AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ, ಬಸ್ ಹತ್ತುವ ಮುನ್ನ ಇದು ನಿಮ್ಮ ಬಳಿ ಇರ್ಬೇಕು

ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಿದರು.

ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ, ಬಸ್ ಹತ್ತುವ ಮುನ್ನ ಇದು ನಿಮ್ಮ ಬಳಿ ಇರ್ಬೇಕು
ಶಕ್ತಿ ಯೋಜನೆಗೆ ಚಾಲನೆ,
ರಮೇಶ್ ಬಿ. ಜವಳಗೇರಾ
|

Updated on:Jun 11, 2023 | 12:20 PM

Share

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ(Free Bus Travel For Women Scheme) ರಾಜ್ಯದಾದ್ಯಂತ ಚಾಲನೆ ಸಿಕ್ಕಿದೆ. ಇಂದು(ಜೂನ್ 11) ವಿಧಾನಸೌಧ ಮುಂಭಾಗ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ(Shakti yojana) ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಯ ಲೋಗೋ, ಸ್ಟಿಕರ್ ಹಾಗೂ ಸ್ಮಾರ್ಟ್​ ಕಾರ್ಡ್​ ಮಾದರಿಯನ್ನು ಬಿಡುಗಡೆಗೊಳಿಸಿದರು. ಇನ್ನು ಸಾಂಕೇತಿಕವಾಗಿ ಐದು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್​ ನೀಡಲಾಗಯ್ತು. ಇದರೊಂದಿಗೆ ಇಂದಿನಿಂದ ಸರ್ಕಾರಿ ಸಾರಿಗೆ ಹಾಗೂ ಬಿಎಂಟಿಸಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ರಾಜ್ಯದ ಮೂಲೆ-ಮೂಲೆಗಳಲ್ಲಿ ಪ್ರಯಾಣಿಸಬಹುದು. ಯಾವುದೇ ಗುರುತಿನ ಚೀಟಿ ಇರಲೇ ಬೇಕು. ಅಂದ್ರೆ ಫೋಟೋ, ವಿಳಾಸ ಇರುವ ಐಡಿ ತೋರಿಸುವುದು ಕಡ್ಡಾಯವಾಗಿದೆ. ಇನ್ನು ಫ್ರೀ ಬಸ್ ಪಾಸ್​ಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು. ಇದಕ್ಕೆ ಮೂರು ತಿಂಗಳು ಸಮಯ ನೀಡಲಾಗಿದ್ದು, ಬಳಿಕ ಮಹಿಳೆಯರು ಸ್ಮಾರ್ಟ್ ಕಾರ್ಡ್ ತೋರಿಸಿ ಬಸ್​ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.

ಇನ್ನು ಬಿಎಂಟಿಸಿ, KSRTC ಸೇರಿ 4 ಸಾರಿಗೆ ಸಂಸ್ಥೆಯಲ್ಲಿ ಫ್ರೀ ಪ್ರಯಾಣಕ್ಕೆ ಅವಕಾಶವಿದ್ದು, ಐಷಾರಾಮಿ ಬಸ್​ಗಳಾದ ರಾಜಹಂಸ, Non AC ಸ್ಲೀಪರ್, AC ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್​ನಲ್ಲಿ ಉಚಿತ ಬಸ್ ಪಯಾಣಕ್ಕೆ ಅವಕಾಶ ಇಲ್ಲ ಎನ್ನುವುದನ್ನು ಮರೀಬೇಡಿ. ಈಗಾಗಲೇ ಮಹಿಳಾ ಪ್ರಯಾಣಿಕರಿಗೆ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಅತ್ತ ಸಾರಿಗೆ ಸಿಬ್ಬಂದಿಗೂ ಗೈಡ್​ಲೈನ್ಸ್ ಕೊಡಲಾಗಿದೆ. ಉಚಿತ ಪ್ರಯಾಣವಿರುವ ಬಸ್​ಗಳಿಗೆ ಸ್ಟಿಕ್ಕರ್ ಹಾಕಲಾಗುತ್ತೆ. ಕೆಲ ಅಂತಾರಾಜ್ಯ ಬಸ್​ಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶವಿದ್ದು, ಗ್ಯಾರಂಟಿ ಸ್ಟಿಕ್ಕರ್ ಇರುತ್ತೆ. ಹೀಗಾಗಿ ಸ್ಟಿಕ್ಕರ್ ನೋಡ್ಕೊಂಡು ಮಹಿಳೆಯರು ಬಸ್ ಹತ್ತಬೇಕಾಗುತ್ತೆ.

ಇನ್ನು ಮಹಿಳೆಯರ ಪ್ರಯಾಣದ ಮಾಹಿತಿ ಸಂಗ್ರಹಿಸುವುದಕ್ಕೆ ಸಾರಿಗೆ ಇಲಾಖೆ ಪಿಂಕ್ ಟಿಕೆಟ್​ಗಳನ್ನು ಪರಿಚಯಿಸಿದೆ. ಮಹಿಳೆಯ ಉಚಿತ ಬಸ್ ಪ್ರಯಾಣಕ್ಕೆ, ಕಂಡಕ್ಟರ್ ಫ್ರೀ ಟಿಕೆಟ್ ಕೊಡುತ್ತಾರೆ. ಒಂದು ವೇಳೆ ಟಿಕೆಟ್ ಸಮಸ್ಯೆಯಾದರೆ ಅಂದರೆ ಮಷಿನ್​ನಲ್ಲಿ ಟೆಕ್ನಿಕಲ್ ಸಮಸ್ಯೆಯಾದರೆ ಪಿಂಕ್ ಟಿಕೆಟ್ ಕೊಡಲಾಗುತ್ತೆ. ಬಳಿಕ ಪಿಂಕ್ ಟಿಕೆಟ್​ನ ಕಾರ್ಬನ್ ಕಾಪಿ ವಾಪಸ್ ಪಡೆಯಲಾಗುತ್ತೆ.

ಒಟ್ಟಾರೆ,ಇಂದಿನಿಂದ ರಾಜ್ಯದ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರ ಕಾರುಬಾರು ಶುರುವಾಗಲಿದ್ದು, ನಾರಿಯರಿಗೆ ಫ್ರೀ ಸರ್ವೀಸ್ ಕೊಡೋಕೆ 21 ಸಾವಿರಕ್ಕೂ ಹೆಚ್ಚು ಬಸ್‌ಗಳು ಸಜ್ಜಾಗಿವೆ.

Published On - 12:20 pm, Sun, 11 June 23