ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್.. ಟಿವಿ 9 ಬಿಗ್ ಇಂಪ್ಯಾಕ್ಟ್

| Updated By: ಸಾಧು ಶ್ರೀನಾಥ್​

Updated on: Jun 22, 2020 | 7:21 AM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್ ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡಾ ಕೊರೊನಾ ಟ್ರೀಟ್​ಮೆಂಟ್ ಫ್ರೀ ಆಗಿದೆ. ರೋಗಿಯ ಎಲ್ಲಾ ಖರ್ಚು ವೆಚ್ಚವನ್ನ ಸರ್ಕಾರವೇ ಭರಿಸಲು ತೀರ್ಮಾನ ಕೈಗೊಂಡಿದೆ. ಕರ್ನಾಟಕದಲ್ಲಿ ಪ್ರತಿಯೊಬ್ಬ ಕೊರೊನಾ ಸೋಂಕಿತರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಆಗ್ರಹಿಸಿತ್ತು. ಸೋಂಕಿತರಲ್ಲಿ ಭೇದ ಭಾವ ಬೇಡ ಎಲ್ಲರಿಗೂ ಸಮವಾಗಿ ನೋಡಿ. ಎಲ್ಲರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ […]

ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್.. ಟಿವಿ 9 ಬಿಗ್ ಇಂಪ್ಯಾಕ್ಟ್
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರಿಗೆ ಫ್ರೀ ಟ್ರೀಟ್​ಮೆಂಟ್ ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡಾ ಕೊರೊನಾ ಟ್ರೀಟ್​ಮೆಂಟ್ ಫ್ರೀ ಆಗಿದೆ. ರೋಗಿಯ ಎಲ್ಲಾ ಖರ್ಚು ವೆಚ್ಚವನ್ನ ಸರ್ಕಾರವೇ ಭರಿಸಲು ತೀರ್ಮಾನ ಕೈಗೊಂಡಿದೆ.

ಕರ್ನಾಟಕದಲ್ಲಿ ಪ್ರತಿಯೊಬ್ಬ ಕೊರೊನಾ ಸೋಂಕಿತರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಆಗ್ರಹಿಸಿತ್ತು. ಸೋಂಕಿತರಲ್ಲಿ ಭೇದ ಭಾವ ಬೇಡ ಎಲ್ಲರಿಗೂ ಸಮವಾಗಿ ನೋಡಿ. ಎಲ್ಲರಿಗೂ ಫ್ರೀ ಟ್ರೀಟ್​ಮೆಂಟ್ ಸಿಗಬೇಕೆಂದು ಟಿವಿ9 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್​ಗೂ ನೇರವಾಗಿ ಆಗ್ರಹಿಸಿತ್ತು. ಈ ಎಲ್ಲ ಆಗ್ರಹಗಳಿಗೆ ಮಣಿದ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಜೂನ್ 19 ರಂದೇ ಸಚಿವ ಶ್ರೀರಾಮುಲು ರಾಜ್ಯದಲ್ಲಿ ಫ್ರೀ ಟ್ರೀಟ್​ಮೆಂಟ್ ಕೊಡುವ ಭರವಸೆ ನೀಡಿದ್ದರು. ಕೊಟ್ಟ ಮಾತು ಉಳಿಸಿಕೊಂಡ ಸಚಿವ ಶ್ರೀರಾಮುಲು ಹಾಗೂ ನಮ್ಮ ಆಗ್ರಹಗಳನ್ನ ಜಾರಿಗೆ ತಂದ ಸರ್ಕಾರಕ್ಕೆ ಟಿವಿ9 ಅಭಿನಂದನೆ ಸಲ್ಲಿಸುತ್ತಿದೆ.

ರಾಜ್ಯದಲ್ಲಿ ಯಾರಿಗೆಲ್ಲ ಫ್ರೀ ಟ್ರೀಟ್​ಮೆಂಟ್ ಸಿಗುತ್ತೆ?
ರಾಜ್ಯದ ಮುಕ್ಕಾಲು ಪಾಲು ಜನರಿಗೆ ಈ ಸೌಲಭ್ಯ ಸಿಗಲಿದೆ. ರಾಜ್ಯದ ಬರೋಬ್ಬರಿ 4 ಕೋಟಿ 20 ಲಕ್ಷ ಜನರು ಈ ಸೌಲಭ್ಯ ಪಡೆಯಬಹುದು. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿನ ಆಸ್ಪತ್ರೆಯಲ್ಲಿ ಫ್ರೀ ಚಿಕಿತ್ಸೆ ನೀಡಲಾಗುತ್ತೆ.

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸ್ಕೀಂ ಅಡಿಯಲ್ಲಿ ಫ್ರೀ ಚಿಕಿತ್ಸೆ ನೀಡಲಾಗುತ್ತೆ. ಕರ್ನಾಟಕದಲ್ಲಿ 1 ಕೋಟಿ 37 ಲಕ್ಷ ಬಿಪಿಎಲ್ ಕಾರ್ಡ್ ಹೊಂದಿರೋ ಕುಟುಂಬಗಳಿವೆ. ಈ ಕುಟುಂಬಗಳಲ್ಲಿ 4 ಕೋಟಿ 20 ಲಕ್ಷ ಜನರಿದ್ದಾರೆ. ಇವರಲ್ಲಿ ಯಾರಿಗಾದ್ರು ಸೋಂಕು ತಗುಲಿದ್ರೆ ಅವರಿಗೆ ಫ್ರೀ ಟ್ರೀಟ್​ಮೆಂಟ್ ನೀಡಲಾಗುತ್ತೆ.

ಇನ್ನು ರಾಜ್ಯದಲ್ಲಿ ಎಪಿಎಲ್​ ಕಾರ್ಡ್​ದಾರರಿಗೂ ಫ್ರೀ ಟ್ರೀಟ್ಮೆಂಟ್ ಸಿಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ 20 ಲಕ್ಷ ಎಪಿಎಲ್ ಕಾರ್ಡ್ ಹೊಂದಿರೋ ಕುಟುಂಬಗಳಿವೆ. 72 ಲಕ್ಷ ಜನ ಎಪಿಎಲ್ ಕಾರ್ಡ್​ನ ಸೌಲಭ್ಯಗಳಿಗೆ ಒಳಪಡ್ತಾರೆ. ಹೀಗಾಗಿ ಕರ್ನಾಟಕದಲ್ಲಿರೋ ಎಪಿಎಲ್ ಕಾರ್ಡ್​ದಾರರಿಗೂ ಸೌಲಭ್ಯ ಸಿಗೋ ಸಾಧ್ಯತೆ ಇದೆ. ಸದ್ಯ ಸರ್ಕಾರ ಶೇ.30ರಷ್ಟು ಮತ್ತು ಕಾರ್ಡ್​​ದಾರರು ಶೇ.70 ರಷ್ಟು ಚಿಕಿತ್ಸಾ ವೆಚ್ಚ ಭರಿಸ್ತಿದ್ದಾರೆ. ಕೊರೊನಾ ಸಮಯದಲ್ಲಿ APL ಕಾರ್ಡ್​ದಾರರಿಗೆ ಹಾಗೂ ಕಾರ್ಡ್ ಇಲ್ಲದವರಿಗೆ ಫ್ರೀ ಟ್ರೀಟ್​ಮೆಂಟ್​ ನೀಡೋ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

Published On - 2:34 pm, Sun, 21 June 20