Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddaramaiah ‘ಜಾತಿ ವ್ಯವಸ್ಥೆ ಬಾವಿಯಲ್ಲಿನ ಕಸವಿದ್ದಂತೆ; ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ’

Siddaramaiah: ಜಾತಿ ವ್ಯವಸ್ಥೆ ಒಂದು ರೀತಿಯಲ್ಲಿ ಬಾವಿಯಲ್ಲಿನ ಕಸವಿದ್ದಂತೆ. ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ. ಇಂಥ ವ್ಯವಸ್ಥೆ ಸರಿ ಮಾಡಲು ಸೇವಾಲಾಲ್ ಪ್ರಯತ್ನಿಸಿದ್ದರು. ಸೇವಾಲಾಲ್ ಜಯಂತಿ ಮಾಡಲು ನಾನೇ ಆದೇಶ ಮಾಡಿದ್ದು. ಜಯಂತಿ ಮಾಡಿದ್ರೆ ಸಾಲದು ಅವ್ರು ಹೇಳಿದಂತೆ ನಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು

Siddaramaiah ‘ಜಾತಿ ವ್ಯವಸ್ಥೆ ಬಾವಿಯಲ್ಲಿನ ಕಸವಿದ್ದಂತೆ; ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ’
ಸಿದ್ದರಾಮಯ್ಯ
Follow us
KUSHAL V
|

Updated on: Feb 14, 2021 | 8:24 PM

ದಾವಣಗೆರೆ: ತಾಂಡಾಗಳನ್ನ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಾನು. ಈ ಬಗ್ಗೆ ಯಾರೋ ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದಲ್ಲಿ ನಡೆದ ಸಂತ ಸೇವಾಲಾಲ್​ ಜಾತ್ರೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿದರು.

ಕಂದಾಯ ಸಚಿವರಾಗಿದ್ದಾಗ ಕಾಗೋಡು ತಿಮ್ಮಪ್ಪ ವಾಸಿಸುವವನೇ ನೆಲದ ಒಡೆಯ ಎಂದು ಜಾರಿ ಮಾಡಿದ್ದರು. ದೇವರಾಜ ಅರಸು ಮಾದರಿಯಲ್ಲಿ ಯೋಜನೆ ಜಾರಿಗೊಳಿಸಿದ್ರು. ಆದ್ರೆ, ಈಗ ಕಂದಾಯ ಗ್ರಾಮ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

‘ಲಂಬಾಣಿ ಜನಾಂಗದವರು ಬಡವರು, ಆದ್ರೆ ಸ್ವಾಭಿಮಾನಿಗಳು’ ಸೇವಾಲಾಲ್ ಪುಣ್ಯಕ್ಷೇತ್ರಕ್ಕೆ ನಾನು 50 ಕೋಟಿ ರೂ. ನೀಡಿದ್ದೆ. ನಾನು ಸಿಎಂ ಆಗಿದ್ದಾಗ ಹಣ ಮಂಜೂರು ಮಾಡಿದ್ದೆ. ಲಂಬಾಣಿ ಜನಾಂಗದವರು ಅಲೆಮಾರಿಗಳು, ಬಡವರು, ಆದ್ರೆ ಸ್ವಾಭಿಮಾನಿಗಳು. ಮತ್ತೊಬ್ಬರ ಹಂಗಿನಲ್ಲಿ ‌ಬದುಕಲ್ಲ ಎಂದು ಹೇಳಿದರು. ನಾನು ಕುರುಬರ ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಹಾಗಿದ್ದರೆ ಬೇಕಾದ ಜಾತಿಯಲ್ಲಿ ಹುಟ್ಟುತ್ತಿದ್ದೆ. ಶಾಸಕ ರೇಣುಕಾಚಾರ್ಯ ಜಂಗಮ ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಯಾರೂ ಅವರ ಕಾಲಿಗೆ ನಮಸ್ಕಾರ ಮಾಡಿ ಎಂದು ಯಾರಾದ್ರು ಹೇಳಿದ್ರಾ? ಬಸವಣ್ಣನವರು ಇವನಾರವ್ವ ಎನ್ನಲಿಲ್ಲ. ನಮ್ಮವ ಎಂದು ಹೇಳಿದರು. ಆದರೆ, ಇದು ಜಾರಿಗೆ ಬಂದಿದ್ಯಾ ರೇಣುಕಾಚಾರ್ಯ, ಹೇಳಪ್ಪಾ ಎಂದು ವೇದಿಕೆ ಮೇಲೆ ಕೂತಿದ್ದ ಶಾಸಕರಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

‘ಜಾತಿ ವ್ಯವಸ್ಥೆ ಒಂದು ರೀತಿಯಲ್ಲಿ ಬಾವಿಯಲ್ಲಿನ ಕಸವಿದ್ದಂತೆ’ ಜಾತಿ ವ್ಯವಸ್ಥೆ ಒಂದು ರೀತಿಯಲ್ಲಿ ಬಾವಿಯಲ್ಲಿನ ಕಸವಿದ್ದಂತೆ. ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ. ಇಂಥ ವ್ಯವಸ್ಥೆ ಸರಿ ಮಾಡಲು ಸೇವಾಲಾಲ್ ಪ್ರಯತ್ನಿಸಿದ್ದರು. ಸೇವಾಲಾಲ್ ಜಯಂತಿ ಮಾಡಲು ನಾನೇ ಆದೇಶ ಮಾಡಿದ್ದು. ಜಯಂತಿ ಮಾಡಿದ್ರೆ ಸಾಲದು ಅವ್ರು ಹೇಳಿದಂತೆ ನಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ತಾಂಡಾ ಅಭಿವೃದ್ಧಿ ನಿಗಮಕ್ಕೆ ಕೇವಲ 20 ಕೋಟಿ ಹಣ ಇತ್ತು. ಆದ್ರೆ ನಾನು ಸಿಎಂ ಆದಾಗ 160 ಕೋಟಿ ರೂಪಾಯಿ ನೀಡಿದ್ದೆ. ಲಂಬಾಣಿ ಸಮುದಾಯಕ್ಕೆ ಮೆಡಿಕಲ್ ಕಾಲೇಜು ನೀಡಲಿ. ಇದು ಆಗದಿದ್ದರೆ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತೇವೆ ಎಂದು ಸಂತ ಸೇವಾಲಾಲ್​ ಜಾತ್ರೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿದರು.

‘7 ಕೆಜಿ ಅಕ್ಕಿಯನ್ನು ನಾನು ನಮ್ಮಪ್ಪನ ಮನೆಯಿಂದ ಕೊಟ್ಟಿಲ್ಲ’ 7 ಕೆಜಿ ಅಕ್ಕಿಯನ್ನು ನಾನು ನಮ್ಮಪ್ಪನ ಮನೆಯಿಂದ ಕೊಟ್ಟಿಲ್ಲ. ಈಗಿರುವವರು ಕೊಟ್ಟರೂ ಅವರಪ್ಪನ ಮನೆಯಿಂದ ಕೊಡಲ್ಲ. ಬೇಕಾದಕ್ಕೆ 500 ಕೋಟಿ ನೀಡಿ ಕಾರ್ಯಕ್ರಮ ಮಾಡುತ್ತೀರಿ. ಬಡವರಿಗೆ ಅಕ್ಕಿ ಕೊಡಲು ಮುಂದೆ ಬನ್ನಿ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದರು.

‘ಇಂದಿರಾ ಕ್ಯಾಂಟೀನ್​ ಮುಚ್ಚೋಕೆ ಪ್ಲಾನ್​ ಮಾಡ್ತಿದ್ದೀರಾ, ಯಾಕಪ್ಪಾ ರೇಣುಕಾಚಾರ್ಯ?’ ಈ ನಡುವೆ, ಇಂದಿರಾ ಕ್ಯಾಂಟೀನ್​ ಮುಚ್ಚೋಕೆ ಪ್ಲಾನ್​ ಮಾಡ್ತಿದ್ದೀರಾ, Why? ಯಾಕಪ್ಪಾ ರೇಣುಕಾಚಾರ್ಯ? Why? ಎಂದು ವೇದಿಕೆಯಲ್ಲಿದ್ದ ಶಾಸಕರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ಇದರಿಂದ ಇಡೀ ಸಭೆ ನಗೆಗಡಲಲ್ಲಿ ತೇಲಿಹೋಯಿತು. ಬಳಿಕ ತಮ್ಮ ಭಾಷಣ ಮುಂದುವರಿಸಿದ ಸಿದ್ದರಾಮಯ್ಯ ಸಂವಿಧಾನದ ಅನುಷ್ಠಾನ ಯೋಗ್ಯರ ಕೈಯಲ್ಲಿ ಇರಬೇಕು. ಸಂವಿಧಾನದಿಂದ ಮತದಾನದ ಹಕ್ಕು ಬಂದಿದೆ‌. ಆದ್ರೆ ಅದರಿಂದ ಉದ್ಧಾರ ಆಗಲ್ಲ. ಆರ್ಥಿಕ ಶಕ್ತಿ, ಶಿಕ್ಷಣದ ಅಗತ್ಯವಿದೆ. ಜೊತೆಗೆ, ಕೆಟ್ಟ ಚಟಗಳಿಂದ ಮುಕ್ತರಾಗಿ, ಸೇವಾಲಾಲ್ ಮಾರ್ಗದಲ್ಲಿ ನಡೆಯಿರಿ. ಸೇವಾಲಾಲ್ ಅವರನ್ನ ನೆನಪಿಸಿಕೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ: Siddaramaiah ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ -ಶಾಸಕ ರಾಘವೇಂದ್ರ ಹಿಟ್ನಾಳ್ ಖಡಕ್​ ಬಾತ್​

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ