ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಹಿಡಿದಿದೆ ಗ್ರಹಣ! 15 ದಿನಗಳು ಕಳೆದ್ರೂ ಇನ್ನೂ ಗೃಹಲಕ್ಷ್ಮೀಯರ ಅಕೌಂಟ್​ಗೆ ಜಮಾ ಆಗಿಲ್ಲ 2ಸಾವಿರ

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಗ್ರಹಣ ಹಿಡಿದಿದೆ. ರಾಜ್ಯದ ಗೃಹಲಕ್ಷ್ಮೀಯರ ಜೀವ ಹಿಂಡುತ್ತಿದೆ. ಯೋಜನೆ 2 ಸಾವಿರಕ್ಕಾಗಿ ಇಡೀ ದಿನ ಕೆಲಸ, ಮನೆ, ಮಠ, ಊಟ, ನಿದ್ದೆ ಬಿಟ್ಟು ಕಾಯುವ ದುಸ್ಥಿತಿ ಎದುರಾಗಿದೆ. ಹೌದು, ಗೃಹಲಕ್ಷ್ಮೀ ಯೋಜನೆ ಹಣ ಇನ್ನೂ ಖಾತೆಗೆ ಜಮಾ ಆಗಿಲ್ಲ. ಹೀಗಾಗಿ ಬ್ಯಾಂಕ್​ಗಳ ಎದುರು ನೂರಾರು ಗೃಹಲಕ್ಷ್ಮೀಯರು ನೂಕಾಟ, ತಳ್ಳಾಟ ವಾಗ್ವಾದ ನಡೆಸುವ ಸ್ಥಿತಿ ಎದುರಾಗಿದ್ದು, ಸರ್ಕಾರ ವಿರುದ್ಧ ಕೆಂಡಕಾರಿದ್ದಾರೆ.

ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಹಿಡಿದಿದೆ ಗ್ರಹಣ! 15 ದಿನಗಳು ಕಳೆದ್ರೂ ಇನ್ನೂ ಗೃಹಲಕ್ಷ್ಮೀಯರ ಅಕೌಂಟ್​ಗೆ ಜಮಾ ಆಗಿಲ್ಲ 2ಸಾವಿರ
ಗೃಹಲಕ್ಷ್ಮೀ ಯೋಜನೆ ಎಫೆಕ್ಟ್​
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 13, 2023 | 5:49 PM

ಗದಗ, ಸೆ.13: ಬ್ಯಾಂಕ್​ಗಳ ಎದುರು ಸಾಲು ಸಾಲು ಮಹಿಳೆಯರ ಹಿಂಡು. ಗೃಹಲಕ್ಷ್ಮೀಯರಿಂದ ತುಂಬಿದ ಬ್ಯಾಂಕ್ ಗಳು, ಬ್ಯಾಂಕ್​ನೊಳಗೆ ಹೋಗಲು ನೂಕಾಟ ತಳ್ಳಾಟ, ಮಹಿಳೆಯರ ನಡುವೆ ವಾಗ್ವಾದ. ಸರ್ಕಾರ ವ್ಯವಸ್ಥೆ ವಿರುದ್ಧ ಮಹಿಳೆಯರ ಆಕ್ರೋಶ. ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ-ಬೆಟಗೇರಿ (Gadag-Betageri) ಅವಳಿ ನಗರದಲ್ಲಿ. ಹೌದು ಅವಳಿ ನಗರದಲ್ಲಿ ಯಾವ ಬ್ಯಾಂಕಿಗೆ ಹೋದರೂ ಮಹಿಳೆಯರದ್ದೇ ದರ್ಬಾರ್. ಇದು ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಎಫೆಕ್ಟ್. ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಗೆ ಅಧಿಕೃತ ಚಾಲನೆ ನೀಡಿ 15 ದಿಗಳು ಕಳೆದಿವೆ. ಆದ್ರೆ, ಮಹಿಳೆಯರ ಅಂಕೌಂಟ್​ಗೆ ಮಾತ್ರ ಇನ್ನೂ ಹಣ ಜಮಾ ಆಗಿಲ್ವಂತೆ. ಹೀಗಾಗಿ ಬಡ ಕುಟುಂಬದ ಮಹಿಳೆಯರು ಬ್ಯಾಂಕ್​ಗಳಿಗೆ ಲಗ್ಗೆ ಇಟ್ಟಿದ್ದಾರೆ.

ಗದಗ ನಗರದ ಹಳೆ ಡಿಸಿ ಸರ್ಕಲ್​ನಲ್ಲಿ ಇರುವ IDBI ಬ್ಯಾಂಕ್ ಎದುರು ಗದ್ದಲವೋ ಗದ್ದಲ. ಪುಟ್ಟರಾಜ್ ಸರ್ಕಲ್ ಬಳಿಯ ಯೂನಿಯನ್ ಬ್ಯಾಂಕ್​ನಲ್ಲೂ ರಷ್. ಬೆಳಗ್ಗೆ 6ಗಂಟೆಯಿಂದಲೇ ಬ್ಯಾಂಕ್​ಗೆ ಆಗಮಿಸುವ ಮಹಿಳೆಯರು, ಸರತಿ ಸಾಲಿನಲ್ಲಿ ನಿಂತು 2ಸಾವಿರ ಹಣ ನಮ್ಮ ಅಕೌಂಟ್​ಗೆ ಜಮಾ ಆಗಿದೆಯೋ ಇಲ್ವೋ ಎಂದು ಕನ್ಫರ್ಮ್ ಮಾಡಿಕೊಳ್ಳುತ್ತಿದ್ದಾರೆ. ಗದಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಇನ್ನು ಬಹುತೇಕ ಮಹಿಳೆಯರ ಅಕೌಂಟ್ ಹಣವೇ ಜಮಾ ಆಗಿಲ್ಲವಂತೆ. ಹೀಗಾಗಿ ಗ್ರಾಮೀಣ ಭಾಗದ ಮಹಿಳೆಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಅಬ್ಬಬ್ಬಾ ಲಾಟರಿ! ಗೃಹಲಕ್ಷ್ಮೀ ಯೋಜನೆ ಗ್ಯಾರಂಟಿ ಹಣ ಬಂದಿಲ್ಲ ಎಂದು ಮಹಿಳೆಯರು ಕಂಗಾಲು, ಬ್ಯಾಂಕ್​​ ಎದುರು ಕೊನೆಯಿಲ್ಲದ ಸಾಲು!

ಬ್ಯಾಂಕ್​ಗಳ ಮುಂದೆ ಜಮಾಯಿಸಿದ ನೂರಾರು ಮಹಿಳೆಯರು ನಾ ಮುಂದೆ..ತಾ ಮುಂದೆ ಎಂದು ನೂಕಾಟ, ತಳ್ಳಾಟ ನಡೆಸಿದ್ದಾರೆ. ಈ ವೇಳೆ ಗೃಹಲಕ್ಷ್ಮೀಯರ ನಡುವೆ ವಾಗ್ವಾದ ಕೂಡ ನಡೆಯುತ್ತಿದೆ. ವಿಚಿತ್ರ ಅಂದರೆ, ಮಂಜುನಾಥ್ ಸ್ವ ಸಹಾಯ ಸಂಘ ಮಾಡಿಸಿದ ಅಕೌಂಟ್​ಗೆ ಹಣ ಜಮಾ ಆಗುತ್ತೆ ಎಂದು ಹೇಳಿದ್ದಾರೆ. ಹೀಗಾಗಿ ಗದಗ ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ ತಾಲೂಕಿನ ಸಾವಿರಾರು ಮಹಿಳೆಯರು ಗದಗ-ಬೆಟಗೇರಿ ಅವಳಿ ನಗರದ ಬ್ಯಾಂಕ್ ಗಳಿಗೆ ಲಗ್ಗೆ ಇಟ್ಟಿದ್ದಾರೆ. ಸರ್ ನಮ್ಮೂರಲ್ಲಿ ಬ್ಯಾಂಕ್ ಇವೆ. ಆ ಅಕೌಂಟ್ ಗೆ ಹಣ ಜಮಾ ಆಗಲ್ವಂತೆ. ಹೀಗಾಗಿ ಧರ್ಮಸ್ಥಳ ಮಂಜುನಾಥ್ ಸ್ವಸಹಾಯ ಸಂಘ ಮಾಡಿಸಿದ ಅಕೌಂಟ್ ಹಣ ಜಮಾ ಆಗುತ್ತೆ ಎಂದು ನಾವು ನಾಲ್ಕೈದು ದಿನಗಳಿಂದ ಬೆಳಗ್ಗೆಯಿಂದಲೇ ಕಾಯ್ದರು ಬ್ಯಾಂಕ್ ಒಳಗೆ ಹೋಗಲು ಆಗ್ತಾಯಿಲ್ಲವೆಂದು ಕೆಲ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದ ವಿವಿಧ ಬ್ಯಾಂಕ್​ಗಳ ಮುಂದೆ ಕ್ಯೂ ಹಚ್ಚಿ ನಿಂತ ಬಹುತೇಕ ಮಹಿಳೆಯರು ಬಡ ಕುಟುಂಬದವರು. ಇವ್ರು ನಿತ್ಯ ದುಡಿದ್ರೆ ಕುಟುಂಬ ನಿರ್ವಹಣೆ ಆಗುತ್ತೆ. ಇಲ್ಲಾಂದ್ರೆ ಉಪವಾಸ ಇವರು ಸ್ಥಿತಿ. ಹೀಗಾದ್ರೂ ಕೆಲಸ ಬಿಟ್ಟು, ಮನೆ, ಮಕ್ಕಳು ಬಿಟ್ಟು ಗದಗ ನಗರಕ್ಕೆ ಆಗಮಿಸಿದ ಇಡೀ ದಿನ ಕ್ಯೂನಲ್ಲಿ ನಿಂತ್ರು ಹಣ ಜಮಾ ಆದ ಬಗ್ಗೆಯೂ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಸರ್ಕಾರದ ಈ ವ್ಯವಸ್ಥೆಗೆ ಗೃಹಲಕ್ಷ್ಮೀಯರು ಕೆಂಡಕಾರಿದ್ದಾರೆ. ವಾರದಿಂದ ಅಲೆದಾಡುದ್ರೂ ಹಣ ಜಮೆ ಇಲ್ಲ ಎಂದು ಶಿರಹಟ್ಟಿ, ಲಕ್ಷ್ಮೇಶ್ವರ, ನರಗುಂದ, ಮುಂಡರಗಿ ಮಹಿಳೆಯರು ಗರಂ ಆಗಿದ್ದಾರೆ.

ಇದನ್ನೂ ಓದಿ:‘ಗೃಹಲಕ್ಷ್ಮೀ’ ನೋಂದಣಿ ತಾತ್ಕಾಲಿಕ ಸ್ಥಗಿತ ಟ್ವೀಟ್​​: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಹೇಳಿದ್ದಿಷ್ಟು

ಗದಗ ಜಿಲ್ಲೆಯ ಗೃಹ ಲಕ್ಷ್ಮೀಯರು ಅಕ್ಷರಶಃ ಕಂಗಾಲಾಗಿದ್ದಾರೆ. ಸರ್ಕಾರ ತೋರಿಸಿದ ಆಸೆಯಿಂದ ಹಣಕ್ಕಾಗಿ ದೂರದ ನೂರಾರು ಕಿಲೋ ಮೀಟರ್ ದೂರದಿಂದ ಬರ್ತಾಯಿದ್ದಾರೆ. ಇನ್ನೂ ವಿವಿಧ ತಾಲೂಕುಗಳಲ್ಲಿ ಬ್ಯಾಂಕ್ ಇದ್ರೂ, ನಾಲ್ಕು ತಾಲೂಕಿನ ಮಹಿಳೆಯರು ಗದಗ ನಗರಕ್ಕೆ ಆಗಮಿಸಬೇಕು. ಇಷ್ಟೇಲ್ಲ ಸಮಸ್ಯೆ ಆದರೂ ಜಿಲ್ಲಾಡಳಿತವಾಗಲೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾಗಲೀ ಯಾವುದೇ ರೀತಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಮಹಿಳೆಯರು ನಿತ್ಯವೂ ಸರ್ಕಾರಕ್ಕೆ ಹಿಡಿ ಶಾಪಹಾಕುತ್ತಿದ್ದಾರೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಗೃಹಲಕ್ಷ್ಮೀಯರಿಗೆ 2ಸಾವಿರ ತಲುಪಿಸುವ ಕೆಲಸ ಮಾಡಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Wed, 13 September 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ