ಈಗ ಪೂಜಾರಿ ಕೊಡದಿದ್ರೂ ದೇಗುಲದಲ್ಲಿ ಸಿಗಲಿದೆ ತೀರ್ಥ..!
ದಕ್ಷಿಣ ಕನ್ನಡ: ಕೊರೊನಾ ಹರಡುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಮಾಡಿದ್ದ ನಂತರ ದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಸುಮಾರು ಮೂರು ತಿಂಗಳ ಕಾಲ ದೇವರ ದರ್ಶನ ಸಿಗದೆ ನಿರಾಶರಾಗಿದ್ದ ಭಕ್ತರಿಗೆ ಕೇಂದ್ರವು ಕೊನೆಗೂ ದೇವಾಲಯಗಳನ್ನ ತೆರೆಯಲು ಅನುಮತಿ ನೀಡಿದ ಸುದ್ದಿ ಕೇಳಿ ಸಂತಸ ಉಂಟಾಗಿತ್ತು. ‘ದೇವಾಲಯದಲ್ಲಿ ತೀರ್ಥ ಪ್ರಸಾದ ಹಂಚಿಕೆಗೆ ಅನುಮತಿಯಿಲ್ಲ’ ಆದರೆ, ದೇವಸ್ಥಾನಗಳನ್ನು ಪುನಃ ತೆರೆಯಲು ಕೆಲವು ಮಾರ್ಗಸೂಚಿಗಳನ್ನೂ ಕೂಡ ಬಿಡುಗಡೆ ಮಾಡಿತ್ತು. ಇದರ ಒಂದು ಭಾಗವಾಗಿ ದೇಗುಲಕ್ಕೆ ಬರುವ ಭಕ್ತರಿಗೆ ತೀರ್ಥ ಪ್ರಸಾದ ನೀಡಬಾರದು ಎಂಬ […]
ದಕ್ಷಿಣ ಕನ್ನಡ: ಕೊರೊನಾ ಹರಡುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಮಾಡಿದ್ದ ನಂತರ ದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಸುಮಾರು ಮೂರು ತಿಂಗಳ ಕಾಲ ದೇವರ ದರ್ಶನ ಸಿಗದೆ ನಿರಾಶರಾಗಿದ್ದ ಭಕ್ತರಿಗೆ ಕೇಂದ್ರವು ಕೊನೆಗೂ ದೇವಾಲಯಗಳನ್ನ ತೆರೆಯಲು ಅನುಮತಿ ನೀಡಿದ ಸುದ್ದಿ ಕೇಳಿ ಸಂತಸ ಉಂಟಾಗಿತ್ತು.
‘ದೇವಾಲಯದಲ್ಲಿ ತೀರ್ಥ ಪ್ರಸಾದ ಹಂಚಿಕೆಗೆ ಅನುಮತಿಯಿಲ್ಲ’ ಆದರೆ, ದೇವಸ್ಥಾನಗಳನ್ನು ಪುನಃ ತೆರೆಯಲು ಕೆಲವು ಮಾರ್ಗಸೂಚಿಗಳನ್ನೂ ಕೂಡ ಬಿಡುಗಡೆ ಮಾಡಿತ್ತು. ಇದರ ಒಂದು ಭಾಗವಾಗಿ ದೇಗುಲಕ್ಕೆ ಬರುವ ಭಕ್ತರಿಗೆ ತೀರ್ಥ ಪ್ರಸಾದ ನೀಡಬಾರದು ಎಂಬ ಸೂಚನೆಯನ್ನು ಉಲ್ಲೇಖಿಸಲಾಗಿತ್ತು. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಕ್ತರೂ ಸಹ ಈ ಸೂಚನೆಗೆ ತಲೆಬಾಗಿ ಸದ್ಯ ದೇವರ ದರ್ಶನ ಮಾಡೋಕಾದರೂ ಅವಕಾಶ ಸಿಕ್ತು ಎಂದು ಸುಮ್ಮನಾಗಿದ್ದರು. ಆದರೂ ದೇವರಿಗೆ ನಮಿಸಿ, ಆರತಿ ಪಡೆದ ನಂತರ ತೀರ್ಥ ಸಿಗದೆ ಹೋದರೆ ದರ್ಶನ ಪಡೆದಿದ್ದು ಅಪೂರ್ಣ ಎಂದೇ ಅನ್ನಿಸುತ್ತದೆ.
ಭಕ್ತರ ಕೊರಗನ್ನು ನೀಗಿಸಲು ಬಂತು ‘ಟಚ್ಲೆಸ್ ತೀರ್ಥ ಡಿಸ್ಪೆನ್ಸರ್’! ಈಗ ಭಕ್ತರ ಈ ಕೊರಗನ್ನು ನೀಗಿಸಲು ಜಿಲ್ಲೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಸಂತೋಷ್ ಮುಂದಾಗಿದ್ದಾರೆ. ಭಕ್ತರ ಕೊರಗು ಹಾಗೂ ಅರ್ಚಕರ ಆರೋಗ್ಯದ ದೃಷ್ಟಿಯಿಂದ ಸಂತೋಷ್ ‘ಟಚ್ಲೆಸ್ ತೀರ್ಥ ಡಿಸ್ಪೆನ್ಸರ್’ (Touchless Teertha Dispenser) ಅಥವಾ ಸಂಪರ್ಕರಹಿತ ತೀರ್ಥ ವಿನಿಮಯ ಮಾಡುವ ಸ್ವಯಂಚಾಲಿತ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
ಯಾವುದೇ ಸಂಪರ್ಕದ ಅಗತ್ಯವಿರದೆ ಈ ಸ್ವಯಂಚಾಲಿತ ಸಾಧನದಲ್ಲಿ ಭಕ್ತರು ಕೇವಲ ತಮ್ಮ ಹಸ್ತವನ್ನು ಅದರ ಕೆಳಗೆ ಚಾಚಬೇಕು ಅಷ್ಟೇ. ಸೆನ್ಸರ್ ಅಳವಡಿಸಿರುವ ಈ ಯಂತ್ರ ಭಕ್ತರ ಕೈಯನ್ನು ಗುರುತಿಸಿ ತಾನಾಗಿಯೇ ತೀರ್ಥ ನೀಡುತ್ತದೆ. ಸಂಪೂರ್ಣವಾಗಿ ಸ್ವದೇಶಿ ನಿರ್ಮಿತವಾದ ಈ ಯಂತ್ರದ ಬೆಲೆ ಸರಿಸುಮರು 2,700 ರೂಪಾಯಿ. ಜೊತೆಗೆ ಸಂಪರ್ಕರಹಿತ ಹಾಗೂ ಸ್ವಯಂಚಾಲಿತವಾಗಿರುವುದರಿಂದ ಇದರ ನಿರ್ವಹಣೆಗೆ ಹೆಚ್ಚು ಶ್ರಮ ವಹಿಸಬೇಕಿಲ್ಲ. ಒಟ್ನಲ್ಲಿ, ಭಕ್ತರಿಗೆ ತೀರ್ಥವನ್ನು ನೀಡುವುದರ ಜೊತೆಗೆ ಅರ್ಚಕರ ಆರೋಗ್ಯದ ಹಿತಾಸಕ್ತಿಯನ್ನು ಕಾಪಾಡುವ ಈ ಸಾಧನೆ ನಿಜಕ್ಕೂ ಬಹಳ ಉಪಯುಕ್ತ.
Published On - 3:51 pm, Sun, 21 June 20