ಸಿಡಿ ಲೇಡಿಯ ಭದ್ರತೆಗಾಗಿ 8 ಸಿಬ್ಬಂದಿಗಳ ವಿಶೇಷ ಮಹಿಳಾ ತಂಡ ರಚನೆ; ಯುವತಿ ಇಂದೇ ಕೋರ್ಟ್​ಗೆ ಹಾಜರಾಗುವ ಸಂಭವ

ಸರ್ಕಾರಿ ಗೆಜೆಟ್ ಆದೇಶವಿಲ್ಲದೇ ಎಸ್ಐಟಿ ರಚಿಸಲಾಗಿದೆ. ಸದಾಶಿವನಗರ, ಕಬ್ಬನ್​ಪಾರ್ಕ್ ಪೊಲೀಸರೇ ತನಿಖೆ ನಡೆಸಬೇಕು. ಈ ಬಗ್ಗೆ ನಿರ್ದೇಶನ ನೀಡುವಂತೆ ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಸಲಾಗಿದೆ.

ಸಿಡಿ ಲೇಡಿಯ ಭದ್ರತೆಗಾಗಿ 8 ಸಿಬ್ಬಂದಿಗಳ ವಿಶೇಷ ಮಹಿಳಾ ತಂಡ ರಚನೆ; ಯುವತಿ ಇಂದೇ ಕೋರ್ಟ್​ಗೆ ಹಾಜರಾಗುವ ಸಂಭವ
ಸಿಡಿಯಲ್ಲಿರುವ ಯುವತಿ ಮತ್ತು ವಕೀಲ ಜಗದೀಶ್
Follow us
guruganesh bhat
|

Updated on:Mar 29, 2021 | 4:49 PM

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ನ್ಯಾಯಾಲಯಕ್ಕೆ ಹಾಜರಾಗಲು ನ್ಯಾಯಾಲಯ ಅನುಮತಿ ನೀಡಿದೆ. ಕೆಲವೇ ಹೊತ್ತಿನಲ್ಲಿ ಯುವತಿ ಎಸಿಎಂಎಂ ನ್ಯಾಯಾಲಯಕ್ಕೆ ಯುವತಿ ಹಾಜರಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಸಿಡಿ ಲೇಡಿಯ ಭದ್ರತೆಗಾಗಿ ಓರ್ವ ಮಹಿಳಾ ಸಬ್ ಇನ್ಸ್ಪೆಕ್ಟರ್ ಸೇರಿದಂತೆ 8 ಮಹಿಳಾ ಪೊಲೀಸರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಯುವತಿ ವಿಚಾರಣೆಗೆ ಹಾಜರಾಗಲು ಭದ್ರತೆಯ ಕುರಿತು ಅಪಸ್ವರವೆತ್ತಿದ್ದ ಕಾರಣ, ಸೂಕ್ತ ಭದ್ರತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಯುವತಿ ಹೇಳಿದಲ್ಲಿ ತೆರಳಿ ಭದ್ರತೆ ನೀಡಲು, ಹೇಳಿಕೆ ದಾಖಲಿಸಲು ವಿಶೇಷ ತಂಡ ಸಿದ್ಧವಾಗಿದೆ ಎನ್ನಲಾಗಿದೆ. ಒಂದು ವೇಳೆ ಆಕೆಯೇ ನೇರವಾಗಿ ಹಾಜರಾದರೂ ಮಹಿಳಾ ಸಿಬ್ಬಂದಿಗಳನ್ನೇ ಹೊಂದಿರುವ ವಿಶೇಷ ತನಿಖಾ ತಂಡ ಭದ್ರತೆ ಒದಗಿಸಲಿದೆ. ಯುವತಿ ಇಂದೇ ಕೋರ್ಟ್​ಗೆ ಹಾಜರಾಗುವ  ಸಂಭವ ಹೆಚ್ಚಿರುವ ಕಾರಣ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಭದ್ರತೆ ಹೆಚ್ಚಿಸಲಾಗಿದೆ.

ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ಹಿನ್ನೆಲೆಯಲ್ಲಿ ಎಸ್ಐಟಿ ರದ್ದು ಕೋರಿ ಹೈಕೋರ್ಟ್​ಗೆ ವಕೀಲೆ ಗೀತಾ ಮಿಶ್ರಾ ಎಂಬುವವರು ಪಿಐಎಲ್ ಸಲ್ಲಿಸಲಿದ್ದಾರೆ. ಸರ್ಕಾರಿ ಗೆಜೆಟ್ ಆದೇಶವಿಲ್ಲದೇ ಎಸ್ಐಟಿ ರಚಿಸಲಾಗಿದೆ. ಸದಾಶಿವನಗರ, ಕಬ್ಬನ್​ಪಾರ್ಕ್ ಪೊಲೀಸರೇ ತನಿಖೆ ನಡೆಸಬೇಕು. ಈ ಬಗ್ಗೆ ನಿರ್ದೇಶನ ನೀಡುವಂತೆ ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಸಲಾಗಿದೆ.

ಇದನ್ನೂ ಓದಿ: ಕಾಲ್​ ಬಗ್ಗೆ ಗೊತ್ತಿಲ್ಲ ಎಂದು ಜಾರಿಕೊಂಡ ಜಾರಕಿಹೊಳಿಗೆ, ಕಾಲ್​ ಡಿಟೈಲ್ಸ್​ ತೋರಿಸಿ ಶಾಕ್​ ಕೊಟ್ಟ ಎಸ್​ಐಟಿ ಅಧಿಕಾರಿಗಳು

ಸಿಡಿ ಆರೋಪಿ ರಮೇಶ್ ಜಾರಕಿಹೊಳಿ ಬಂಧನ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ; ನಲಪಾಡ್ ಹ್ಯಾರಿಸ್ ಬಂಧನ

Published On - 4:44 pm, Mon, 29 March 21

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ