ಮಾಜಿ ಕೇಂದ್ರ ಸಚಿವ ಆರ್​ ಎಲ್​ ಜಾಲಪ್ಪ ಆರೋಗ್ಯ ಸ್ಥಿತಿ ಗಂಭೀರ

ಕೇಂದ್ರ ಮಾಜಿ ಸಚಿವ ಆರ್​ ಎಲ್​ ಜಾಲಪ್ಪ್ ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣಸುತ್ತಿದೆ ಎಂದು ಆರ್.ಎಲ್.ಜಾಲಪ್ಪ ಸಂಬಂಧಿ ಜಿ.ಹೆಚ್.ನಾಗರಾಜ್​ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಜಾಲಪ್ಪ ಅವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಜಿ ಕೇಂದ್ರ ಸಚಿವ ಆರ್​ ಎಲ್​ ಜಾಲಪ್ಪ ಆರೋಗ್ಯ ಸ್ಥಿತಿ ಗಂಭೀರ
ಆರ್​ ಎಲ್​ ಜಾಲಪ್ಪ
Follow us
TV9 Web
| Updated By: Pavitra Bhat Jigalemane

Updated on:Dec 17, 2021 | 4:43 PM

ಕೇಂದ್ರ ಮಾಜಿ ಸಚಿವ, ಹಿರಿಯ ರಾಜಕಾರಣಿ ಆರ್​ ಎಲ್​ ಜಾಲಪ್ಪ್ ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣಸುತ್ತಿದೆ ಎಂದು ಆರ್.ಎಲ್.ಜಾಲಪ್ಪ ಸಂಬಂಧಿ ಜಿ.ಹೆಚ್.ನಾಗರಾಜ್​ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಜಾಲಪ್ಪ ಅವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಪಿ, ಪ್ಲೇಟ್​ಲೆಟ್ಸ್ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತದೆ ಎಂದು ಸಂಬಂಧಿ ಮಾಹಿತಿ ನೀಡಿದ್ದಾರೆ. ದೊಡ್ಡಬಳ್ಳಾಪುರ ತೂಬಗೆರೆ ಮನೆಯಲ್ಲಿದ್ದಾಗ ಪಾರ್ಶವಾಯವಿಗೆ ತುತ್ತಾಗ ಮೆದುಳಿನ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುವಿನ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಜಾಲಪ್ಪ ಅವರ ಸಂಬಂಧಿ ಮಾಹಿತಿ ನೀಡಿದ್ದಾರೆ

ಕರ್ನಾಟಕದ ಪ್ರಮುಖ ರಾಜಕಾರಿಯಾಗಿದ್ದ ಜಾಲಪ್ಪ ಅವರು 4 ಬಾರಿ ಲೋಕಸಭಾ ಸದಸ್ಯರಾಗಿದ್ದರು. ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದಿಂದ ಪ್ರತಿನಿಧಿಸುತ್ತಿದ್ದರು.

ಇದನ್ನೂ ಓದಿ:

ತಾನಾಡಿದ ಮಾತನ್ನು ಉಳಿಸಿಕೊಂಡಿರುವ ಬೆನೆಲ್ಲಿ ಹೊಸ ಟಿ ಆರ್ ಕೆ 251 ಅಡ್ವೆಂಚರ್ ಬೈಕ್ ಭಾರತದಲ್ಲಿ ಲಾಂಚ್ ಮಾಡಿದೆ

Published On - 4:42 pm, Fri, 17 December 21