ACB Raid: ರೈತಾಪಿ ವರ್ಗ ಕಾಯಬೇಕಿದ್ದ ಅಧಿಕಾರಿಯ ‘ಭ್ರಷ್ಟಾಚಾರದ ಕೃಷಿ’ ಕಂಡು ದಂಗಾದ ಕೃಷಿ ಮುಖಂಡರು!

| Updated By: ಸಾಧು ಶ್ರೀನಾಥ್​

Updated on: Nov 25, 2021 | 10:09 AM

ಎರಡ್ಮೂರು ವರ್ಷಗಳಿಂದ ಅತಿವೃಷ್ಠಿ, ಅನಾವೃಷ್ಠಿ ಹಾಗೂ ಬೆಳೆ ವಿಮೆ ರೈತರಿಗೆ ಸರಿಯಾಗಿ ತಲುಪಿಲ್ಲ. ಹೀಗಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿಎಸ್ ರುದ್ರೇಶಪ್ಪ ರೈತರ ಹಣ ನುಂಗಿರಬೇಕು ಅಂತ ಅನುಮಾನ ಕಾಡ್ತಾಯಿದೆ. ಹೀಗಾಗಿ ಸರ್ಕಾರ ಸಮಗ್ರವಾಗಿ ತನಿಖೆ ಮಾಡಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು- ರೈತ ಮುಖಂಡ ಪರಮೇಶಪ್ಪ ಜಂತ್ಲಿ

ACB Raid: ರೈತಾಪಿ ವರ್ಗ ಕಾಯಬೇಕಿದ್ದ ಅಧಿಕಾರಿಯ ‘ಭ್ರಷ್ಟಾಚಾರದ ಕೃಷಿ’ ಕಂಡು ದಂಗಾದ ಕೃಷಿ ಮುಖಂಡರು!
ರೈತಾಪಿ ವರ್ಗ ಕಾಯಬೇಕಿದ್ದ ಅಧಿಕಾರಿಯ ಭ್ರಷ್ಟಾಚಾರದ ಕೃಷಿ ಕಂಡು ದಂಗಾದ ಕೃಷಿ ಮುಖಂಡರು!
Follow us on

ಗದಗ: ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿ ಅಪಾರ ಭ್ರಷ್ಟಾಚಾರ ಕೃಷಿ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಟಿಎಸ್ ರುದ್ರೇಶಪ್ಪ ಎಂಬ ರೈತಾಪಿ ವರ್ಗವನ್ನು ಕಾಯಬೇಕಿದ್ದ ಅಧಿಕಾರಿಯ ಭ್ರಷ್ಟಾಚಾರ ಕಂಡು ಅದೇ ಕೃಷಿಕರು ದಂಗಾಗಿಹೋಗಿದ್ದಾರೆ. ರುದ್ರೇಶಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದು ಕೆಜಿಗಟ್ಟಲೇ ಬಂಗಾರ, ಕೋಟ್ಯಂತರ ಹಣ ಪತ್ತೆಯಾಗಿದೆ. ಇದನ್ನು ಕಂಡು ಗದಗ ಜಿಲ್ಲೆಯ ರೈತರಷ್ಟೇ ಅಲ್ಲ, ರಾಜ್ಯದಲ್ಲಿ ಎಲ್ಲರೂ ದಂಗಾಗಿದ್ದಾರೆ.

ಈ ಬಗ್ಗೆ ಟಿವಿ 9 ಜೊತೆ ಮಾತನಾಡಿರುವ ರೈತ ಮುಖಂಡ ಪರಮೇಶಪ್ಪ ಜಂತ್ಲಿ ಅವರು ರುದ್ರೇಶಪ್ಪ ರೈತರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ರು. ಯೋಜನೆಗಳ ಬಗ್ಗೆ ಮಾಹಿತಿ, ಟ್ರ್ಯಾಕ್ಟರ್, ಬೀಜ ಗೊಬ್ಬರ ವಿಷಯದಲ್ಲಿ ಸಹಕಾರ ಮಾಡ್ತಾಯಿದ್ರ. ಆದ್ರೆ, ನಿನ್ನೆ ಅವ್ರ ಶಿವಮೊಗ್ಗ ಮನೆಯಲ್ಲಿ ಪತ್ತೆಯಾದ ಬಂಗಾರ, ಲಕ್ಷಾಂತರ ಹಣ ಸಿಕ್ಕಿದ್ದು‌ ನೋಡಿದ್ರೆ ನಾವು ದಂಗಾಗಿದ್ದೇವೆ. ನಮಗೆ ಈಗ ಅನುಮಾನ ಬರ್ತಾಯಿದೆ ಎಂದು ಮೂಗನ ಮೇಲೆ ಬೆರಳಿಟ್ಟುಕೊಂಡು ಪ್ರತಿಕ್ರಿಯಿಸಿದ್ದಾರೆ.

ಎರಡ್ಮೂರು ವರ್ಷಗಳಿಂದ ಅತಿವೃಷ್ಠಿ, ಅನಾವೃಷ್ಠಿ ಹಾಗೂ ಬೆಳೆ ವಿಮೆ ರೈತರಿಗೆ ಸರಿಯಾಗಿ ತಲುಪಿಲ್ಲ. ಹೀಗಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿಎಸ್ ರುದ್ರೇಶಪ್ಪ ರೈತರ ಹಣ ನುಂಗಿರಬೇಕು ಅಂತ ಅನುಮಾನ ಕಾಡ್ತಾಯಿದೆ. ಹೀಗಾಗಿ ಸರ್ಕಾರ ಸಮಗ್ರವಾಗಿ ತನಿಖೆ ಮಾಡಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎಸಿಬಿ ಅಧಿಕಾರಿಗಳು ನಿನ್ನೆ ರಾತ್ರಿ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇಂದು ವಿಚಾರಣೆ ಬಳಿಕ ಶಿವಮೊಗ್ಗ ಕೋರ್ಟ್‌ಗೆ ಹಾಜರು ಪಡಿಸುವ ಸಾಧ್ಯತೆಯಿದೆ.

ರುದ್ರೇಶಪ್ಪ ಮನೆ ಮೇಲೆ ಎಸಿಬಿ ದಾಳಿ ಹಿನ್ನೆಲೆ ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಇದೀಗ ನೀರವ ಮೌನ ಮನೆಮಾಡಿದೆ. ನಿನ್ನೆ ರುದ್ರೇಶಪ್ಪಗೆ ಸೇರಿದ ಗದಗ ಮನೆ, ಕಚೇರಿ ಹಾಗೂ ಶಿವಮೊಗ್ಗ ಮನೆ ಸೇರಿ ಐದು ಕಡೆ ಎಸಿಬಿ ದಾಳಿ ನಡೆಸಿತ್ತು. ಶಿವಮೊಗ್ಗ ಮನೆಯಲ್ಲಿ ಕೆಜಿ ಗಟ್ಟಲೇ ಬಂಗಾರ, ಲಕ್ಷಾಂತರ ಹಣ ಪತ್ತೆಯಾಗಿತ್ತು. ಗದಗ ಜಂಟಿ ನಿರ್ದೇಶಕರ ಚಿನ್ನದ ಕೃಷಿ ಕಥೆ ಬಟಾಬಯಲಾಗುತ್ತಿದ್ದಂತೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಂಗಾಲಾಗಿದ್ದಾರೆ.

ಇದನ್ನೂ ಓದಿ:
ಎಸಿಬಿ ಭರ್ಜರಿ ದಾಳಿ: ಭ್ರಷ್ಟರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಫಿಕ್ಸ್, ಜೈಲು ಶಿಕ್ಷೆ ಆಗಬಹುದಾ? ಒಂದು ಪಕ್ಷಿನೋಟ

Published On - 9:46 am, Thu, 25 November 21