ಕೊವಿಡ್ ಲಸಿಕೆ ಪಡೆಯಲು ನಕಾರ; ದೇವರಿದ್ದಾನೆ ನಮಗೆ ಏನೂ ಆಗೋದಿಲ್ಲ ಎಂದ ಗದಗದ ಬೀದಿ ಬದಿ ವ್ಯಾಪಾರಿಗಳು

| Updated By: Digi Tech Desk

Updated on: Jun 11, 2021 | 4:11 PM

ಅಧಿಕಾರಿಗಳು ಮೂರು ಬಾರಿ ಹೋದರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ. ಒಟ್ಟು 70 ಬೀದಿ ವ್ಯಾಪಾರಸ್ಥರಿಗೆ ವ್ಯಾಕ್ಸಿನ್ ಹಾಕಲು ಹರಸಾಹಸ ಪಡುತ್ತಿದ್ದಾರೆ. ಆದರೆ ಬೇರೆ ಬೇರೆ ಕುಂಟುನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ಅಧಿಕಾರಿಗಳಿಗೆ ತಲೆ ನೋವಾಗಿದೆ.

ಕೊವಿಡ್ ಲಸಿಕೆ ಪಡೆಯಲು ನಕಾರ; ದೇವರಿದ್ದಾನೆ ನಮಗೆ ಏನೂ ಆಗೋದಿಲ್ಲ ಎಂದ ಗದಗದ ಬೀದಿ ಬದಿ ವ್ಯಾಪಾರಿಗಳು
ಬೀದಿ ಬದಿ ವ್ಯಾಪಾರಿಗಳು
Follow us on

ಗದಗ: ಕೊರೊನಾ ವಿರುದ್ಧ ಹೋರಾಡಲು ಲಸಿಕೆ ಲಭ್ಯವಿದ್ದರೂ ಜನರು ಮಾತ್ರ ತೀರಾ ನಿರ್ಲಕ್ಷ್ಯ ತೋರುತ್ತಿದ್ದಾರೆ. ಲಸಿಕೆ ಬಗ್ಗೆ ಅನುಮಾನ ಬೇಡ. ಧೈರ್ಯವಾಗಿ ಲಸಿಕೆಯನ್ನು ಪಡೆಯಬಹುದು ಎಂದು ವೈದ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದರೂ ಜನರಿಗೆ ಈ ಬಗ್ಗೆ ನಂಬಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಲಸಿಕೆ ಪಡೆಯದೆ ಓಡಾಡುತ್ತಿದ್ದಾರೆ. ಅದರಂತೆ ಗದಗ ತಾಲೂಕಿನ ಮುಳಗುಂದದ ದಾವಲ್ ಮಲ್ಲಿಕ್ ದರ್ಗಾ ಬಳಿಯ ವ್ಯಾಪಾರಿಗಳು ಲಸಿಕೆ ಪಡೆಯಲು ತೀರಾ ವಿರೋಧ ವ್ಯಕ್ತಪಡಿಸಿರುವುದು ತಿಳಿದುಬಂದಿದೆ.

ವ್ಯಾಕ್ಸಿನ್ ಹಾಕಿಸಿಕೊಂಡರೆ ಸಾವನ್ನಪ್ಪುತ್ತಾರೆ ಎನ್ನುವ ಭಯವಿದೆ. ದೇವರಿದ್ದಾನೆ ನಮಗೆ ಏನು ಆಗೋದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. 25 ಸಾವಿರ ರೂಪಾಯಿ ಬಾಂಡ್ ನೀಡಿ ಆಗ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತೇವೆ ಎಂದು ಹೇಳುತ್ತಿರುವ ವ್ಯಾಪಾರಿಗಳ ಮನವೊಲಿಸಲು ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಅಧಿಕಾರಿಗಳು ಮೂರು ಬಾರಿ ಹೋದರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ. ಒಟ್ಟು 70 ಬೀದಿ ವ್ಯಾಪಾರಸ್ಥರಿಗೆ ವ್ಯಾಕ್ಸಿನ್ ಹಾಕಲು ಹರಸಾಹಸ ಪಡುತ್ತಿದ್ದಾರೆ. ಆದರೆ ಬೇರೆ ಬೇರೆ ಕುಂಟುನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ಅಧಿಕಾರಿಗಳಿಗೆ ತಲೆ ನೋವಾಗಿದೆ.

ನೂರಾರು ಜನ ಕ್ಯೂ
ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಮೈದಾನದಲ್ಲಿ ಲಸಿಕೆ ಪಡೆಯಲು ನೂರಾರು ಜನ ಸರತಿ ಸಾಲಲ್ಲಿ ನಿಂತಿದ್ದಾರೆ. ದೈಹಿಕ ಅಂತರ ಮರೆತು ಜನ ಸರತಿ ಸಾಲಲ್ಲಿ ನಿಂತಿದ್ದಾರೆ. ಸಾಮಾಜಿಕ ಅಂತರ ಮರೆತು ಜನ ಗುಂಪಾಗಿ ನಿಂತಿದ್ದರೂ ಪೊಲೀಸರು ತೆಲೆ ಕೆಡಿಸಿಕೊಂಡಿಲ್ಲ.

ಇದನ್ನೂ ಓದಿ

ಬೀದಿ ಬದಿ ವ್ಯಾಪಾರಿಗಳ ಖಾತೆಗೆ ಹಣ ವರ್ಗಾವಣೆ; ಡಿಬಿಟಿ ಮೂಲಕ ಜಮೆಗೆ ಸಿಎಂ ಯಡಿಯೂರಪ್ಪ ಚಾಲನೆ

‘ನೋ ವ್ಯಾಕ್ಸಿನ್ ನೋ ಶಾಪ್ ಓಪನ್’ ಬಾಗಲಕೋಟೆ ಡಿಸಿಯಿಂದ ವಿನೂತನ ಪ್ಲ್ಯಾನ್

Published On - 11:01 am, Thu, 10 June 21