ಗದಗ, ಫೆ.16: ಅಂಗನವಾಡಿ ಮಕ್ಕಳ ಜೀವದ ಜೊತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚೆಲ್ಲಾಟವಾಡುತ್ತಿದ್ದು, ಮಕ್ಕಳಿಗೆ ಸಂಪೂರ್ಣ ಕಳಪೆ ಆಹಾರ ಪೂರೈಕೆ ಮಾಡಿದ ಘಟನೆ ಗದಗ(Gadag) ನಗರದ ಗಂಗಾಪೂರ ಪೇಟೆಯ ಅಂಗನವಾಡಿ ಕೇಂದ್ರ 178ರಲ್ಲಿ ಬೆಳಕಿಗೆ ಬಂದಿದೆ. ಕೊಳೆತ ಮೊಟ್ಟೆ, ಬೂಸ್ಟ್ ಹಿಡಿದ ಶೇಂಗಾ ಚಿಕ್ಕಿ ಹಾಗೂ ತರಕಾರಿ ಸೇರಿದಂತೆ ಆಹಾರ ಧಾನ್ಯಗಳಲ್ಲಿ ನುಸಿಗಳು ಕಂಡು ಬರುತ್ತಿವೆ. ಅದನ್ನೇ ಮಕ್ಕಳಿಗೆ ನೀಡುತ್ತಿರುವ ಹಿನ್ನಲೆ ರೊಚ್ವಿಗೆದ್ದ ಪಾಲಕರು, ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉಪನಿರ್ದೇಶಕ ಶೆಟ್ಟೆಪ್ಪನವರನ್ನು ಹಿಗ್ಗಾಮುಗ್ಗಾ ತರಾಟೆಗೆ ತಹೆದುಕೊಂಡು ಕಳಪೆ ಆಹಾರ ಧಾನ್ಯಗಳನ್ನು ಅಧಿಕಾರಿಗಳ ಎದುರೆ ಸುರಿದ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಿಗಳು ಕಚ್ಚಿದ ತರಕಾರಿಯನ್ನೇ ಮಕ್ಕಳಿಗೆ ತಿನ್ನುಸುತ್ತಿರುವ ಕಾರ್ಯಕರ್ತೆ ಹಾಗೂ ಸಹಾಯಕಿ ವಿರುದ್ಧ ಕಿಡಿಕಾರಿದ್ದಾರೆ. ಕಳಪೆ ಆಹಾರ ತಿಂದು ಮಕ್ಕಳು ಆರೋಗ್ಯ ಹದಗೆಡುತ್ತಿದ್ದು, ಹೊಟ್ಟೆ ನೋವಿನಿಂದ ಬಳಲಿ ಫುಡ್ ಪಾಯಿಜನ್ ಆಗಿ ಆಸ್ಪತ್ರೆಗೆ ಸೇರುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ ಸರಬರಾಜು ಅಗಿರುವುದನ್ನು ಒಪ್ಪಿ ವಿಷಾದ ವ್ಯಕ್ತಪಡಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್
ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ‘ಇದು ಗರ್ಭೀಣಿ ಮಹಿಳೆಯರು ಹಾಗೂ ಮಕ್ಕಳಿಗೆ ಕೊಡಬೇಕಾದಂತಹ ಆಹಾರವಾಗಿದೆ. ಆದರೆ, ಇಲ್ಲಿನ ಕಾರ್ಯಕರ್ತೆಯ ನಿರ್ಲಕ್ಷ್ಯತನದಿಂದ ಆಹಾರ ಪದ್ದಾರ್ಥಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ, ಆದ್ದರಿಂದ ಈ ಕೂಡಲೇ ಆಕೆಯ ಮೇಲೆ ಸೂಕ್ತ ಕ್ರಮಕೈಗೊಂಡು ಅಮಾನತ್ತುಗೊಳಿಸುತ್ತೇವೆ. ಜೊತೆಗೆ ಇದೇ ಗ್ರಾಮದ ಒಳ್ಳೆಯ ಕಾರ್ಯಕರ್ತೆಗೆ ಇಲ್ಲಿನ ಅಧಿಕಾರ ಕೊಟ್ಟು ನಿರ್ವಹಣೆ ಮಾಡಲು ನಾವು ವ್ಯವಸ್ಥೆ ಮಾಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ