ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳ ದರ್ಪ; ಬ್ಯಾಂಕ್ಗೆ ಕರೆತಂದು ಸಾಲದ ಪತ್ರಕ್ಕೆ ಹೆಬ್ಬಟ್ಟು ಒತ್ತಿಸಿಕೊಂಡರು
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಕ್ಕೂರ ಗ್ರಾಮದಲ್ಲಿ ಬಸವರಾಜ್ ನಿಟ್ಟಾಲಿ ಎಂಬ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳು ದರ್ಪ ತೋರಿದ್ದಾರೆ ಎನ್ನಲಾಗುತ್ತಿದೆ. ಪದೇ ಪದೇ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ತನ್ನನ್ನು ಎತ್ತಾಕಿಕೊಂಡು ಹೋಗಿ ಬ್ಯಾಂಕ್ನಲ್ಲಿ ಕಿರುಕುಳ ನೀಡಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಗದಗ, ಅ.29: ರಾಜ್ಯದಲ್ಲಿ ಮಳೆ ಕೈ ಕೊಟ್ಟ ಹಿನ್ನೆಲೆ ಬರ ಆವರಿಸಿದೆ (Karnataka Rains). ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಇದರ ನಡುವೆ ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳು (Bank Officers) ಗೂಂಡಾವರ್ತನೆ ತೋರಿದ್ದಾರೆ. ಸಾಲ ಮರುಪಾವತಿ ಮಾಡುವಂತೆ ರೈತನನ್ನೆ (Farmer) ಬ್ಯಾಂಕಿಗೆ ಕರೆತಂದು ದಬ್ಬಾಳಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಅಧಿಕಾರಿಗಳ ಅಟ್ಟಹಾಸಕ್ಕೆ ಅನ್ನದಾತ ಕಂಗಾಲಾಗಿದ್ದಾನೆ.
ಹೌದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಕ್ಕೂರ ಗ್ರಾಮದಲ್ಲಿ ಬಸವರಾಜ್ ನಿಟ್ಟಾಲಿ ಎಂಬ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳು ದರ್ಪ ತೋರಿದ್ದಾರೆ ಎನ್ನಲಾಗುತ್ತಿದೆ. ಪದೇ ಪದೇ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ತನ್ನನ್ನು ಎತ್ತಾಕಿಕೊಂಡು ಹೋಗಿ ಬ್ಯಾಂಕ್ನಲ್ಲಿ ಕಿರುಕುಳ ನೀಡಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಬಸವರಾಜ್ ನಿಟ್ಟಾಲಿ ಅವರು ಬ್ಯಾಂಕಿನಲ್ಲಿ 1.70 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರು ಪಾವತಿ ಮಾಡುವಂತೆ ಮನೆಯಿಂದ ಒತ್ತಾಯಪೂರ್ವಕವಾಗಿ ಬ್ಯಾಂಕಿಗೆ ಕರೆತಂದು 2.20 ಲಕ್ಷ ರೂ ಸಾಲಕ್ಕೆ ಒತ್ತಾಯ ಪೂರ್ವಕವಾಗಿ ಸಾಲದ ಪತ್ರಕ್ಕೆ ಹೆಬ್ಬಟ್ಟು ಒತ್ತಿಸಿಕೊಂಡು ದಬ್ಬಾಳಿಕೆ ಮಾಡಿದ್ದಾರೆ. ಮಳೆ ಇಲ್ಲ, ಬೆಳೆ ಒಣಗಿದೆ. ಈಗ ಸಾಲ ಪಾವತಿ ಆಗಲ್ಲ ಅಂತ ಬೇಡಿಕೊಂಡ್ರು ಕರುಣೆ ತೋರದೆ ಮನೆಯಿಂದ ಕರೆದುಕೊಂಡು ಬಂದು ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳ ನಡೆಗೆ ರೈತ ರೊಚ್ಚಿಗೆದ್ದಿದ್ದಾರೆ. ಬ್ಯಾಂಕ್ ಅಧಿಕಾರಿಗಳ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿನ್ನೆ ಶನಿವಾರ ಬ್ಯಾಂಕ್ ರಜೆ ಇದ್ರೂ ರೈತನನ್ನು ಬ್ಯಾಂಕ್ಗೆ ಕರೆ ತಂದು ಹಿಂಸೆ ನೀಡಿದ್ದಾರೆ. ಭೀಕರ ಬರದಲ್ಲಿ ಸಾಲ ವಸೂಲಿಗೆ ಸರ್ಕಾರ ಬ್ರೇಕ್ ಹಾಕಿದ್ರೂ ರೈತರ ಮೇಲೆ ಅಧಿಕಾರಿಗಳ ದರ್ಪ ನಡೆಯುತ್ತಿದೆ. ಕೆನರಾ ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ರೈತ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಬರ ಅಧ್ಯಯನ ನಡೆಸಲು ಬಿಜೆಪಿ ತಯಾರಿ: 16 ನಾಯಕರ ನೇತೃತ್ವದಲ್ಲಿ ತಂಡಗಳ ರಚನೆ
ಗದಗ ಜಿಲ್ಲೆಯಲ್ಲಿ 258 ಕೋಟಿಯಷ್ಟು ಬೆಳೆ ಹಾನಿ
ಬರ ಗದಗ ಜಿಲ್ಲೆಯ ರೈತರ ಜೀವ ಹಿಂಡುತ್ತಿದೆ. ಜಿಲ್ಲೆಯಲ್ಲಿ 1.88 ಹೆಕ್ಟೇರ್ ಬೆಳೆ ಸಂಪೂರ್ಣ ಹಾನಿಯಾಗಿದೆ. ಒಣ ಬೇಸಾಯ, ತೋಟಗಾರಿಕೆ ಬೆಳೆ ಸೇರಿ 258 ಕೋಟಿ ಬೆಳೆಹಾನಿಯಾಗಿದೆ. ಹೆಸರು, ಶೇಂಗಾ, ಜೋಳ, ಸೂರ್ಯಕಾಂತಿ, ಮೆಣಸಿನಕಾಯಿ, ಈರುಳ್ಳಿ ಸೇರಿ ಹಲವು ಬೆಳೆಗಳನ್ನ ರೈತರು ಕಳೆದುಕೊಂಡಿದ್ದಾರೆ. ಜಾನುವಾರುಗಳಿಗೆ ಮೇವು ಹೇಗಪ್ಪ ಅನ್ನೋ ಚಿಂತೆ ಕಾಡ್ತಿದೆ.
ಗದಗ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:15 am, Sun, 29 October 23