AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jail Stay Back: ಅವರವರ ಚಿಂತೆ ಅವರವರಿಗೆ…! ಪೆರೋಲ್ ಸಿಕ್ಕಿದರೂ ಜೈಲಲ್ಲೇ ಉಳಿದ ನವ ಕೈದಿಗಳು, ಯಾಕೆ ಗೊತ್ತಾ?

Mysore Jail prisoners: ಹೊರಗೆ ಕೊರೊನಾ ಭಯದ ಜೊತೆಗೆ ಕೊರೊನಾ‌ ಸಂದರ್ಭದಲ್ಲಿ ಏನು ಮಾಡೋದು? ಅಂತಾನೂ ಆಲೋಚಿಸಿ ಜೈಲಲ್ಲೆ ಸೇಫ್​ ಆಗಿ ಉಳಿದುಕೊಂಡಿದ್ದಾರೆ ಆ ನವ ಕೈದಿಗಳು! ಸದ್ಯ 54 ಮಂದಿ ಪೆರೋಲ್ ನಲ್ಲಿ ಜೈಲಿನಿಂದ ಹೊರಹೋಗಿದ್ದಾರೆ

Jail Stay Back: ಅವರವರ ಚಿಂತೆ ಅವರವರಿಗೆ...!  ಪೆರೋಲ್ ಸಿಕ್ಕಿದರೂ ಜೈಲಲ್ಲೇ ಉಳಿದ ನವ ಕೈದಿಗಳು, ಯಾಕೆ ಗೊತ್ತಾ?
Jail Stay Back: ಅವರವರ ಚಿಂತೆ ಅವರವರಿಗೆ...! ಪೆರೋಲ್ ಸಿಕ್ಕಿದರೂ ಜೈಲಲ್ಲೇ ಉಳಿದ ನವ ಕೈದಿಗಳು, ಯಾಕೆ ಗೊತ್ತಾ?
TV9 Web
| Edited By: ಸಾಧು ಶ್ರೀನಾಥ್​|

Updated on:Jun 10, 2021 | 11:43 AM

Share

ಮೈಸೂರು: ಅವರವರ ಚಿಂತೆ ಅವರವರಿಗೆ, ಅಲ್ವಾ…!? ಪೆರೋಲ್ ಸಿಕ್ಕಿದ್ದರೂ 9 ಮಂದಿ ಕೈದಿಗಳು ಜೈಲಿನಲ್ಲೇ ಉಳಿದಿದ್ದಾರಂತೆ! ಯಾಕೆ ಗೊತ್ತಾ? ಮುಂದೆ ಸ್ಟೋರಿ ಓದಿ.. ಇಂಟರೆಸ್ಟಿಂಗ್​ ಆಗಿದೆ. ವಿವಿಧ ಕೇಸ್‌ಗಳಲ್ಲಿ ಮೈಸೂರಿನ ಕೇಂದ್ರ ಕಾರಾಗೃಹ ಸೇರಿದ್ದ ಕೈದಿಗಳಿಗೆ ಪೆರೋಲ್ ನೀಡಲಾಗಿತ್ತು. ಪೆರೋಲ್ ಸಿಕ್ಕ 63 ಕೈದಿಗಳ ಪೈಕಿ 9 ಮಂದಿ ನಾವು ಹೊರಗೆ ಹೋಗುವುದಿಲ್ಲ ಎಂದು ಜೈಲಿನಲ್ಲಿಯೇ ಉಳಿದುಕೊಂಡಿದ್ದಾರೆ! ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಯಾಕೆ ನೀವು ಹೊರಗೆ ಹೋಗೊಲ್ವಾ? ಎಂದು ಕೇಳಿದ್ದಕ್ಕೆ ಹೊರಗೆ ಕೊರೊನಾ ಇದೆ. ಈ ಭೀತಿಯ ಹಿನ್ನೆಲೆ ಜೈಲಿನಿಂದ ಹೋಗಲ್ಲವೆಂದ ಕೈದಿಗಳು ಮುಂದಾಲೋಚನೆಯಿಂದ ಹೇಳಿದ್ದಾರೆ.

ಹೊರಗೆ ಕೊರೊನಾ ಭಯ, ಅದರ ಜೊತೆಗೆ ಕೊರೊನಾ‌ ಸಂದರ್ಭದಲ್ಲಿ ಏನು ಮಾಡೋದು? ಅಂತಾನೂ ಚಿಂತೆ ಪೆರೋಲ್ ದಯಪಾಲಿಸಿದ್ದರೂ ಜೈಲೇ ಸೇಫ್ ಎಂಬುದು ಖೈದಿಗಳ ಎಣಿಕೆಯಾಗಿದೆ! ಕೊರೊನಾ‌ ಕಾಲದಲ್ಲಿ ಪೆರೋಲ್ ನೀಡಿ, ಹೊರಗೆ ಕಳಿಸುವ ಏರ್ಪಾಡು ಮಾಡಲಾಗಿತ್ತು. ವಿವಿಧ ಪ್ರಕರಣಗಳಲ್ಲಿ 63 ಮಂದಿ ಜೈಲು ಸೇರಿದ್ದರು.

ಇದೀಗ ಅಷ್ಟೂ ಮಂದಿ ಖೈದಿಗಳಿಗೆ ಮುಕ್ತರಾಗುವ ಅವಕಾಶ ಸಿಕ್ಕಿತ್ತು. ಅದರಲ್ಲಿ 9 ಖೈದಿಗಳು ಪೆರೋಲ್ ಬೇಡ ಎಂದು ಜೈಲಲ್ಲೆ ಉಳಿದಿದ್ದಾರೆ. ಅವರಿಗೆ ಹೊರಗೆ ಕೊರೊನಾ ಭಯದ ಜೊತೆಗೆ ಕೊರೊನಾ‌ ಸಂದರ್ಭದಲ್ಲಿ ಏನು ಮಾಡೋದು? ಅಂತಾನೂ ಆಲೋಚಿಸಿ ಜೈಲಲ್ಲೆ ಸೇಫ್​ ಆಗಿ ಉಳಿದುಕೊಂಡಿದ್ದಾರೆ ಆ ನವ ಕೈದಿಗಳು! ಸದ್ಯ 54 ಮಂದಿ ಪೆರೋಲ್ ನಲ್ಲಿ ಜೈಲಿನಿಂದ ಹೊರಹೋಗಿದ್ದಾರೆ ಎಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಟಿವಿ9 ಗೆ ಮಾಹಿತಿ ನೀಡಿದ್ದಾರೆ. ಸದ್ಯ ಕೈದಿಗಳನ್ನು ಜೈಲಿನಿಂದ ಹೊರಗೆ ಕಳುಹಿಸಿ, ಸೇಫ್​ ಆದ್ರೆ ಸಾಕಪ್ಪಾ ಅಂತಿದ್ದ ಕಾರಾಗೃಹದ ಸಿಬ್ಬಂದಿಗೆ ಇದೀಗ ಆತಂಕ ಮುಂದುವರಿದಿದೆ.

(despite getting parole 9 prisoners decided to stay back in mysore jail)

ಕಾರಾಗೃಹದಲ್ಲಿನ ಕೈದಿಗಳಿಗೆ ಕೊರೊನಾ ಸೊಂಕು; ಚಿಕ್ಕಬಳ್ಳಾಪುರ ಜೈಲು ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ

Published On - 11:43 am, Thu, 10 June 21

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ