AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bedara Vesha 2021 Photos: ಶಿರಸಿ ನಗರವನ್ನು ರಂಗು ರಂಗಾಗಿಸಿತು ಅಪ್ಪಟ ಜನಪದ ಶೈಲಿಯ ಬೇಡರ ವೇಷ

ತನ್ನ ಜೀವನದ ಹಂಗು ತೊರೆದು ಬಡ ಜನರಿಗೆ ಸಹಾಯ ಮಾಡುತ್ತಿದ್ದ ಮತ್ತು ತಿಳಿದೋ ತಿಳಿಯದೆಯೋ ಶ್ರೀ ಮಾರಿಕಾಂಬೆಯನ್ನು ಶಿರಸಿಗೆ ತಂದುಕೊಟ್ಟ ಬೇಡರ ಭರಮನ ನೆನಪಿಗಾಗಿ ಅಂದಿನಿಂದ ಇಂದಿನವರಿಗೂ ಬೇಡರ ವೇಷ ಮಾಡಲಾಗುತ್ತೆ. ಜಗತ್ತಿನಲ್ಲೇ ಬೇರೆಲ್ಲೂ ಕಾಣದ ವಿಶಿಷ್ಟ ಅದ್ಭುತವಾದ ಜಾನಪದ ಕಲೆ ಇದಾಗಿದೆ.

ಆಯೇಷಾ ಬಾನು
ಆಯೇಷಾ ಬಾನು| Edited By: |

Updated on: Mar 29, 2021 | 8:04 PM

Share
ಗರಿಗಳ ಪದರು, ಗೆಜ್ಜೆ, ದಪ್ಪ ಮೀಸೆ, ಕೆಂಪು ಬಟ್ಟೆ, ಕತ್ತಿ, ಕೈಗೆ ನಿಂಬೆ ಹಣ್ಣು ಕಟ್ಟಿಕೊಂಡು ನಗರದ ಬೀದಿಗಳಲ್ಲಿ ಢನ್ಕ ನಕ ಢನ್ಕ ನಕ ಶಬ್ಧಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರ ಮಧ್ಯೆ ಕತ್ತಿ ಬೀಸುತ್ತ ಜನರನ್ನು ಪುಳಕಿತರನ್ನಾಗಿಸುತ್ತಾರೆ.

1 / 7
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಪುಳಕಿತಗೊಳಿಸುವ ಜನಪದ ಕಲೆ ಬೇಡರ ವೇಷ

2 / 7
ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಬೀದಿ ಬೀದಿಗಳಲ್ಲಿ ಸಂಚರಿಸುವ ಬೇಡರ ವೇಷಧಾರಿ ನೃತ್ಯ ಮಾಡಿ ತನ್ನ ರೌದ್ರ ರೂಪದ ದರ್ಶನ ಮಾಡಿಸುತ್ತಾರೆ.ಝೇಂಕರಿಸುತ್ತ, ರೌದ್ರ ರೂಪ ತೋರಿಸುವ ಬೇಡ ವೇಷಧಾರಿ ನಗರವಿಡೀ ಸಂಚರಿಸಿ ಗಲ್ಲಿ ಗಲ್ಲಿಯಲ್ಲಿ ನೃತ್ಯ ಮಾಡುವುದು ಕಷ್ಟಕರವಾದ ಕೆಲಸ. ಹೀಗಾಗಿ ಒಂದು ತಿಂಗಳ ಹಿಂದೆಯಿಂದಲೇ ಇದಕ್ಕೆ ತಾಲೀಮು ಶುರುವಾಗುತ್ತೆ.

3 / 7
ಬೇಡರ ಭರಮನು ರೌದ್ರ ರೂಪದಿ ವೀರಾವೇಶದಿಂದ ಸೈನಿಕರ ಬಳಿ ಇದ್ದ ಖಡ್ಗ ಹಿಡಿದು ನನಗೆ ಮೋಸ ಮಾಡಿ ಹಿಡಿದು ಕೊಡ್ತೀಯಾ ನಿನ್ನನ್ನು ಬಿಡಲಾರೆ ಕೊಂದೇ ಹಾಕುವೆ ಎಂದು ಆವೇಶದಲ್ಲಿ ಸೈನಿಕರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತ ಮುದುಕಿಯ ಕಡೆ ಹೋಗುವ ರೌದ್ರ ರೂಪವೇ ಬೇಡರ ವೇಷ

4 / 7
ಹೋಳಿ ಹಬ್ಬದ ನಾಲ್ಕುದಿನ ಹಿಂದೆಯಿಂದಲೇ ಶುರುವಾಗುವ ಬೇಡರ ಕುಣಿತ ಹೋಳಿ ಹಬ್ಬದಂದು ಬಣ್ಣಗಳ ಹಬ್ಬದ ಮೂಲಕ ಮುತ್ತಾಯಗೊಳುತ್ತೆ.

5 / 7
ಬೇಡರ ವೇಷಕ್ಕೆ ಸಿದ್ಧವಾಗುವುದು ಸುಲಭದ ಕೆಲಸವಲ್ಲ. ಅಪ್ಪಟ ಜನಪದ ಶೈಲಿಯ ಈ ವೇಷಕ್ಕೆ ಬಣ್ಣ ಹಚ್ಚಲು ಮುಸ್ಸಂಜೆಯಿಂದ ರಾತ್ರಿಯ ವರೆಗೂ ಸಮಯ ಬೇಕಾಗುತ್ತೆ. ಬಹಳ ವರ್ಷಗಳಿಂದ ಬಣ್ಣ ಹಚ್ಚುವ ಕಲಾವಿದರು ಮಾತ್ರ ಈ ಕೆಲಸವನ್ನು ಮಾಡಲು ಸಾಧ್ಯ.

6 / 7
ಇಡೀ ದೇಶ ಹೋಳಿ ಹಬ್ಬವನ್ನು ಬಣ್ಣಗಳಿಂದ ಮಿಂದು ಆಚರಿಸಿದ್ರೆ, ಶಿರಸಿಯಲ್ಲಿ ಒಂದುವಾರದ ಹಿಂದೆಯಿಂದಲೇ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತೆ. ಜನರೆಲ್ಲ ಚಂದ್ರನ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ಕತ್ತಲಾಗುತ್ತಿದ್ದಂತೆ ಬೇರೆಯ ಪ್ರಪಂಚವೇ ತೆರೆದುಕೊಳ್ಳುತ್ತೆ. ಬೇಡರ ವೇಷಧಾರಿಯ ರೌದ್ರ ನರ್ತನ ನಗರವನ್ನು ರಂಗುಗೊಳಿಸುತ್ತೆ.

Bedara vesha 2021 History and interesting facts of 300 year old Bedara vesha which held in sirsi

7 / 7
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್

ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ

ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ

ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ

Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ

‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ

ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ

ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು