ಗದಗದ ನರೇಗಲ್ ಪಟ್ಟಣದಲ್ಲೊಂದು ಐತಿಹಾಸಿಕ ಆಚರಣೆ; ರಾಕ್ಷಸರ, ಕಾಳಿಕಾದೇವಿ ನಡುವೆ ಇಲ್ಲಿ ನಡೆಯುತ್ತೆ ಭೀಕರ ಕಾಳಗ

| Updated By: ಗಣಪತಿ ಶರ್ಮ

Updated on: Sep 15, 2023 | 4:15 PM

ಕಡಬಡ ರಾಕ್ಷಸರನ್ನು ಎಳೆದ್ಯೊಯುತ್ತಿರೋ ಕಾಳಿಕಾದೇವಿ. ಪಟ್ಟಣದ ತುಂಬೆಲ್ಲಾ ದೇವಾನುದೇವತೆಗಳ ಭವ್ಯ ಮೆರವಣಿಗೆ. ದೈವ-ರಾಕ್ಷಸರ ಕದನ ನೋಡೋಕೆ ಜಮಾಯಿಸಿದ ಮಹಿಳೆಯರು, ಮಕ್ಕಳು ಸೇರಿ ಸಾವಿರಾರು ಜನ್ರು. ಅಂದ್ಹಾಗೆ ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರಗೇಲ್ ಪಟ್ಟಣದಲ್ಲಿ.

ಗದಗದ ನರೇಗಲ್ ಪಟ್ಟಣದಲ್ಲೊಂದು ಐತಿಹಾಸಿಕ ಆಚರಣೆ; ರಾಕ್ಷಸರ, ಕಾಳಿಕಾದೇವಿ ನಡುವೆ ಇಲ್ಲಿ ನಡೆಯುತ್ತೆ ಭೀಕರ ಕಾಳಗ
ನರೇಗಲ್ ಪಟ್ಟಣದಲ್ಲೊಂದು ಐತಿಹಾಸಿಕ ಆಚರಣೆ; ರಾಕ್ಷಸರ, ಕಾಳಿಕಾದೇವಿ ನಡುವೆ ಇಲ್ಲಿ ನಡೆಯುತ್ತೆ ಭೀಕರ ಕಾಳಗ
Follow us on

ಗದಗ, ಸೆಪ್ಟೆಂಬರ್ 15: ಗಜೇಂದ್ರಗಡ ತಾಲೂಕಿನ (Gajendragad) ನರೇಗಲ್ ಪಟ್ಟಣದಲ್ಲಿ ಕಡಬಡ ಸೋಗು ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ದೇವಾನುದೇವತೆಗಳು, ರಾಕ್ಷಸರು ಎಂಟ್ರಿ ಕೊಟ್ಟಿದ್ರು ಭವ್ಯ ಮೆರವಣಿಗೆ ನಡೆಯಿತು. ದೇವಾನು ದೇವತೆಗಳಿಗೆ ಕಡಬಡ ರಕ್ಷಸರು ತೀವ್ರ ಉಪಟಳ ನೀಡ್ತಾಯಿದ್ರು. ಆಗ ಪಟ್ಟಣಕ್ಕೆ ಎಂಟ್ರಿ ಕೊಟ್ಟ ಕಾಳಿಕಾದೇವಿ ರಕ್ಷಸರ ಜೊತೆ ಕಾದಾಡಿ ದೇವಾನು ದೇವತೆಗಳ ರಕ್ಷಣೆ ಮಾಡ್ತಾಳೆ. ಆ ದೇವಿ ಹಾಗೂ ರಾಕ್ಷಸರ ನಡುವಿನ ಕಾಳಗ ನೋಡೋಕೆ ರೋಚಕವಾಗಿರುತ್ತೆ. ಇಡೀ ಪಟ್ಟಣದ ಸಾವಿರಾರು ಜನ್ರು ರಾಕ್ಷಸರು ಹಾಗೂ ದೇವಿ ಕಾಳಗಕ್ಕೆ ಸಾಕ್ಷಿಯಾದ್ರು. ಇಡೀ ಪಟ್ಟಣದಲ್ಲಿ ದೇವಾನುದೇವತೆಗಳ ಭವ್ಯಮೆರವಣಿಗೆ ಮಾಡಲಾಗುತ್ತೆ.

ಕಡಬಡ ರಾಕ್ಷಸರನ್ನು ಎಳೆದ್ಯೊಯುತ್ತಿರೋ ಕಾಳಿಕಾದೇವಿ. ಪಟ್ಟಣದ ತುಂಬೆಲ್ಲಾ ದೇವಾನುದೇವತೆಗಳ ಭವ್ಯ ಮೆರವಣಿಗೆ. ದೈವ-ರಾಕ್ಷಸರ ಕದನ ನೋಡೋಕೆ ಜಮಾಯಿಸಿದ ಮಹಿಳೆಯರು, ಮಕ್ಕಳು ಸೇರಿ ಸಾವಿರಾರು ಜನ್ರು. ಅಂದ್ಹಾಗೆ ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರಗೇಲ್ ಪಟ್ಟಣದಲ್ಲಿ. ನರೇಗಲ್ ಪಟ್ಟಣದ ಶ್ರಾವಣ ಮಾಸದಲ್ಲಿ ಕಡಬಡ ಸೋಗು ಕಾರ್ಯಕ್ರಮ ನಡೆಯುತ್ತದೆ. ಜಾನಪದ ಸೋಗಡಿನ ಕಡಬಡ ಸೋಗುಗೆ ನೂರಾರು ವರ್ಷಗಳ ಇತಿಹಾಸವಿದೆ. ರಾಜ್ಯದ ಎಲ್ಲೂ ಕಾಣದ ಸಾಂಪ್ರದಾಯಿಕ ಕಲೆ ನರೆಗಲ್ಲ ನಲ್ಲಿ ರೂಢಿಯಲ್ಲಿದೆ. ಈ ಆಚರಣೆಗೆ ವೈಜ್ನಾನಿಕ ಕಾರಣವೂ ಇದೆ ಅನ್ನೋದು ಗ್ರಾಮಸ್ಥರ ಮಾತು. ಸಮೃದ್ಧ ಮಳೆ ಬೆಳೆ, ಉತ್ತಮ ಆರೋಗ್ಯಕ್ಕಾಗಿ ಕಡಬಡ ಸೋಗಿನ ನೃತ್ಯರೂಪಕ ನಡೆಯುತ್ತದೆ. ನೂರಾರು ವರ್ಷಗಳ ಹಿಂದೆ ದೇವಾನುದೇವತೆಗಳಿಗೆ ಕಡಬಡ ಎಂಬ ರಾಕ್ಷಸರು ವಿಪರೀತ ಕಾಟ ಕೊಡುತ್ತಿದ್ರಂತೆ. ಆಗ ಕಾಳಿಕಾದೇವಿ ಈ ಕಡಬಡ ರಾಕ್ಷಸರ ಜೊತೆ ಕಾಳಗ ಮಾಡಿದ ದೇವಾನುದೇವರುಗಳನ್ನು ರಕ್ಷಸರಿಂದ ರಕ್ಷಣೆ ಮಾಡ್ತಾಳಂತೆ. ಆ ಐತಿಹಾಸಿಕ ಹಿನ್ನಲೆಯಲ್ಲಿ ನರೇಗಲ್ ಪಟ್ಟಣದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಈ ಕಡಬಡ ಸೋಗು ಎಂಬ ವಿನೂತನ ಜಾನಪದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತೆ. ನರೇಗಲ್ ಪಟ್ಟಣದಲ್ಲಿ ಸೋಗಗಳ ಮೆರವಣಿಗೆ ರಾಕ್ಷಸರ ಹಾಗೂ ದೇವಿಯ ನಡುವೆ ಕಾಳಗ ನೋಡೋದೆ ಚೆಂದ. ದೇವಿ ರಾಕ್ಷಸ ನಡುವಿನ ಕಾಳಗದ ಬಳಿಕ ದೇವಾನುದೇವತೆಗಳನ್ನು ವಾಹನಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಗುತ್ತೆ. ರಾಮ, ಲಕ್ಷ್ಮಣ, ಕೃಷ್ಣ, ರಾವಣ ಹೀಗೆ ಹಲವಾರು ದೇವಾನುದೇವತೆಗಳ ವೇಷಭೂಷಣ ತೊಟ್ಟು ಯುವಕ್ರು, ಮಕ್ಕಳು ವಿಶಿಷ್ಠ ರೀತಿಯಲ್ಲಿ ಹಬ್ಬ ಆಚರಣೆ ಮಾಡ್ತಾರೆ.

ನಾಡಿನ ಸಂಸ್ಕೃತಿ ಪ್ರತೀಕವಾಗಿರುವ ಸಾಂಪ್ರದಾಯಿಕ ಕಲೆಗಳು ನಶಿಸುತ್ತಿರುವ ಕಾಲಘಟ್ಟದಲ್ಲಿ ಯುವಕರು ಮುಂದೆ ಬಂದು ಜಾನಪದ ಕಲೆಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆಧುನಿಕತೆಯ ಭರಾಟೆಯ ಮಧ್ಯೆದಲ್ಲೂ ಜಾನಪದ ಕಲೆಯೊಂದನ್ನುಉಳಿಸಿ ಬೆಳೆಸುವ ಕಾರ್ಯವಾಗುತ್ತಿದೆ. ಕಡಬಡ ಸೋಗಿನ ಉದ್ದೇಶ ಹಲವು ಉದ್ದೇಶಗಳಿವೆ ಶ್ರಾವಣವೆಂದರೆ ಮಳೆಗಾಲದ ಮಾಸ, ಈ ಸಮಯದಲ್ಲಿ ಜನರು ಅನೇಕ ಸಾಂಕ್ರಾಮಿಕ ಮತ್ತಿತರ ರೋಗಗಳಿಂದ ಬಳಲುವ ಸಾಧ್ಯತೆ ಹೆಚ್ಚು, ಮುಂಗಾರು ಬಿತ್ತನೆಯನ್ನೆಲ್ಲ ಮುಗಿಸಿ ರೈತರು ವರುಣನ ಕೃಪೆಗಾಗಿ ಕಾದು ಕುಳಿತಿರುವ ಮಾಸವೂ ಹೌದು, ಮಳೆ ಚೆನ್ನಾಗಿ ಆಗಲಿ, ಬರುವ ಎಲ್ಲಾ ರೋಗಗಳು ದೂರವಾಗಲಿ ಮತ್ತು ಜನತೆಗೆ ಈ ಸಮಯದಲ್ಲಿ ಮನರಂಜನೆ ನಿಡಬೇಕೆನ್ನುವ ದೃಷ್ಟಿಯಿಂದ ಈ ಕಡಬಡ ಸೋಗನ್ನು ಆಡಲಾಗುತ್ತದೆ, ಕೆಲವು ದಿನಗಳ ಹಿಂದೆ ಸ್ನೇಹಜೀವಿ ಗೆಳೆಯರ ಬಳಗ ಸಂತೆ ಬಜಾರದ ಯುವಕರು, ದ್ಯಾಮಮ್ಮನ ಪಾದಗಟ್ಟಿ ಓಣೆಯ ಯುವಕರು, ಹಾಗೂ ಶ್ರೀ ವಿರಭದ್ರೆಶ್ವರ ಗುಡಿ ಓಣೆಯ ಯುವಕರು ಹಮ್ಮಿಕೊಂಡ ಕಡಬಡ ಸೋಗು ಜನಮನ ಸೂರೆಗೊಂಡಿತ್ತು, ಶ್ರಾವಣ ಮಾಸದ ಕೊನೆಯ ವಾರದ ದಿನವಾದ ಇಂದು ಅದ್ದೂರಿಯಾಗಿ ನಡೆಯಿತು. ಪಟ್ಟಣದ ಹಿರೇಮಠದ ಓಣೆಯ ಯುವಕರು ಕಡಬಡ ಸೋಗಿನ ಮೆರವಣಿಗೆ ಹಮ್ಮಿಕೊಂಡಿದ್ರು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ದೇವರು ಹಾಗೂ ರಾಕ್ಷಸರ ನಡುವೆ ನಡೆಯುವ ಕಾಳಗದ ಸನ್ನಿವೇಶವನ್ನು ನೋಡಿ ಜನ್ರು ಕಣ್ಣು ತುಂಬಿಕೊಂಡ್ರು. ಹಿರೇಮಠದಿಂದ ಪ್ರಾರಂಭವಾಗುವ ಕಡಬಡಸೋಗಿನ ಮೆರವಣಿಗೆ,ಶ್ರೀ ವೀರಭದ್ರೇಶ್ವರ ದೇವಾಲಯ,ವೀರಣ್ಣನ ಪಾದಗಟ್ಟಿ, ದರ್ಗಾ, ಮಾರೆಮ್ಮನ ದೇವಸ್ಥಾನ, ಹಳೇ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್, ಹೊಸ ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ,ಮಾರ್ಗವಾಗಿ ಕಡಬಡ ಸೋಗಿನ ಮೆರವಣಿಗೆ ಸಾಗಿತು.

ಇದನ್ನೂ ಓದಿ: ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಹಿಡಿದಿದೆ ಗ್ರಹಣ! 15 ದಿನಗಳು ಕಳೆದ್ರೂ ಇನ್ನೂ ಗೃಹಲಕ್ಷ್ಮೀಯರ ಅಕೌಂಟ್​ಗೆ ಜಮಾ ಆಗಿಲ್ಲ 2ಸಾವಿರ

ಹಲಗೆ ಮೇಳಕ್ಕೆ ರಾಕ್ಷಸರ ಕುಣಿತ, ಕಾಳಿಕಾದೇವಿ ರಾಕ್ಷಸರನ್ನು ಹಿಡಿದುಕೊಂಡು ಹೋಗು ದೃಶ್ಯಗಳು ಜನರನ್ನು ಆಕರ್ಷಣೆಗೊಂಡವು. ಮುಂದೆ ಇಬ್ಬರು ರಾಕ್ಷಸರು ದೇವಿಯ ಮೇಲೆ ಆಕ್ರಮಣ ಮಾಡಲು ಹವಣಿಸುತ್ತಿರುತ್ತಾರೆ, ದೇವಿ ರಾಕ್ಷಸರನ್ನು ಸಂಹರಿಸಲು ಯತ್ನಿಸುತ್ತಿರುತ್ತಾಳೆ. ಇದೇ ಈ ಆಟದ ತಿರುಳು. ಈ ಸೋಗಿನ ಆಟದಲ್ಲಿ 20 ರಿಂದ 40 ವೇಷಧಾರಿಗಳಿರುತ್ತಾರೆ. ದೇವಿ, ಬ್ರಹ್ಮ, ವಿಷ್ಣು, ಮಹೇಶ್ವರ, ದೇವೇಂದ್ರ, ರಂಭೆ, ಐರ್ವಶಿ, ಮೇನಕೆ, ರಾಕ್ಷಸರು, ಯಮಧರ್ಮ, ಹನುಮಂತ ಹೀಗೆ ಹತ್ತು ಹಲವು ಪೌರಾಣಿಕ ಪಾತ್ರಗಳು ಮರುಜೀವ ಪಡೆದಿರುತ್ತವೆ. ದೇವಿಯು ಕುಣಿತ ಹಾಕುತ್ತ ಮುಂದೆ ಸಾಗುತ್ತಿದ್ದರೆ ಅವಳ ಮೇಲೆ ಆಕ್ರಮಣ ಮಾಡಲು ರಾಕ್ಷಸರು ಕಾಯುತ್ತಿರುತ್ತಾರೆ. ದೇವಿ ರಾಕ್ಷಸರನ್ನು ಸಂಹಾರ ಮಾಡಲು ಬಂದಾಗ ಆಡುವ ಆಟವನ್ನು ನೋಡುವುದೇ ಬಲು ಸೊಗಸು. ಆಧುನಿಕ ಯುಗದಲ್ಲೂ ಕೂಡ ಐತಿಹಾಸಿಕವಾಗಿ ಬಂದಂತ ಕಲೆಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ