Rotten Eggs: ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ ಸರಬರಾಜು ಅಗಿರುವುದನ್ನು ಒಪ್ಪಿ ವಿಷಾದ ವ್ಯಕ್ತಪಡಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್
ರಾಮನಗರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲೂ ಕೊಳೆತ ಮೊಟ್ಟೆ ಸರಬರಾಜಾಗಿವೆ ಅಂತ ಅವರೇ ಹೇಳಿದ್ದು ಶ್ಲಾಘನೀಯ
ಬೆಂಗಳೂರು: ಮೊದಲ ಬಾರಿಗೆ ಸಚಿವರಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಪ್ರಬುದ್ಧತೆಯನ್ನು ಪ್ರದರ್ಶಿಸಿ ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿರುವ ಲಕ್ಷ್ಮಿಪುರ ಗ್ರಾಮದ ಅಂಗನವಾಡಿ ಕೇಂದ್ರದ (Anganwadi centre) ಮಕ್ಕಳಿಗೆ ನೀಡಲು ಸರಬರಾಜಾಗಿದ್ದ ಮೊಟ್ಟೆಗಳಲ್ಲಿ ಬಹಳಷ್ಟು ಕೊಳೆತಿದ್ದವು (rotten) ಮತ್ತು ಈ ಅಂಶ ರಾಜ್ಯದೆಲ್ಲೆಡೆ ಚಯಾಗುತ್ತಿದೆ. ಅದನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗಮನಕ್ಕೆ ತಂದಾಗ ಅವರು ವಿಷಯದಿಂದ ಪಲಾಯನ ಮಾಡುವ ಪ್ರಯತ್ನವಾಗಲೀ, ಪ್ರಮಾದವನ್ನು ಅಧಿಕಾರಿಗಳ ಮೇಲೆ ಹಾಕುವುದಾಗಲೀ ಅಥವಾ ವಿಷಯ ತನ್ನ ಗಮನಕ್ಕೆ ಬಂದಿಲ್ಲ ಅಂತ ಹೇಳದೆ ತಪ್ಪನ್ನು ಒಪ್ಪಿಕೊಂಡು ಕೂಡಲೇ ಗಮನ ಹರಿಸಿ ಮುಂದೆ ಹೀಗಾಗದಂತೆ ಎಚ್ಚರವಹಿಸುವುದಾಗಿ ಹೇಳಿದರು. ರಾಮನಗರ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲೂ ಕೊಳೆತ ಮೊಟ್ಟೆ ಸರಬರಾಜಾಗಿವೆ ಅಂತ ಅವರೇ ಹೇಳಿದ್ದು ಶ್ಲಾಘನೀಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos