ವಿವಿ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿವಿ ಪ್ರಾಧ್ಯಾಪಕರಿಗೆ ಪಂಗನಾಮ: ರಾಮಸೇನಾ ಸಂಸ್ಥಾಪಕ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Mar 29, 2021 | 5:39 PM

ಈ ಹಿಂದೆ ಶ್ರೀರಾಮಸೇನೆ ರಾಜ್ಯ ಸಂಚಾಲಕನಾಗಿದ್ದ ಪ್ರಸಾದ್, ನಂತರ ಶ್ರೀರಾಮಸೇನೆಯಿಂದ ಹೊರಬಂದು ‘ರಾಮಸೇನಾ ಸಂಘಟನೆ’ಯನ್ನು ಕಟ್ಟಿಕೊಂಡಿದ್ದರು. ಅವರ ಮೇಲೆ ಮಂಗಳೂರು ಉತ್ತರ, ಪೂರ್ವ ಠಾಣೆಗಳಲ್ಲಿ ಪ್ರಕರಣಗಳು ಈಗಾಗಲೇ ದಾಖಲಾಗಿದ್ದವು ಎಂದು ತಿಳಿದುಬಂದಿದೆ.

ವಿವಿ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿವಿ ಪ್ರಾಧ್ಯಾಪಕರಿಗೆ ಪಂಗನಾಮ: ರಾಮಸೇನಾ ಸಂಸ್ಥಾಪಕ ಅರೆಸ್ಟ್
ಆರೋಪಿ ಪ್ರಸಾದ್ ಅತ್ತಾವರ್
Follow us on

ಮಂಗಳೂರು:  ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಕೊಡಿಸುವುದಾಗಿ 17.5 ಲಕ್ಷ ಹಣ ಪಡೆದು ವಂಚಿಸಿದ ಆರೋಪದಡಿ 41 ವರ್ಷದ ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಎಂಬ ವ್ಯಕ್ತಿಯನ್ನು ಮಂಗಳೂರಿನ ಕಂಕನಾಡಿ ಟೌನ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕೆಲವು ಪ್ರಾಧ್ಯಾಪಕರಿಗೆ ರಾಯಚೂರು ವಿವಿ ಕುಲಪತಿ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಪ್ರಸಾದ್ ಅತ್ತಾವರ​ನ ಬಂಧನವಾಗಿದೆ.

30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪ್ರಸಾದ್ ಅತ್ತಾವರಗೆ ಈಗಾಗಲೇ 17.5 ಲಕ್ಷ ಪಡೆದಿದ್ದರು. ಪ್ರಾಧ್ಯಾಪಕರುಗಳಿಗೆ ಗಣ್ಯ ವ್ಯಕ್ತಿಗಳ ಜತೆಗಿದ್ದ ಫೋಟೋಗಳನ್ನು ತೋರಿಸಿ ನನಗೆ ಇವರ ಪರಿಚಯವಿದೆ ಎಂದು ನಂಬಿಸುತ್ತಿದ್ದ ಆರೋಪ ಪ್ರಸಾದ್ ಮೇಲಿದೆ. ಈ ಮೂಲಕ ವಿಶ್ವವಿದ್ಯಾಲಯದ ಹುದ್ದೆ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ. 17.5 ಲಕ್ಷ ಹಣ ನೀಡಿದ್ದರೂ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಕೊಡಿಸದ ಹಿನ್ನೆಲೆಯಲ್ಲಿ ಹಣ ವಾಪಸ್ ಕೇಳಿದ್ದಕ್ಕೆ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿವೇಕ್ ಆಚಾರ್ಯ ಎಂಬುವವರ ದೂರಿನ ಮೇರೆಗೆ ಪ್ರಸಾದ್ ಅತ್ತಾವರ ಬಂಧನವಾಗಿದೆ.

ಈ ಹಿಂದೆ ಶ್ರೀರಾಮಸೇನೆ ರಾಜ್ಯ ಸಂಚಾಲಕನಾಗಿದ್ದ ಪ್ರಸಾದ್, ನಂತರ ಶ್ರೀರಾಮಸೇನೆಯಿಂದ ಹೊರಬಂದು ‘ರಾಮಸೇನಾ ಸಂಘಟನೆ’ಯನ್ನು ಕಟ್ಟಿಕೊಂಡಿದ್ದರು.  ಪ್ರಸಾದ್ ಅತ್ತಾವರ ಮೇಲೆ ಮಂಗಳೂರು ಉತ್ತರ, ಪೂರ್ವ ಠಾಣೆಗಳಲ್ಲಿ ಪ್ರಕರಣಗಳು ಈಗಾಗಲೇ ದಾಖಲಾಗಿದ್ದವು ಎಂದು ತಿಳಿದುಬಂದಿದೆ. ಈ ಕುರಿತು ಇನ್ನಷ್ಟು ತನಿಖೆ ನಡೆಯಬೇಕಿದ್ದು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಎಚ್ಚೆತ್ತುಕೊಳ್ಳಬೇಕಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ

ಇದನ್ನೂ ಓದಿ: ಆಕೆಯ ಉಂಗುರವೇ ಮೂಗಿಗೆ ತಾಗಿ ಗಾಯವಾಗಿದೆ; ನಾನೀಗ ಬಂಧನದಿಂದ ಪಾರಾಗಲು 25 ಸಾವಿರ ರೂ ಖರ್ಚು ಮಾಡಬೇಕು

ಹನಿಟ್ರ್ಯಾಪ್​ ಮಾಡುತ್ತಿದ್ದ ಮಂಗಳೂರು ಹುಡುಗಿಯರನ್ನು ಬಲೆಗೆ ಬೀಳಿಸಿದ ಸುರತ್ಕಲ್​ ಪೊಲೀಸರು

ಕಾರ್ಯಗತವಾದ ಕೊಚ್ಚಿ-ಮಂಗಳೂರು ಅನಿಲ ಪೈಪ್ ಲೈನ್.. ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ