ನೆಲಮಂಗಲ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ. ಈ ನಡುವೆ, ಸಮುದಾಯಕ್ಕೆ ಸೇರಿದ ರಾಜಕೀಯ ಮುಖಂಡರು ಹಾಗೂ ಇತರೆ ನಾಯಕರ ಮಧ್ಯೆ ಉದ್ಭವಿಸಿರುವ ವಾಕ್ಸಮರ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಮಧ್ಯೆ ನಿನ್ನೆ ನಡೆದ ಪರಸ್ಪರ ವಾಗ್ದಾಳಿ ಅಂತೂ ಸಿಕ್ಕಾಪಟ್ಟೆ ಅಟೆನ್ಷನ್ ಪಡೆದಿದೆ.
ಈ ನಡುವೆ, ಸಮುದಾಯದ ಸ್ವಾಮೀಜಿಗಳು ಮತ್ತು ಮುಖಂಡರು ಬೆಂಗಳೂರಿನತ್ತ ಪಾದಯಾತ್ರೆ ಬೆಳೆಸಿದ್ದು ಸದ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆ ತಲುಪಿದ್ದಾರೆ. ಪಟ್ಟಣದಲ್ಲಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ಪಾದಯಾತ್ರಿಗಳು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಸತತ ಪಾದಯಾತ್ರೆಯಿಂದ ದಣಿವಾದ ಬೆನ್ನಲ್ಲೇ ಕೊಂಚ ರಿಲಾಕ್ಸ್ ಆಗಲು ಸಮುದಾಯದವರು ಇಂದು ಸಾಯಂಕಾಲ ಕಲ್ಯಾಣ ಮಂಟಪದಲ್ಲಿ ಡ್ಯಾನ್ಸ್ ಮಾಡಿದರು. ಅದರಲ್ಲೂ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಸ್ಟೆಪ್ಸ್ ಅಂತೂ ಸೆಂಟರ್ ಆಫ್ ಅಟ್ರಾಕ್ಷನ್!
ಹೌದು, ಅಭಿಮಾನಿಗಳ ಒತ್ತಾಯದ ಮೇರೆಗೆ ಕಾಶಪ್ಪನವರ್ ಡ್ಯಾನ್ಸ್ ಮಾಡಿದರು. ತಮಟೆ ಸದ್ದಿಗೆ ಜಬರ್ದಸ್ತ್ ಸ್ಟೆಪ್ಸ್ ಹಾಕಿದರು. ಪಾದಯಾತ್ರೆಯ ಸಾರಥ್ಯ ವಹಿಸಿರುವ ಜಯಮೃತ್ಯುಂಜಯ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮಾಜಿ ಶಾಸಕ ಮತ್ತು ಅವರ ಅಭಿಮಾನಿಗಳ ಕುಣಿತ ಎಲ್ಲರ ಗಮನ ಸೆಳೆಯಿತು. ಈ ಮೂಲಕ, ಸತತ ಕಾಲ್ನಡಿಗೆಯಿಂದ ಆಯಾಸವಾಗಿದ್ದ ವಿಜಯಾನಂದ ಕಾಶಪ್ಪನವರ್ ಮತ್ತು ಅವರು ಬೆಂಬಲಿಗರು ದಣಿವು ನೀಗಿಸಿಕೊಂಡರು.
ಇದನ್ನೂ ಓದಿ: Siddaramaiah ‘ಜಾತಿ ವ್ಯವಸ್ಥೆ ಬಾವಿಯಲ್ಲಿನ ಕಸವಿದ್ದಂತೆ; ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ’