ಟ್ರೆಷರಿ ಹಣ ದುರುಪಯೋಗ: ಸಬ್ ರಿಜಿಸ್ಟ್ರಾರ್‌ಗಳು, ಪತ್ರ ಬರಹಗಾರರಿಗೆ ಜೈಲು, 1 ಕೋಟಿ 29 ಲಕ್ಷ ರೂ ದಂಡ

|

Updated on: Apr 02, 2021 | 11:23 AM

2006ರಲ್ಲಿ ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅವ್ಯವಹಾರ ನಡೆದಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ನಾಲ್ವರು ಉಪ ನೋಂದಣಾಧಿಕಾರಿಗಳು ಮತ್ತು ಮೂವರು ಪತ್ರ ಬರಹಗಾರರಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.

ಟ್ರೆಷರಿ ಹಣ ದುರುಪಯೋಗ: ಸಬ್ ರಿಜಿಸ್ಟ್ರಾರ್‌ಗಳು, ಪತ್ರ ಬರಹಗಾರರಿಗೆ ಜೈಲು, 1 ಕೋಟಿ 29 ಲಕ್ಷ ರೂ ದಂಡ
ಮಂಡ್ಯದ ಜೆಎಂಎಫ್‌ಸಿ ನ್ಯಾಯಾಲಯ
Follow us on

ಮಂಡ್ಯ: ರಾಜಸ್ವ ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಸಬ್ ರಿಜಿಸ್ಟ್ರಾರ್‌ಗಳು, 3 ಪತ್ರಬರಹಗಾರರಿಗೆ ಮಂಡ್ಯದ ಜೆಎಂಎಫ್‌ಸಿ ನ್ಯಾಯಾಲಯದಿಂದ ಜೈಲು ಶಿಕ್ಷೆ ಆದೇಶ ಹೊರ ಬಿದ್ದಿದೆ. 2006ರಲ್ಲಿ ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅವ್ಯವಹಾರ ನಡೆದಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ನಾಲ್ವರು ಉಪ ನೋಂದಣಾಧಿಕಾರಿಗಳು ಮತ್ತು ಮೂವರು ಪತ್ರ ಬರಹಗಾರರಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.

ನಾಲ್ವರು ಉಪ ನೋಂದಣಾಧಿಕಾರಿಗಳಾಗಿದ್ದ S.N.ಪ್ರಭಾ, ಚೆಲುವರಾಜು, ಲೀಲಾವತಿ, ಸುನಂದಾರಿಗೆ 4 ವರ್ಷ ಜೈಲು, ದಂಡ ಹಾಗೂ ಮೂವರು ಪತ್ರ ಬರಹಗಾರರಾದ ಬಿ.ಕೆ.ರಾಮರಾವ್, ನರಸಿಂಹಮೂರ್ತಿ, ಚಂದ್ರಶೇಖರ್‌ಗೆ 5 ವರ್ಷ ಜೈಲು ಶಿಕ್ಷೆ 1 ಕೋಟಿ 29 ಲಕ್ಷ ರೂಪಾಯಿ ದಂಡ ವಿಧಿಸಿ ಜಡ್ಜ್ ಆದೇಶ ನೀಡಿದ್ದಾರೆ. ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ಆದೇಶ ಪ್ರತಿ

2006ರಲ್ಲಿ ಉಪ ನೋಂದಣಾಧಿಕಾರಿಯಾಗಿದ್ದ ನರಸಿಂಹಯ್ಯ ಎಂಬುವವರು ಈ ಬಗ್ಗೆ ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಮೇಶ್ ಎಸ್ ಗಾಣಿಗೇರ್ ತೀರ್ಪು ನೀಡಿದ್ದಾರೆ. ರಾಜ್ಯದ ವಿವಿಧ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರೊ ಆಪಾದಿತರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಅಂತ್ಯವಾಗಿ ಬಂಧಿಸದಿದ್ದರೆ ಆಗ ಪ್ರಶ್ನಿಸಿ -ಡಿಜಿಪಿ ಪ್ರವೀಣ್ ಸೂದ್

(Four Sub Register And Three Letter Writers Jailed for Misusing Govt Treasury Funds in Mandya)

Published On - 10:34 am, Fri, 2 April 21