AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕೆಯ ಉಂಗುರವೇ ಮೂಗಿಗೆ ತಾಗಿ ಗಾಯವಾಗಿದೆ; ನಾನೀಗ ಬಂಧನದಿಂದ ಪಾರಾಗಲು 25 ಸಾವಿರ ರೂ ಖರ್ಚು ಮಾಡಬೇಕು

ಟ್ರಾಫಿಕ್​ ಸಮಸ್ಯೆ ಮತ್ತು ಹದಗೆಟ್ಟ ರಸ್ತೆಯ ಕಾರಣ ಆರ್ಡರ್​ ತಲುಪಿಸುವುದು ತಡವಾಗಿತ್ತು. ಅಲ್ಲಿಗೆ ಹೋದಾಗ ಸಿಟ್ಟಾಗಿದ್ದ ಯುವತಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಚಪ್ಪಲಿಯಿಂದ ಹೊಡೆದರು. ಅಂತೆಯೇ, ಹಲ್ಲೆ ಮಾಡಲು ಮುಂದಾದಾಗ ಆಕಸ್ಮಿಕವಾಗಿ ಆಕೆ ತನ್ನ ಮೂಗಿಗೆ ತಾನೇ ಏಟು ಮಾಡಿಕೊಂಡ ಕಾರಣ ಗಾಯವಾಗಿ ರಕ್ತ ಒಸರಲಾರಂಭಿಸಿದೆ: ಕಾಮರಾಜ್​

ಆಕೆಯ ಉಂಗುರವೇ ಮೂಗಿಗೆ ತಾಗಿ ಗಾಯವಾಗಿದೆ; ನಾನೀಗ ಬಂಧನದಿಂದ ಪಾರಾಗಲು 25 ಸಾವಿರ ರೂ ಖರ್ಚು ಮಾಡಬೇಕು
ಡೆಲಿವರಿ ಬಾಯ್​ ಕಾಮರಾಜ್​-ಯುವತಿ ಹಿತೇಶಾ ಚಂದ್ರಾಣಿ
Follow us
Skanda
| Updated By: ganapathi bhat

Updated on:Mar 12, 2021 | 3:02 PM

ಬೆಂಗಳೂರು: ಆನ್​ಲೈನ್​ ಮೂಲಕ ಊಟ ಆರ್ಡರ್ ಮಾಡಿದ್ದ ಯುವತಿಗೆ ಡೆಲಿವರ್ ಬಾಯ್​ ಹಲ್ಲೆ ಮಾಡಿದ್ದಾನೆಂಬ ವಿಚಾರ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ತನ್ನ ಮೂಗಿನ ಮೇಲಾಗಿದ್ದ ಗಾಯವನ್ನು ತೋರಿಸಿ ವಿಡಿಯೋ ಮೂಲಕ ಯುವತಿ ಅಲವತ್ತುಕೊಂಡಿದ್ದ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಕಾಮರಾಜ್​ನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಇದೀಗ ಡೆಲಿವರಿ ಬಾಯ್​ ನೀಡಿರುವ ಹೇಳಿಕೆ ಘಟನೆಗೆ ಇನ್ನೊಂದು ಆಯಾಮ ನೀಡಿದೆ. ಟ್ರಾಫಿಕ್​ ಸಮಸ್ಯೆ ಮತ್ತು ಹದಗೆಟ್ಟ ರಸ್ತೆಯ ಕಾರಣ ಆರ್ಡರ್​ ತಲುಪಿಸುವುದು ತಡವಾಗಿತ್ತು. ಅಲ್ಲಿಗೆ ಹೋದಾಗ ಸಿಟ್ಟಾಗಿದ್ದ ಯುವತಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಚಪ್ಪಲಿಯಿಂದ ಹೊಡೆದರು. ಅಂತೆಯೇ, ಹಲ್ಲೆ ಮಾಡಲು ಮುಂದಾದಾಗ ಆಕಸ್ಮಿಕವಾಗಿ ಆಕೆ ತನ್ನ ಮೂಗಿಗೆ ತಾನೇ ಏಟು ಮಾಡಿಕೊಂಡ ಕಾರಣ ಗಾಯವಾಗಿ ರಕ್ತ ಒಸರಲಾರಂಭಿಸಿದೆ ಎಂದು ಕಾಮರಾಜ್ ಹೇಳಿರುವ ಕಾರಣ ಎರಡೂ ಕಡೆಯ ವಾದಗಳನ್ನು ಆಲಿಸಿ ಸತ್ಯಾಂಶ ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೊಮ್ಯಾಟೋ ಕಂಪೆನಿ, ಡೆಲಿವರಿ ಬಾಯ್ ಕಾಮರಾಜ್​ ಬಗ್ಗೆ ಇದುವರೆಗೆ ಗ್ರಾಹಕರು ಉತ್ತಮ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. 5ರಲ್ಲಿ 4.7 ಅಂಕ ನೀಡುವ ಮೂಲಕ ಆತನ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೂ, ನಾವು ಎರಡೂ ಕಡೆಯ ಅಭಿಪ್ರಾಯಗಳನ್ನು ಆಲಿಸಿದ್ದೇವೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ಕೊನೆಯ ತನಕವೂ ಸಹಕರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ.

ಘಟನೆ ಕುರಿತಂತೆ ವಿಡಿಯೋ ಮಾಡಿದ್ದ ಹಿತೇಶಾ ಚಂದ್ರಾಣಿ, ಡೆಲಿವರಿ ಬಾಯ್​ ಬಗ್ಗೆ ಗಂಭೀರವಾಗಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಕಾಮರಾಜ್​ನನ್ನು ತಾತ್ಕಾಲಿಕವಾಗಿ ಸೇವೆಯಿಂದ ವಜಾಗೊಳಿಸಲಾಗಿದೆ. ಇನ್ನು ಈ ಬಗ್ಗೆ ಜೊಮ್ಯಾಟೋ ಸಂಸ್ಥಾಪಕ ದೀಪೆಂದರ್ ಗೋಯಲ್​ ಟ್ವೀಟ್ ಮಾಡಿದ್ದು, ಘಟನೆಯ ಆರಂಭದಿಂದ ಹಿಡಿದು ಸಂಪೂರ್ಣ ತನಿಖೆ ನಡೆದು ಸತ್ಯಾಂಶ ಬೆಳಕಿಗೆ ಬರಬೇಕೆಂಬುದೇ ನಮ್ಮ ಆದ್ಯತೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಕಾನೂನು ಪ್ರಕ್ರಿಯೆಗಳನ್ನು ಪಾಲಿಸಲಿದ್ದು, ತಾರ್ಕಿಕ ಅಂತ್ಯ ಕಾಣುವ ತನಕವೂ ಎರಡೂ ಕಡೆಯವರ ಅಭಿಪ್ರಾಯ ಆಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿ ನಿಂತಿರುವ ಕಾಮರಾಜ್​ ದಿ ನ್ಯೂಸ್​ ಮಿನಿಟ್​ ವೆಬ್​ಸೈಟ್​ ಜೊತೆ ಮಾನಾಡಿದ್ದು ಹಿತೇಶಾ ಚಂದ್ರಾಣಿ ಮಾಡಿದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ‘ನಾನು ಆಕೆಗೆ ಊಟವನ್ನು ತಲುಪಿಸಿ ಹಣಕ್ಕಾಗಿ ಕಾಯುತ್ತಿದ್ದೆ. ಅಲ್ಲದೇ ಟ್ರಾಫಿಕ್​ ಸಮಸ್ಯೆಯ ಕಾರಣ ಬರುವುದು ತಡವಾಯಿತೆಂದು ಕ್ಷಮೆಯನ್ನೂ ಕೇಳಿದೆ. ಆದರೆ, ಆಕೆ ಹಣವನ್ನು ನೀಡಲು ನಿರಾಕರಿಸಿದರು. ನಂತರ ನಾನು ಜೊಮ್ಯಾಟೋ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಗ್ರಾಹಕರ ಕೋರಿಕೆ ಮೇರೆಗೆ ಆರ್ಡರ್ ಕ್ಯಾನ್ಸಲ್​ ಮಾಡಲಾಗಿದೆ ಎಂದು ಹೇಳಿದರು. ಹೀಗಾಗಿ, ನಾನು ಆಕೆಗೆ ಊಟದ ಪೊಟ್ಟಣವನ್ನು ವಾಪಾಸು ನೀಡುವಂತೆ ಕೇಳಿದೆ. ಆದರೆ, ಅದಕ್ಕೂ ಅವರು ನಿರಾಕರಿಸಿದರು. ಅಷ್ಟಾದ ನಂತರ ನಾನು ಮತ್ತೇನೂ ಕೇಳದೇ ವಾಪಾಸು ಹೊರಡಲು ಮುಂದಾಗಿದ್ದೆ. ಅಷ್ಟರಲ್ಲಿ ಆಕೆ ನನ್ನ ಮೇಲೆ ಹಲ್ಲೆಗೆ ಮುಂದಾಗಿ ಹಿಂದಿಯಲ್ಲಿ ಬೈಯಲಾರಂಭಿಸಿದರು. ಆಕೆ ನನ್ನ ಕೈಯನ್ನು ದೂರಕ್ಕೆ ತಳ್ಳಲು ಯತ್ನಿಸುತ್ತಿದ್ದಾಗ ಅಚಾನಕ್​ ಆಗಿ ಆಕೆ ತನ್ನ ಬೆರಳಲ್ಲಿ ಧರಿಸಿದ್ದ ಉಂಗುರದಿಂದ ಮೂಗಿಗೆ ಹೊಡೆಸಿಕೊಂಡಿದ್ದಾರೆ. ಅದು ಗಾಯವಾಗಿ ರಕ್ತ ಸುರಿಯಲು ಕಾರಣವಾಗಿದೆ. ಆ ಗಾಯವನ್ನು ಯಾರೇ ನೋಡಿದರೂ ಅದು ಗುದ್ದಿದ್ದರಿಂದ ಆಗಿರುವುದಲ್ಲ ಎಂದು ಅರ್ಥವಾಗುತ್ತದೆ. ನಾನು ಉಂಗುರವನ್ನೂ ಧರಿಸುವುದಿಲ್ಲವಾದ್ದರಿಂದ ನನ್ನಿಂದ ಆ ರೀತಿಯ ಏಟು ಆಗುವುದಕ್ಕೆ ಸಾಧ್ಯವೇ ಇಲ್ಲ’ ಎಂದು ತನ್ನ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಇನ್ನು ತನಿಖೆಯ ಬಗ್ಗೆ ಮಾತನಾಡಿರುವ ಕಾಮರಾಜ್​, ಪೊಲೀಸರು ನನ್ನನ್ನು ಅವಮಾನಕರವಾಗಿಯೇನೂ ನಡೆಸಿಕೊಂಡಿಲ್ಲ. ಆದರೆ, ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಬಂಧನದಿಂದ ತಪ್ಪಿಸಿಕೊಳ್ಳಲು ₹25,000 ಖರ್ಚು ಮಾಡಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಿಗದಿತ ಸಮಯಕ್ಕೆ ಬಾರದ ಊಟ; ಪ್ರಶ್ನಿಸಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೋ ಡೆಲಿವರಿ ಬಾಯ್​ 

ಊಟ ಕೊಡ್ರಪ್ಪಾ, ಹೊಡೀಬೇಡಿ: ಜೊಮ್ಯಾಟೋಗೆ ಪಾಠ ಹೇಳಿದ ನೆಟ್ಟಿಗರು

Published On - 3:01 pm, Fri, 12 March 21

30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ