ಬಿಜೆಪಿ ಡಿಜಿಟಲ್​ ಸಮಾವೇಶಕ್ಕೆ ತಟ್ಟಿದ ನೀತಿ ಸಂಹಿತೆ ಜಾರಿ ಬಿಸಿ: ಮಧ್ಯಾಹ್ನದ ಭೋಜನ ಮಠಕ್ಕೆ

ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಗದಗ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಡಿಜಿಟಲ್ ಕಾರ್ಯಕರ್ತರ ಸಮೇಳನಕ್ಕೆ ಬ್ರೆಕ್​ ಬಿದ್ದಿದೆ. ಹಾಗೇ ಕಾರ್ಯಕರ್ತರಿಗೆಂದು ತಯಾರಿಸಲಾಗಿದ್ದ ಭೋಜನವನ್ನು ಮಠಕ್ಕೆ ಕಳುಹಿಸಿದ್ದಾರೆ.

ಬಿಜೆಪಿ ಡಿಜಿಟಲ್​ ಸಮಾವೇಶಕ್ಕೆ ತಟ್ಟಿದ ನೀತಿ ಸಂಹಿತೆ ಜಾರಿ ಬಿಸಿ: ಮಧ್ಯಾಹ್ನದ ಭೋಜನ ಮಠಕ್ಕೆ
ಬಿಜೆಪಿ ಸಮಾವೇಶ ಸ್ಥಳಕ್ಕೆ ಚುನಾವಣಾ ಅಧಿಕಾರಿಗಳ ಭೇಟಿ
Follow us
ವಿವೇಕ ಬಿರಾದಾರ
|

Updated on:Mar 29, 2023 | 2:16 PM

ಗದಗ: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election) ದಿನಾಂಕ ಘೋಷಣೆಯೊಂದಿಗೆ ನೀತಿ ಸಂಹಿತೆ (Code of Conduct) ಜಾರಿಗೆಯಾಗಿದೆ. ಈ ಹಿನ್ನೆಲೆ ಗದಗ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಜಿಲ್ಲೆಯ ವಿವಿಧೆಡೆ ಹಾಕಿದ್ದ ಸಚಿವರು, ಶಾಸಕರು, ನಾಯಕರು ಹಾಕಿದ್ದ ಕಟೌಟ್ ಬ್ಯಾನರ್​ ಜೊತೆಗೆ ಸರ್ಕಾರದ ಬ್ಯಾನರ್​ಗಳನ್ನು ತೆರುವು ಮಾಡಿದ್ದಾರೆ. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನಕ್ಕೆ ಬ್ರೆಕ್​ ಬಿದ್ದಿದೆ. ಹಾಗೇ ಕಾರ್ಯಕರ್ತರಿಗೆಂದು ಗೋಧಿ ಹುಗ್ಗಿ, ಮೊಸರನ್ನ, ಬದನೆಕಾಯಿ ಪಲ್ಲೆ, ಅನ್ನ ಸಾರು ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಊಟವನ್ನು ಬಿಜೆಪಿ ನಗರದ ಮಠವೊಂದಕ್ಕೆ ರವಾನೆ ಮಾಡಿದೆ.

ಚುನಾವಣಾ ನೀತಿ ಸಂಹಿತೆ ಎಂದರೇನು?

ಚುನಾವಣೆ ಸಂದರ್ಭದಲ್ಲಿ ಎಲ್ಲಾ ಪಕ್ಷದ ನಾಯಕರು ನೀತಿ ಸಂಹಿತೆಯನ್ನು ಪಾಲಿಸಲೇಬೇಕಾಗುತ್ತದೆ. ವಾಸ್ತವವಾಗಿ, ಚುನಾವಣಾ ದಿನಾಂಕಗಳನ್ನು ಘೋಷಿಸಿದ ತಕ್ಷಣ, ರಾಜಕಾರಣಿಗಳಿಗೆ ತಕ್ಷಣವೇ ಮಾರ್ಗಸೂಚಿಗಳನ್ನು ನೀಡಲಾಗುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ಅವರು ಏನು ಮಾಡಬೇಕು ಮತ್ತು ಏನು ಮಾಡಬಾರದು. ಆಯೋಗವು ಹೊರಡಿಸಿದ ಮಾರ್ಗಸೂಚಿಗಳನ್ನು ಚುನಾವಣಾ ಅಭ್ಯರ್ಥಿಗಳು ತಮ್ಮ ಭಾಷಣಗಳಲ್ಲಿ ಮಾತ್ರವಲ್ಲದೆ ಎಲ್ಲಾ ರೀತಿಯ ಚುನಾವಣಾ ಪ್ರಚಾರಗಳಲ್ಲಿ ಮತ್ತು ಅವರ ಪ್ರಣಾಳಿಕೆಗಳಲ್ಲಿಯೂ ಅನುಸರಿಸಬೇಕು.

ಇದನ್ನೂ ಓದಿ: ದಿನಾಂಕ ಘೋಷಣೆ ಮುಂಚೆಯೇ ರಾಜ್ಯ ಸುತ್ತಿದ್ದ 3 ಪಕ್ಷಗಳು: ಯಾತ್ರೆಯಲ್ಲಿ ನೀಡಿದ ಭರವಸೆಗಳೇನು?

1- ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ಅಭ್ಯರ್ಥಿ ಮತದಾರರನ್ನು ಯಾವುದೇ ರೀತಿಯಲ್ಲಿ ಪ್ರೇರೇಪಿಸಲು ಪ್ರಯತ್ನಿಸುವಂತಿಲ್ಲ. ಯಾವುದೇ ಅಭ್ಯರ್ಥಿಯು ತನ್ನ ಮತದಾರರಿಗೆ ಮದ್ಯ ಅಥವಾ ಯಾವುದೇ ರೀತಿಯ ಲಂಚ ನೀಡುವ ಬಗ್ಗೆ ಮಾತನಾಡುವಂತಿಲ್ಲ. ಅವರು ಯಾವುದೇ ಮತದಾರರನ್ನು ಬೆದರಿಸಲು ಸಹ ಸಾಧ್ಯವಿಲ್ಲ. ಈ ರೀತಿ ಮಾಡಿ ಸಿಕ್ಕಿಬಿದ್ದರೆ ಚುನಾವಣಾ ಆಯೋಗ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬಹುದು.

2- ಯಾವುದೇ ಅಭ್ಯರ್ಥಿಯು ಧಾರ್ಮಿಕ ಅಥವಾ ಜಾತಿ ಭಾವನೆಗಳಿಗೆ ನೋವುಂಟು ಮಾಡುವ ಅಥವಾ ಪ್ರಚೋದಿಸುವ ಪ್ರಯತ್ನವೆಂದು ಪರಿಗಣಿಸಬಹುದಾದಂತಹ ಕೆಲಸವನ್ನು ಮಾಡಬಾರದು. ಈ ಸಂದರ್ಭದಲ್ಲಿ ಯಾರ ವಿರುದ್ಧವೂ ಅಶ್ಲೀಲ ಭಾಷೆ ಬಳಸುವಂತಿಲ್ಲ. ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರು ತಮ್ಮ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಮತಕ್ಕಾಗಿ ಮತದಾರರಲ್ಲಿ ಮನವಿ ಮಾಡುವಂತಿಲ್ಲ.

3- ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ವಾಹನ ಅಥವಾ ಸರ್ಕಾರಿ ವಿಮಾನವನ್ನು ಯಾವುದೇ ರೀತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ. ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ರೀತಿಯ ಸರ್ಕಾರಿ ಘೋಷಣೆಗಳು, ಉದ್ಘಾಟನೆ, ಶಂಕುಸ್ಥಾಪನೆ ಅಥವಾ ಭೂಮಿಪೂಜೆ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.

4- ಪಕ್ಷಗಳು ಯಾವುದೇ ಸಭೆ ಅಥವಾ ಕೂಟವನ್ನು ನಡೆಸಬೇಕಾದರೆ, ಅದಕ್ಕಾಗಿ ಆ ಪ್ರದೇಶದ ಸ್ಥಳೀಯ ಪೊಲೀಸರಿಗೆ ಅದರ ಬಗ್ಗೆ ತಿಳಿಸಬೇಕಾಗುತ್ತದೆ ಮತ್ತು ಇದಕ್ಕಾಗಿ ಸಂಬಂಧಪಟ್ಟ ಅಧಿಕಾರಿಯ ಅನುಮತಿ ಕೂಡ ಅಗತ್ಯ.

5- ಚುನಾವಣಾ ಆಯೋಗದಿಂದ ಮಾನ್ಯವಾದ ಪಾಸ್ ಹೊಂದಿರುವ ಮತದಾರರು ಮಾತ್ರ ಮತಗಟ್ಟೆ ಪ್ರವೇಶಿಸಬಹುದು.

6- ಚುನಾವಣಾ ಆಯೋಗವು ಪ್ರತಿ ಮತಗಟ್ಟೆಯ ಹೊರಗೆ ನಿರೀಕ್ಷಕರನ್ನು ನಿಯೋಜಿಸುತ್ತದೆ ಇದರಿಂದ ಯಾರಾದರೂ ನೀತಿ ಸಂಹಿತೆ ಉಲ್ಲಂಘಿಸಿದರೆ ಅವರಿಗೆ ದೂರು ನೀಡಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Wed, 29 March 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ