ಸ್ಮಾರ್ಟ್‌ ಸಿಟಿ ಕಳಪೆ ಕಾಮಗಾರಿ: ಡಕ್ಟಿಂಗ್ ಲೈನ್ ಸ್ಪೇಸರ್ಸ್‌ ಕೆಡವಿ ಶಿವಣ್ಣ ಗರಂ

ತುಮಕೂರು: ಸ್ಮಾರ್ಟ್‌ ಸಿಟಿ ಕಳಪೆ ಕಾಮಗಾರಿ ಕಂಡು ಮಾಜಿ ಸಚಿವ ಸೊಗಡು ಶಿವಣ್ಣ ಸಿಡಿದೆದ್ದಿದ್ದಾರೆ. ಅಶೋಕ ರಸ್ತೆಯ ಚರ್ಚ್ ಸರ್ಕಲ್‌ ಬಳಿಯಿರುವ ಡಕ್ಟಿಂಗ್ ಲೈನ್ ಸ್ಪೇಸರ್ಸ್‌ ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಡರಾತ್ರಿ ಡಕ್ಟಿಂಗ್ ಲೈನ್ ಸ್ಪೇಸರ್ಸ್​ಗಳಿಗೆ ಕ್ಯೂರಿಂಗ್ ಮಾಡದೇ ತರಾತುರಿಯಲ್ಲಿ ಪೈಪ್ ಅಳವಡಿಕೆ ಮಾಡುತ್ತಿದ್ದರು. ಇದನ್ನು ಕಂಡು ಕೆಂಡಾಮಂಡಲರಾದ ಸೊಗಡು ಶಿವಣ್ಣ, ಸ್ಪೇಸರ್ಸ್‌ ಕೆಡವಿ ನಿಜಬಣ್ಣ ಬಯಲು ಮಾಡಿದ್ದಾರೆ. ನಗರದಾದ್ಯಂತ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳದಲ್ಲಿದ್ದ ಇಂಜಿನಿಯರ್​ಗಳನ್ನ ತರಾಟೆ ತೆಗೆದುಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಅಧ್ಯಕ್ಷೆ ಶಾಲಿನಿ […]

ಸ್ಮಾರ್ಟ್‌ ಸಿಟಿ ಕಳಪೆ ಕಾಮಗಾರಿ: ಡಕ್ಟಿಂಗ್ ಲೈನ್ ಸ್ಪೇಸರ್ಸ್‌ ಕೆಡವಿ ಶಿವಣ್ಣ ಗರಂ
ಸಾಧು ಶ್ರೀನಾಥ್​

Updated on: Nov 30, 2019 | 10:18 AM

ತುಮಕೂರು: ಸ್ಮಾರ್ಟ್‌ ಸಿಟಿ ಕಳಪೆ ಕಾಮಗಾರಿ ಕಂಡು ಮಾಜಿ ಸಚಿವ ಸೊಗಡು ಶಿವಣ್ಣ ಸಿಡಿದೆದ್ದಿದ್ದಾರೆ. ಅಶೋಕ ರಸ್ತೆಯ ಚರ್ಚ್ ಸರ್ಕಲ್‌ ಬಳಿಯಿರುವ ಡಕ್ಟಿಂಗ್ ಲೈನ್ ಸ್ಪೇಸರ್ಸ್‌ ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಡರಾತ್ರಿ ಡಕ್ಟಿಂಗ್ ಲೈನ್ ಸ್ಪೇಸರ್ಸ್​ಗಳಿಗೆ ಕ್ಯೂರಿಂಗ್ ಮಾಡದೇ ತರಾತುರಿಯಲ್ಲಿ ಪೈಪ್ ಅಳವಡಿಕೆ ಮಾಡುತ್ತಿದ್ದರು. ಇದನ್ನು ಕಂಡು ಕೆಂಡಾಮಂಡಲರಾದ ಸೊಗಡು ಶಿವಣ್ಣ, ಸ್ಪೇಸರ್ಸ್‌ ಕೆಡವಿ ನಿಜಬಣ್ಣ ಬಯಲು ಮಾಡಿದ್ದಾರೆ. ನಗರದಾದ್ಯಂತ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳದಲ್ಲಿದ್ದ ಇಂಜಿನಿಯರ್​ಗಳನ್ನ ತರಾಟೆ ತೆಗೆದುಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಅಧ್ಯಕ್ಷೆ ಶಾಲಿನಿ ರಜನೀಶ್ ಅವರನ್ನ ಅಮಾನತು ಮಾಡುವಂತೆ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.

Published On - 9:57 am, Sat, 30 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us