ಎಸಿಬಿ ಭರ್ಜರಿ ದಾಳಿ: ಭ್ರಷ್ಟರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಫಿಕ್ಸ್, ಜೈಲು ಶಿಕ್ಷೆ ಆಗಬಹುದಾ? ಒಂದು ಪಕ್ಷಿನೋಟ

TV9 Digital Desk

| Edited By: Ayesha Banu

Updated on: Nov 25, 2021 | 10:06 AM

ನಿನ್ನೆ ನಡೆದ ದಾಳಿ ವೇಳೆ ಪತ್ತೆಯಾದ ಆಸ್ತಿ, ಚಿನ್ನಾಭರಣ, ಖರ್ಚಿನ ಮೌಲ್ಯಮಾಪನ, ಒಟ್ಟು ಸ್ಥಿರಾಸ್ತಿ, ಚರಾಸ್ತಿಯನ್ನು ಎಸಿಬಿ ಲೆಕ್ಕ ಹಾಕಲಿದೆ. ದಾಳಿಗೊಳಗಾದವರ ಬಳಿ ಸರ್ಕಾರಿ ಸೇವೆಗೆ ಸೇರಿದ ದಿನದಿಂದ ಬಂದ ಸಂಬಳದ ಲೆಕ್ಕ ಹಾಗೂ ಉಳಿಕೆ ಹೆಚ್ಚಿನ ಆಸ್ತಿಗೆ ಲೆಕ್ಕ ಕೇಳಲಿದೆ.

ಎಸಿಬಿ ಭರ್ಜರಿ ದಾಳಿ: ಭ್ರಷ್ಟರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ಫಿಕ್ಸ್, ಜೈಲು ಶಿಕ್ಷೆ ಆಗಬಹುದಾ? ಒಂದು ಪಕ್ಷಿನೋಟ
ಎಸಿಬಿ ದಾಳಿ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನವೆಂಬರ್ 24 ರಂದು ಎಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ ಚಿನ್ನ, ಬೆಳ್ಳಿ, ಆಸ್ತಿ-ಪಾಸ್ತಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈಗ ಎಸಿಬಿ ದಾಳಿಗೊಳಗಾದವರ ವಿರುದ್ಧ ಕೇಸ್ ಫಿಕ್ಸ್ ಆಗಿದೆ. ಎಸಿಬಿ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ದಾಖಲಿಸಿದೆ. ಹಾಗಾದರೆ ಕೇಸ್ ದಾಖಲಾದ್ರೆ ಮುಂದೆ ಏನಾಗಬಹುದು ಎಂಬ ವಿವರ ಇಲ್ಲಿದೆ.

ನಿನ್ನೆ ನಡೆದ ದಾಳಿ ವೇಳೆ ಪತ್ತೆಯಾದ ಆಸ್ತಿ, ಚಿನ್ನಾಭರಣ, ಖರ್ಚಿನ ಮೌಲ್ಯಮಾಪನ, ಒಟ್ಟು ಸ್ಥಿರಾಸ್ತಿ, ಚರಾಸ್ತಿಯನ್ನು ಎಸಿಬಿ ಲೆಕ್ಕ ಹಾಕಲಿದೆ. ದಾಳಿಗೊಳಗಾದವರ ಬಳಿ ಸರ್ಕಾರಿ ಸೇವೆಗೆ ಸೇರಿದ ದಿನದಿಂದ ಬಂದ ಸಂಬಳದ ಲೆಕ್ಕ ಹಾಗೂ ಉಳಿಕೆ ಹೆಚ್ಚಿನ ಆಸ್ತಿಗೆ ಲೆಕ್ಕ ಕೇಳಲಿದೆ. ಇದಕ್ಕೆ ಸಮರ್ಪಕ ದಾಖಲೆ ಲೆಕ್ಕ ಕೊಟ್ಟರೆ ಕೇಸ್ ಮುಕ್ತಾಯಗೊಳುತ್ತೆ. ಇಲ್ಲವಾದರೆ ಎಸಿಬಿ ಕೋರ್ಟ್‌ಗೆ ಆರೋಪಪಟ್ಟಿ ದಾಖಲಿಸುತ್ತೆ. ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತೆ. ನಂತರ ಕೋರ್ಟ್‌ನಲ್ಲೂ ಎಸಿಬಿ ಆರೋಪ ಸಾಬೀತುಪಡಿಸಬೇಕು. ಆರೋಪ ಸಾಬೀತಾದರೆ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. 7 ವರ್ಷದವರೆಗೆ ಶಿಕ್ಷೆ ವಿಧಿಸುವುದಕ್ಕೂ ಅವಕಾಶವಿದೆ.

ಎಸಿಬಿ ದಾಳಿಯಲ್ಲಿ T.S.ರುದ್ರೇಶಪ್ಪ ಬಳಿ ಸಿಕ್ಕ ಆಸ್ತಿಪಾಸ್ತಿ ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಬಳಿ ಬರೋಬ್ಬರಿ 9.4 ಕೆ.ಜಿ. ಚಿನ್ನದ ಬಿಸ್ಕೆಟ್ಸ್ ಪತ್ತೆಯಾಗಿದೆ. 3 ಕೆ.ಜಿ. ಬೆಳ್ಳಿ, 20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಸಿಕ್ಕಿದೆ. ಇನ್ನು ಶಿವಮೊಗ್ಗ ಸಿಟಿಯಲ್ಲೇ ರುದ್ರೇಶಪ್ಪರ 2 ವಾಸಯೋಗ್ಯ ಮನೆ, 2 ಕಾರು, 2 ಟೂ ವ್ಹೀಲರ್ಸ್ ಇದ್ದು 8 ಎಕರೆ ಕೃಷಿ ಜಮೀನು ಒಡೆಯನಾಗಿದ್ದಾನೆ. ವಿವಿಧ ಕಡೆಗಳಲ್ಲಿ T.S.ರುದ್ರೇಶಪ್ಪ 4 ನಿವೇಶನ ಹೊಂದಿದ್ದಾರೆ. ದಾಳಿ ವೇಳೆ ರುದ್ರೇಶಪ್ಪಗೆ ಸೇರಿದ 15.94 ಲಕ್ಷ ಕ್ಯಾಷ್ ಜಪ್ತಿ ಮಾಡಲಾಗಿದೆ.

ಶಾಂತಗೌಡ ಬಳಿ ಪೈಪ್‌ನಲ್ಲಿ ಹಣದ ಕಂತೆಕಂತೆ ಪತ್ತೆ ಕಲಬುರಗಿ ಜಿಲ್ಲೆ ಜೇವರ್ಗಿಯ PWD ಕಚೇರಿ ಜೆಇ ಶಾಂತಗೌಡ @ಎಸ್.ಬಿ.ಬಿರಾದರ್‌ ಬಳಿ 54.50 ಲಕ್ಷ ಹಾರ್ಡ್‌ ಕ್ಯಾಷ್ ಪತ್ತೆಯಾಗಿದೆ. ಶಾಂತಗೌಡರ ಪೈಪ್‌ನಲ್ಲಿ ಹಣ ಇಟ್ಟಿದ್ದ. ಕಲಬುರಗಿಯಲ್ಲಿ 2 ವಾಸದ ಮನೆ, ಬೆಂಗಳೂರಿನಲ್ಲಿ ಸೈಟ್ ಇದೆ. ಶಾಂತಗೌಡ ಬಳಿ 3 ಕಾರು, 1 ಟೂವ್ಹೀಲರ್, 1 ಸ್ಕೂಲ್ ಬಸ್, 2 ಟ್ರ್ಯಾಕ್ಟರ್ಸ್, 100 ಗ್ರಾಂ ಚಿನ್ನಾಭರಣ, ಬರೋಬ್ಬರಿ 36 ಎಕರೆ ಕೃಷಿ ಜಮೀನು ಪತ್ತೆ ಬಗ್ಗೆ ಮಾಹಿತಿ ಇದೆ. 15 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತು ಪತ್ತೆಯಾಗಿದೆ.

ಸಕಾಲ ಮಿಷನ್‌ ಆಡಳಿತಾಧಿಕಾರಿ ಬಳಿ ಸಿಕ್ಕ ಆಸ್ತಿಪಾಸ್ತಿ ‘ಸಕಾಲ ಮಿಷನ್‌’ ಆಡಳಿತಾಧಿಕಾರಿಯಾಗಿರುವ ನಾಗರಾಜ್‌ಗೆ ಬೆಂಗಳೂರಲ್ಲಿ 1, ನೆಲಮಂಗಲದಲ್ಲಿ 1 ಮನೆ ಇದೆ. ನೆಲಮಂಗಲದಲ್ಲಿ ನಾಗರಾಜ್‌ಗೆ 11 ಎಕರೆ 26 ಗುಂಟೆ ಜಮೀನು ಇದೆ. ನೆಲಮಂಗಲದಲ್ಲಿ ಒಂದು ಕೈಗಾರಿಕೆ ಉದ್ದೇಶದ ಕಟ್ಟಡ ಹಾಗೂ 3 ಕಾರು, ಲಕ್ಷಾಂತರ ಮೌಲ್ಯದ ಚಿನ್ನ ಪತ್ತೆಯಾಗಿದೆ. 7 ಕೆ.ಜಿ. 284 ಬೆಳ್ಳಿ ಆಭರಣ, 43 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ₹14 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ನೀರಾವರಿ ಇಲಾಖೆಯ ಇಂಜಿನಿಯರ್‌ ಬಳಿ ಸಿಕ್ಕ ಆಸ್ತಿಪಾಸ್ತಿ ಕೆ.ಆರ್.ಪೇಟೆಯ HLBC-3 ಎಇ ಶ್ರೀನಿವಾಸ್ಗೆ ಮೈಸೂರು ಜಿಲ್ಲೆಯಲ್ಲಿ ಮನೆ, ಸೈಟ್ ಇದೆ. ಮೈಸೂರು ಸಿಟಿಯಲ್ಲಿ 1 ಫ್ಲ್ಯಾಟ್, ಸಿಟಿಯಲ್ಲಿ 2 ಸೈಟ್, ಮೈಸೂರು ಜಿಲ್ಲೆಯಲ್ಲಿ 4 ಎಕರೆ 34 ಗುಂಟೆ ಜಮೀನು ಇರುವುದು ಪತ್ತೆಯಾಗಿದೆ. ನಂಜನಗೂಡಿನಲ್ಲಿ ಶ್ರೀನಿವಾಸ್‌ಗೆ ಸೇರಿದ ಫಾರ್ಮ್‌ಹೌಸ್ ಇದೆ. 2 ಕಾರು, 2 ಬೈಕ್, 1 ಕೆ.ಜಿ. ಚಿನ್ನಾಭರಣ, 8.8 ಕೆ.ಜಿ. ಬೆಳ್ಳಿ ಇದ್ದು ಕೆ.ಶ್ರೀನಿವಾಸ್ ಬಳಿ 9.85 ಲಕ್ಷ ಹಣ ಪತ್ತೆಯಾಗಿದೆ. ಅಲ್ಲದೆ ಬ್ಯಾಂಕ್‌ಗಳಲ್ಲಿ ₹22 ಲಕ್ಷ ಠೇವಣಿ ಕೂಡ ಹೊಂದಿದ್ದಾರೆ. 8 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಲಿಂಗೇಗೌಡ ಬಳಿ ಸಿಕ್ಕ ಆಸ್ತಿ ಬಗ್ಗೆ ಎಸಿಬಿ ಮಾಧ್ಯಮ ಪ್ರಕಟಣೆ ಮಂಗಳೂರು ಪಾಲಿಕೆ ಸ್ಮಾರ್ಟ್‌ ಸಿಟಿ ಯೋಜನೆ ಇಇ ಕೆ.ಎಸ್.ಲಿಂಗೇಗೌಡ ಮಂಗಳೂರಿನಲ್ಲಿ ಒಂದು ಮನೆ ಇರುವ ಮಾಹಿತಿ ಸಿಕ್ಕಿದೆ. ಚಾಮರಾಜನಗರ, ಮಂಗಳೂರಿನಲ್ಲಿ 3 ನಿವೇಶನಗಳು, 2 ಕಾರು, 1 ಬೈಕ್, 1 ಕೆಜಿ ಬೆಳ್ಳಿ ಆಭರಣ ಹಾಗೂ 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಬಗ್ಗೆ ಎಸಿಬಿಗೆ ಮಾಹಿತಿ ನೀಡಿದೆ.

ಗುಮಾಸ್ತ ಹುದ್ದೆಯಲ್ಲಿರುವ ಜಿ.ವಿ.ಗಿರಿ ಬಳಿ ಸಿಕ್ಕ ಆಸ್ತಿ ಡಿಟೇಲ್ಸ್ ಗ್ರೂಪ್ ಡಿ ನೌಕರ ಗಿರಿ ಆಸ್ತಿ ಬಗ್ಗೆ ACB ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಗುಮಾಸ್ತ ಗಿರಿ ಬಳಿ ಬೆಂಗಳೂರಿನಲ್ಲೇ 6 ವಾಸ ಯೋಗ್ಯ ಮನೆಗಳು, 4 ಕಾರು, 4 ಬೈಕ್ ಹೊಂದಿರುವ ಬಗ್ಗೆ ಎಸಿಬಿ ಮಾಹಿತಿ ನೀಡಿದೆ. ಜಿ.ವಿ.ಗಿರಿ ಬಳಿ 8 ಕೆಜಿ ಬೆಳ್ಳಿ, 1.18 ಲಕ್ಷ ರೂ. ಕ್ಯಾಷ್, ₹15 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಬಿಬಿಎಂಪಿ ಬಾಲಕ, ಬಾಲಕಿಯರ ಶಾಲೆಯ ಗುಮಾಸ್ತ ಜಿ.ವಿ.ಗಿರಿ ಆಸ್ತಿಪಾಸ್ತಿ ಬಗ್ಗೆ ಎಸಿಬಿ ತನಿಖೆ ಮುಂದುವರೆಸಿದೆ.

ಬಿಬಿಎಂಪಿ FDA ಮಾಯಣ್ಣ ಬಳಿ ಸಿಕ್ಕ ಆಸ್ತಿಪಾಸ್ತಿ ಡಿಟೇಲ್ಸ್ ಮಾಯಣ್ಣನಿಗೆ ಬೆಂಗಳೂರಿನಲ್ಲೇ 4 ವಾಸ ಯೋಗ್ಯ ಮನೆಗಳು, ಹಾಗೂ ವಿವಿಧ ಕಡೆ 4 ನಿವೇಶನಗಳಿರುವ ಮಾಹಿತಿ ಇದೆ. 2 ಎಕರೆ ಕೃಷಿ ಜಮೀನು ಹೊಂದಿರುವ ಮಾಯಣ್ಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರಂತೆ. ಮಾಯಣ್ಣಗೆ ಸೇರಿದ 2 ಬೈಕ್, ಒಂದು ಕಾರು ಪತ್ತೆಯಾಗಿದೆ. ₹10 ಲಕ್ಷ ನಿಶ್ಚಿತ ಠೇವಣಿ, 59 ಸಾವಿರ ರೂ. ನಗದು ಪತ್ತೆಯಾಗಿದೆ. ಮಾಯಣ್ಣ ಉಳಿತಾಯ ಖಾತೆಯಲ್ಲಿ 1.5 ಲಕ್ಷ ರೂ. ಇದ್ದು 600 ಗ್ರಾಂ ಚಿನ್ನ, 2 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಪತ್ತೆಯಾಗಿದ. ಮಾಯಣ್ಣಗೆ ಸೇರಿದ ಆಸ್ತಿ ಬಗ್ಗೆ ACB ತನಿಖೆ ಮುಂದುವರಿಸಿದೆ.

ಬಳ್ಳಾರಿ ರಿಟೈರ್ಡ್ ಸಬ್‌ ರಿಜಿಸ್ಟ್ರಾರ್ ಶಿವಾನಂದ್ ಆಸ್ತಿ ಮಾಹಿತಿ ಮಂಡ್ಯ ಸಿಟಿಯಲ್ಲಿ K.S.ಶಿವಾನಂದ್‌ಗೆ ಸೇರಿದ 1 ವಾಸದ ಮನೆ, ಬೆಂಗಳೂರಿನಲ್ಲಿ ಒಂದು ನಿವೇಶನವಿದೆ. ಬಳ್ಳಾರಿ ಜಿಲ್ಲೆ ಮೋಕಾ ಗ್ರಾಮದಲ್ಲಿ 7 ಎಕರೆ ಕೃಷಿ ಜಮೀನು ಇದೆ. ಹಾಗೂ 8 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಘಿವೆ. ಕೆ.ಎಸ್.ಶಿವಾನಂದ್ ಆಸ್ತಿಪಾಸ್ತಿ ಬಗ್ಗೆ ಎಸಿಬಿ ತನಿಖೆ ಮುಂದುವರೆದಿದೆ.

ಪಿಸಿಯೋಥೆರಪಿಸ್ಟ್ S.S.ರಾಜಶೇಖರ್ ಆಸ್ತಿಪಾಸ್ತಿ ಬಗ್ಗೆ ಡೀಟೇಲ್ಸ್ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಪಿಸಿಯೋಥೆರಪಿಸ್ಟ್ ಆಗಿರುವ S.S.ರಾಜಶೇಖರ್ಗೆ ಯಲಹಂಕದ ಮಾರಸಂದ್ರದಲ್ಲಿ 1 ಫ್ಲ್ಯಾಟ್, ಯಲಹಂಕದ ಮೈಲನಹಳ್ಳಿಯಲ್ಲಿ 1 ಸೈಟ್‌, ಯಲಹಂಕದ ಶಿವನಹಳ್ಳಿಯಲ್ಲಿ 2 ಅಂತಸ್ತಿನ ಒಂದು ಫ್ಲ್ಯಾಟ್, ಶಿವನಹಳ್ಳಿಯ ಫ್ಲ್ಯಾಟ್‌ನ ಕೆಳ ಮಹಡಿಯಲ್ಲಿ ಖಾಸಗಿ ಆಸ್ಪತ್ರೆ, 1 ಕಾರ್, 1 ಬೈಕ್, 4 ಲಕ್ಷದ ಗೃಹೋಪಯೋಗಿ ವಸ್ತುಗಳಿವೆ. ರಾಜಶೇಖರ್ ಆಸ್ತಿ ಬಗ್ಗೆ ತನಿಖೆ ಮುಂದುವರೆದಿದೆ.

ಬಿ.ಕೃಷ್ಣಾರೆಡ್ಡಿ ಬಳೀ ಪತ್ತೆಯಾದ ಆಸ್ತಿ ಡಿಟೇಲ್ಸ್ ನಂದಿನಿ ಹಾಲು ಉತ್ಪನ್ನಗಳು ಪ್ರಧಾನ ವ್ಯವಸ್ಥಾಪಕ ಬಿ.ಕೃಷ್ಣಾರೆಡ್ಡಿ ಬಳಿ 3 ಲಕ್ಷ ನಗದು, 383 ಗ್ರಾಂ ಚಿನ್ನಾಭರಣ, 3395 ಗ್ರಾಂ ಬೆಳ್ಳಿ ವಸ್ತು, ಹೊಸಕೋಟೆ ತಾಲೂಕಿನಲ್ಲಿ ಒಂದು ಪೆಟ್ರೋಲ್ ಬಂಕ್, ವಿವಿಧ ನಗರಗಳಲ್ಲಿ 3 ವಾಸದ ಮನೆ, ವಿವಿಧೆಡೆ 9 ನಿವೇಶನ, ಚಿಂತಾಮಣಿ ತಾಲೂಕಿನಲ್ಲಿ 5 ಎಕರೆ 30 ಗುಂಟೆ ಜಮೀನು ಪತ್ತೆಯಾಗಿದೆ.

ವಾಸುದೇವ್ ಮನೆಯ ಮೇಲೆ ಎಸಿಬಿ ದಾಳಿ ವೇಳೆ ಪತ್ತೆಯಾದ ಆಸ್ತಿ ಡಿಟೇಲ್ಸ್ ಬೆಂಗಳೂರು ನಿರ್ಮಿತಿ ಕೇಂದ್ರದ ನಿವೃತ್ತ ಪ್ರಾಜೆಕ್ಟ್ ಮ್ಯಾನೇಜರ್ ವಾಸುದೇವ್ ಬಳಿ 98 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. 15 ಲಕ್ಷ ನಗದು, 850 ಗ್ರಾಂ ಚಿನ್ನಾಭರಣ, 9 ಕೆಜಿ 500 ಗ್ರಾಂ ಬೆಳ್ಳಿ ವಸ್ತುಗಳು, ಬೆಂಗಳೂರಿನಲ್ಲಿ 5 ಮನೆ, ನೆಲಮಂಗಲ ತಾಲೂಕಿನ ಸೋಂಪುರದಲ್ಲಿ 4 ಮನೆಗಳು, ಬೆಂಗಳೂರಿನಲ್ಲಿ 8 ನಿವೇಶನ, 10 ಎಕರೆ 20 ಗುಂಟೆ ಜಮೀನು, ನೆಲಮಂಗಲ, ಮಾಗಡಿ ತಾಲೂಕಿನಲ್ಲಿರುವ ಕೃಷಿ ಜಮೀನು ಪತ್ತೆಯಾಗಿದೆ.

ದೊಡ್ಡಬಳ್ಳಾಪುರ ಕಂದಾಯ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ ಬಳಿ ಪತ್ತೆಯಾದ ಆಸ್ತಿಯ ಡಿಟೇಲ್ಸ್ 1 ಲಕ್ಷ 13 ಸಾವಿರ ನಗದು ಪತ್ತೆ, 750 ಗ್ರಾಂ ಚಿನ್ನಾಭರಣ, 15 ಕೆಜಿ ಬೆಳ್ಳಿ ವಸ್ತುಗಳು, ವಿವಿಧ ಕಡೆ 5 ವಾಸದ ಮನೆಗಳು, 6 ನಿವೇಶನ, ದೊಡ್ಡಬಳ್ಳಾಪುರದಲ್ಲಿ 24 ಗುಂಟೆ ಜಮೀನು, 1 ಕಾರು, 2 ಬೈಕ್ನು ಲಕ್ಷ್ಮೀ ನರಸಿಂಹಯ್ಯ ಹೊಂದಿದ್ದಾರೆ.

ಬೆಳಗಾವಿ ಹೆಸ್ಕಾಂ ವಿಭಾಗದ ಗ್ರೂಪ್ ಸಿ ನೌಕರ ನಾತಾಜಿ ಮನೆ ಬಳಿ ಸಿಕ್ಕ ಆಸ್ತಿ ವಿವರ 20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, 38 ಸಾವಿರ ನಗದು, 239 ಗ್ರಾಂ ಚಿನ್ನಾಭರಣ, 1 ಕೆಜಿ 803 ಗ್ರಾಂ ಬೆಳ್ಳಿ, ಬೆಳಗಾವಿಯಲ್ಲಿ 1 ಮನೆ, 2 ನಿವೇಶನ, 1 ಕಾರು, 2 ಬೈಕ್ ಪತ್ತೆಯಾದೆ.

ಬೈಲಹೊಂಗಲ ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿ ಬಳಿ ಸಿಕ್ಕ ಆಸ್ತಿ ಡಿಟೇಲ್ಸ್ 1 ಲಕ್ಷ 10 ಸಾವಿರ ನಗದು, 263 ಗ್ರಾಂ ಚಿನ್ನಾಭರಣ, 945 ಬೆಳ್ಳಿ ವಸ್ತುಗಳು, ಬೈಲಹೊಂಗಲದಲ್ಲಿ 2 ಮನೆಗಳು, 4 ನಿವೇಶನಗಳು, 4 ಕಾರು, 6 ಬೈಕ್‌ಗಳು ಪತ್ತೆಯಾಗಿವೆ. 5 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತು, 1 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಷೇರು ಪತ್ತೆಯಾಗಿದೆ.

ಇದನ್ನೂ ಓದಿ: ACB Raid: ರೈತಾಪಿ ವರ್ಗ ಕಾಯಬೇಕಿದ್ದ ಅಧಿಕಾರಿಯ ‘ಭ್ರಷ್ಟಾಚಾರದ ಕೃಷಿ’ ಕಂಡು ದಂಗಾದ ಕೃಷಿ ಮುಖಂಡರು!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada