ಮನೆಯಲ್ಲಿ TV, ಬೈಕ್, ಫ್ರಿಡ್ಜ್ ಹೊಂದಿರುವವರು.. BPL ಕಾರ್ಡ್​ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ -ಸಚಿವ ಉಮೇಶ್​ ಕತ್ತಿ

BPL card: 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವರು, ಮನೆಯಲ್ಲಿ ಟಿವಿ, ಬೈಕ್ ಹಾಗೂ ಫ್ರಿಡ್ಜ್ ಹೊಂದಿರುವವರು BPL ಕಾರ್ಡ್​ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ ಎಂದು ಆಹಾರ ಸಚಿವ ಉಮೇಶ್​ ಕತ್ತಿ ಪ್ರತಿಕ್ರಿಯಿಸಿದ್ದಾರೆ. ಈ ಎಲ್ಲಾ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಹೊಂದಿದ್ದು ಜೊತೆಗೆ BPL ಕಾರ್ಡ್​ ಹೊಂದಿದ್ದರೆ ಕೂಡಲೇ ಕಾರ್ಡ್​ ಹಿಂದಿರುಗಿಸಿ ಎಂದು ಆಹಾರ ಸಚಿವ ಉಮೇಶ್​ ಕತ್ತಿ ಹೇಳಿದ್ದಾರೆ.

  • TV9 Web Team
  • Published On - 23:28 PM, 14 Feb 2021
ಮನೆಯಲ್ಲಿ TV, ಬೈಕ್, ಫ್ರಿಡ್ಜ್ ಹೊಂದಿರುವವರು.. BPL ಕಾರ್ಡ್​ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ -ಸಚಿವ ಉಮೇಶ್​ ಕತ್ತಿ
ಉಮೇಶ್​ ಕತ್ತಿ

ಬೆಳಗಾವಿ: 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವರು, ಮನೆಯಲ್ಲಿ ಟಿವಿ, ಬೈಕ್ ಹಾಗೂ ಫ್ರಿಡ್ಜ್ ಹೊಂದಿರುವವರು BPL ಕಾರ್ಡ್​ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ ಎಂದು ಆಹಾರ ಸಚಿವ ಉಮೇಶ್​ ಕತ್ತಿ ಪ್ರತಿಕ್ರಿಯಿಸಿದ್ದಾರೆ. ಈ ಎಲ್ಲಾ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಹೊಂದಿದ್ದು ಜೊತೆಗೆ BPL ಕಾರ್ಡ್​ ಹೊಂದಿದ್ದರೆ ಕೂಡಲೇ ಕಾರ್ಡ್​ ಹಿಂದಿರುಗಿಸಿ ಎಂದು ಆಹಾರ ಸಚಿವ ಉಮೇಶ್​ ಕತ್ತಿ ಹೇಳಿದ್ದಾರೆ.

ಇದಲ್ಲದೆ, ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಹಾಗೂ 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು BPL ಕಾರ್ಡ್ ಹೊಂದಲು ಸಾಧ್ಯವಿಲ್ಲ ಎಂದು ಸಹ ಹೇಳಿದರು. ಇಂಥ BPL ಕಾರ್ಡ್​​ಗಳನ್ನ ಮಾ.31ರೊಳಗೆ ಹಿಂದಿರುಗಿಸಬೇಕು. ಇಲ್ಲದಿದ್ರೆ ನಾವೇ ಸರ್ವೆ ಮಾಡಿ ವಾಪಸ್​ ಪಡೆಯುತ್ತೇವೆ ಎಂದು ಆಹಾರ ಸಚಿವ ಉಮೇಶ್​ ಕತ್ತಿ ಹೇಳಿದರು.

ಇದನ್ನೂ ಓದಿ: LPG Cylinder Price Hike: ಇಂದು ಮಧ್ಯರಾತ್ರಿಯಿಂದಲೇ ಅಡುಗೆ ಅನಿಲ ಸಿಲಿಂಡರ್ ತುಟ್ಟಿ