲವಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರ ತನಿಖೆ ವೇಳೆ ಈ ಎಲ್ಲಾ ಕಾರಣಗಳು ಸಿಕ್ಕಿವೆ.
ಹೀಗೆ ನಾನಾ ಕಾರಣಗಳಿಂದ ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿಯವರು 8 ರಿಂದ10 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಚಾಕು ಇರಿತದಿಂದ ಓಂ ಪ್ರಕಾಶ್ ಅವರ ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಇನ್ನು, ಹೊಟ್ಟೆ ಭಾಗಕ್ಕೆ ಸುಮಾರು 4-5 ಬಾರಿ ಚಾಕುವಿನಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಮನೆಯ ಪಡಸಾಲೆ ತುಂಬ ರಕ್ತ ಹರಿದಿದೆ. ಓಂ ಪ್ರಕಾಶ್ ಅವರು ಸುಮಾರು 15-20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಪತಿಯ ನರಳಾಟವನ್ನು ಪತ್ನಿ ಪಲ್ಲವಿ ನೋಡುತ್ತಾ ನಿಂತಿದ್ದರು ಎಂಬ ಮಾಹಿತಿ ದೊರೆತಿದೆ.