ಕಲಬುರಗಿಯಲ್ಲಿ ನಾಲ್ಕು ತಿಂಗಳ ಮಗುವಿಗೂ ಕೊರೊನಾ! 9 ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕಲಬುರಗಿ: ರಾಜ್ಯಕ್ಕೆ ಕೊರೊನಾ ಎಂಟ್ರಿ ಆದಾಗ ಮೊದ್ಲು ಸದ್ದು ಮಾಡಿದ್ದೆ ಕಲಬುರಗಿಯಲ್ಲಿ. ಅದರಲ್ಲೂ ಈಗ ಮಕ್ಕಳಲ್ಲೂ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಪೋಷಕರಲ್ಲಿ ಕೊರೊನಾ ಭೀತಿ ಬೆಂಬಿಡದೆ ಕಾಡ್ತಿದೆ. ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಮಕ್ಕಳನ್ನೂ ಬಿಟ್ಟು ಬಿಡದೇ ಕಾಡ್ತಿದೆ ಕೊರೊನಾ: ಜಿಲ್ಲೆಯಲ್ಲಿ ಇಲ್ಲಿವರಗೆ ಒಂಬತ್ತು ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದೆ. ನಾಲ್ಕು ತಿಂಗಳ ಮಗುವಿಗೂ ಕೊರೊನಾ ಸೋಂಕು ತಗುಲಿದೆ. 18 ವರ್ಷದೊಳಗಿನ 8 ಮಕ್ಕಳಿಗೆ ಕೊರೊನಾ ಸೋಂಕು ಹರಡಿದೆ. ಕೆಲ ಮಕ್ಕಳಿಗೆ ಹೆತ್ತವರಿಂದ ಸೋಂಕು ತಗುಲಿದ್ರೆ, […]
ಕಲಬುರಗಿ: ರಾಜ್ಯಕ್ಕೆ ಕೊರೊನಾ ಎಂಟ್ರಿ ಆದಾಗ ಮೊದ್ಲು ಸದ್ದು ಮಾಡಿದ್ದೆ ಕಲಬುರಗಿಯಲ್ಲಿ. ಅದರಲ್ಲೂ ಈಗ ಮಕ್ಕಳಲ್ಲೂ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಪೋಷಕರಲ್ಲಿ ಕೊರೊನಾ ಭೀತಿ ಬೆಂಬಿಡದೆ ಕಾಡ್ತಿದೆ. ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.
ಮಕ್ಕಳನ್ನೂ ಬಿಟ್ಟು ಬಿಡದೇ ಕಾಡ್ತಿದೆ ಕೊರೊನಾ: ಜಿಲ್ಲೆಯಲ್ಲಿ ಇಲ್ಲಿವರಗೆ ಒಂಬತ್ತು ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದೆ. ನಾಲ್ಕು ತಿಂಗಳ ಮಗುವಿಗೂ ಕೊರೊನಾ ಸೋಂಕು ತಗುಲಿದೆ. 18 ವರ್ಷದೊಳಗಿನ 8 ಮಕ್ಕಳಿಗೆ ಕೊರೊನಾ ಸೋಂಕು ಹರಡಿದೆ. ಕೆಲ ಮಕ್ಕಳಿಗೆ ಹೆತ್ತವರಿಂದ ಸೋಂಕು ತಗುಲಿದ್ರೆ, ಇನ್ನು ಕೆಲ ಮಕ್ಕಳಿಗೆ ಕೊರೊನಾ ಹೇಗೆ ಬಂದಿದೆ ಅನ್ನೋದೆ ಗೊತ್ತಾಗುತ್ತಿಲ್ಲಾ.
ಹೆತ್ತವರಿಗೆ ಕೊರೊನಾ ಇಲ್ಲಾ ಅಂದ್ರು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಂಬತ್ತು ಮಕ್ಕಳಿಗೆ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ರೀತಿ ಕಲಬುರಗಿಯಲ್ಲಿ ಕೊರೊನಾ ಸೋಂಕು ಚಿಕ್ಕ ಮಕ್ಕಳನ್ನೂ ಬಿಡದೆ ಹಿಂಸಿಸುತ್ತಿದೆ. ಮಕ್ಕಳಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲೇ ಆಗಿದೆ.