ನವರಾತ್ರಿ, ದೀಪಾವಳಿ ಹಬ್ಬದ ಸಿಹಿ, ತುಪ್ಪ, ಹಾಲಿನ ಮೇಲೆ ಎಫ್​ಎಸ್​ಎಸ್​ಎಐ ಕಣ್ಣು: ಕಲಬೆರಕೆ ತಡೆಗೆ ದೇಶಾದ್ಯಂತ ಸ್ಪೆಷಲ್ ಆ್ಯಕ್ಷನ್

ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ ಆಹಾರ ಕಲಬೆರಕೆ ತಡೆಗೆ ಎಫ್​ಎಸ್​ಎಸ್​ಎಐ ವಿಶೇಷ ಅಭಿಯಾನಕ್ಕೆ ಸೂಚನೆ ನೀಡಿದೆ. ಸಿಹಿತಿಂಡಿ, ಖಾರ, ಹಾಲು, ತುಪ್ಪ, ಎಣ್ಣೆ, ಪಾನೀಯ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳ ಮೇಲೆ ದೇಶಾದ್ಯಂತ ವಿಶೇಷ ತಪಾಸಣೆ ಮತ್ತು ಸ್ಯಾಂಪಲಿಂಗ್ ನಡೆಸುವಂತೆ ರಾಜ್ಯಗಳ ಎಫ್​​ಡಿಎಗಳಿಗೆ ನಿರ್ದೇಶನ ನೀಡಲಾಗಿದೆ.

ನವರಾತ್ರಿ, ದೀಪಾವಳಿ ಹಬ್ಬದ ಸಿಹಿ, ತುಪ್ಪ, ಹಾಲಿನ ಮೇಲೆ ಎಫ್​ಎಸ್​ಎಸ್​ಎಐ ಕಣ್ಣು: ಕಲಬೆರಕೆ ತಡೆಗೆ ದೇಶಾದ್ಯಂತ ಸ್ಪೆಷಲ್ ಆ್ಯಕ್ಷನ್
ಸಾಂದರ್ಭಿಕ ಚಿತ್ರ
Image Credit source: TV9 Network
Edited By:

Updated on: Oct 07, 2026 | 12:54 PM

ಮುಖ್ಯಾಂಶಗಳು

  • ಹಬ್ಬದ ಸೀಸನ್‌ನಲ್ಲಿ ಆಹಾರ ಕಲಬೆರಕೆ ತಡೆಗೆ ಆ್ಯಕ್ಷನ್
  • ಸಿಹಿ, ಹಾಲು, ತುಪ್ಪದ ಮೇಲೆ ವಿಶೇಷ ನಿಗಾ
  • ದೇಶಾದ್ಯಂತ ತಪಾಸಣೆ, ಸ್ಯಾಂಪಲಿಂಗ್‌ಗೆ ಎಫ್​ಎಸ್​ಎಸ್​ಎಐ ಸೂಚನೆ

ಬೆಂಗಳೂರು, ಅಕ್ಟೋಬರ್ 7: ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ ಆಹಾರ ಕಲಬೆರಕೆ ತಡೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವಿಶೇಷ ಅಭಿಯಾನಕ್ಕೆ ಸೂಚನೆ ನೀಡಿದೆ. ಹಬ್ಬದ ಸೀಸನ್‌ನಲ್ಲಿ ಸಿಹಿತಿಂಡಿ, ಖಾರ ತಿಂಡಿ, ಪಾನೀಯ, ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಖಾದ್ಯ ತೈಲಗಳಿಗೆ ಬೇಡಿಕೆ ಹೆಚ್ಚಾಗುವುದರಿಂದ ದೇಶಾದ್ಯಂತ ವಿಶೇಷ ತಪಾಸಣೆ ಹಾಗೂ ಸ್ಯಾಂಪಲಿಂಗ್ ನಡೆಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ.

ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಕಲಬೆರಕೆ, ನಕಲಿ ಹಾಗೂ ಅಸುರಕ್ಷಿತ ಆಹಾರ ಉತ್ಪನ್ನಗಳ ಮೇಲೆ ವಿಶೇಷ ನಿಗಾ ವಹಿಸುವಂತೆ ಎಫ್​ಎಸ್​ಎಸ್​ಎಐ ಸೂಚಿಸಿದೆ. ಹಾಲು, ತುಪ್ಪ, ಖೋವಾ, ಪನೀರ್ ಸೇರಿದಂತೆ ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಲಾಗಿದ್ದು, ಸಿಹಿತಿಂಡಿ, ಸ್ನ್ಯಾಕ್ಸ್, ನಮ್ಕೀನ್, ಪಾಪಡ್ ಹಾಗೂ ಫ್ರೈಯಮ್ಸ್‌ಗಳ ಮೇಲೂ ವಿಶೇಷ ನಿಗಾವಹಿಸಲು ನಿರ್ದೇಶಿಸಲಾಗಿದೆ.

ಸಿಹಿ, ತುಪ್ಪ, ಎಣ್ಣೆ ಮೇಲೆ ವಿಶೇಷ ನಿಗಾ

ಎಡಿಬಲ್ ಆಯಿಲ್, ತುಪ್ಪ ಹಾಗೂ ವಿವಿಧ ಪಾನೀಯಗಳ ಗುಣಮಟ್ಟವನ್ನು ಪರಿಶೀಲಿಸುವಂತೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಯಾ ರಾಜ್ಯಗಳಲ್ಲಿ ಆಹಾರ ಕಲಬೆರಕೆಯ ಹಾಟ್‌ಸ್ಪಾಟ್‌ಗಳು ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವಿಶೇಷ ತಪಾಸಣೆ ನಡೆಸುವಂತೆ ನಿರ್ದೇಶಿಸಲಾಗಿದೆ. ಹಬ್ಬದ ಅವಧಿಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಮೂಲಕ ನಿರಂತರ ತಪಾಸಣೆ ಮತ್ತು ಸ್ಯಾಂಪಲಿಂಗ್ ನಡೆಸಬೇಕು. ಅನುಮಾನಾಸ್ಪದ ಆಹಾರ ಉತ್ಪನ್ನಗಳ ಸ್ಯಾಂಪಲ್ ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸುವಂತೆ ಎಫ್​ಎಸ್​ಎಸ್​ಎಐ ಸೂಚಿಸಿದೆ.

ಸ್ಥಳೀಯ ಆಹಾರ ಪದ್ಧತಿಗೂ ವಿಶೇಷ ಗಮನ

ಆಯಾ ಪ್ರದೇಶಗಳಲ್ಲಿ ಬಳಕೆಯಾಗುವ ಆಹಾರ ಪದ್ಧತಿಗೆ ಅನುಗುಣವಾಗಿ ವಿಶೇಷ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಬಳಕೆಯಾಗುವ ಕುಟ್ಟು ಅಟ್ಟಾ, ಸಿಂಗಾಡಾ ಅಟ್ಟಾ ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೂ ಗಮನ ಹರಿಸುವಂತೆ ನಿರ್ದೇಶಿಸಲಾಗಿದೆ. ಹಬ್ಬದ ಮಾರುಕಟ್ಟೆಗಳಲ್ಲಿ ತ್ವರಿತ ಆಹಾರ ಪರೀಕ್ಷೆ ನಡೆಸಲು ಫುಡ್ ಸೇಫ್ಟಿ ಆನ್ ವ್ಹೀಲ್ಸ್ (FSW) ವಾಹನಗಳನ್ನು ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ನಿಯೋಜಿಸುವಂತೆ ಸೂಚಿಸಲಾಗಿದೆ. ಇದರ ಮೂಲಕ ಸ್ಥಳದಲ್ಲೇ ಆಹಾರದ ಗುಣಮಟ್ಟದ ತ್ವರಿತ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ.

ತಪಾಸಣೆ ಮಾಹಿತಿ ರಿಯಲ್‌ಟೈಮ್‌ನಲ್ಲಿ ಅಪ್‌ಡೇಟ್

ತಪಾಸಣೆ, ಸ್ಯಾಂಪಲಿಂಗ್ ಹಾಗೂ ಪರೀಕ್ಷೆಯ ಫಲಿತಾಂಶಗಳ ದತ್ತಾಂಶವನ್ನು ಕಡ್ಡಾಯವಾಗಿ ದಾಖಲಿಸುವಂತೆ ಎಫ್​ಎಸ್​ಎಸ್​ಎಐ ಸೂಚಿಸಿದೆ. FoSCoS ಹಾಗೂ FoSCoRISನಲ್ಲಿ ತಪಾಸಣೆ ಮತ್ತು ಸ್ಯಾಂಪಲಿಂಗ್ ಮಾಹಿತಿಯನ್ನು ರಿಯಲ್‌ಟೈಮ್‌ನಲ್ಲಿ ಅಪ್‌ಡೇಟ್ ಮಾಡುವಂತೆ ನಿರ್ದೇಶನ ನೀಡಲಾಗಿದೆ.

ಹಬ್ಬದ ಅವಧಿಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಕಲಬೆರಕೆ ಆಹಾರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us