AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ ಜಿಲ್ಲೆಯ 4 ಸ್ಥಾನದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಎಚ್​.ಕೆ ಪಾಟೀಲ್ ಮನೆಗೆ ಹೋಗೋದು ಗ್ಯಾರಂಟಿ ಎಂದ ಪ್ರಲ್ಹಾದ್ ಜೋಶಿ

ಜಿಲ್ಲೆಯಲ್ಲಿ ನಾಲ್ಕೂ ಸ್ಥಾನದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಶಾಸಕ ಎಚ್​.ಕೆ ಪಾಟೀಲ್ ಮನೆಗೆ ಹೋಗೋದು ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್​ ನೀಡಿದ್ದಾರೆ.

ಗದಗ ಜಿಲ್ಲೆಯ 4 ಸ್ಥಾನದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಎಚ್​.ಕೆ ಪಾಟೀಲ್ ಮನೆಗೆ ಹೋಗೋದು ಗ್ಯಾರಂಟಿ ಎಂದ ಪ್ರಲ್ಹಾದ್ ಜೋಶಿ
ಪ್ರಹ್ಲಾದ್ ಜೋಶಿ, ಎಚ್​.ಕೆ ಪಾಟೀಲ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jan 02, 2023 | 9:30 PM

Share

ಗದಗ: ಜಿಲ್ಲೆಯಲ್ಲಿ ನಾಲ್ಕೂ ಸ್ಥಾನದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಶಾಸಕ ಎಚ್​.ಕೆ ಪಾಟೀಲ್ (HK Patil) ಮನೆಗೆ ಹೋಗೋದು ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟಾಂಗ್​ ನೀಡಿದ್ದಾರೆ. ವಾರ್ಡ್ ನಂಬರ್ 28 ಪಂಚಾಕ್ಷರಿ ನಗರದಲ್ಲಿ ನಡೆದ ಭೂತ ವಿಜಯ ಅಭಿಯಾನದಲ್ಲಿ ಅವರು ಮಾತನಾಡಿ, ಮನೆಗೆ ಹೋಗ್ತಾರೆ ಅಂತ ಗೋತ್ತಾಗಿ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಭೂತದಲ್ಲಿ ನಾವು ಗೆಲ್ಲಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತ ಕೆಲಸ ಮಾಡಬೇಕು. ನಮ್ಮ ಮನೆಯಲ್ಲಿ ಗಂಡು ಮಗು ಹುಟ್ಟಿದಾಗ ಪೇಡೆ ಹಂಚಬೇಕು. ಪಕ್ಕದ ಮನೆಯಲ್ಲಿ ಗಂಡು ಹುಟ್ಟಿದಾಗ ಪೇಡೆ ಹಂಚಿದ್ರೆ ಉಪಯೋಗ ಇಲ್ಲ. ಗದಗನಲ್ಲಿ ಈ ಬಾರಿ ಬಿಜೆಪಿ ಪರವಾದ ಮಗು ಹುಟ್ಟುತ್ತೆ ಎಂದು ಜೋಶಿ ಹೇಳಿದರು.

ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ  

ಎಂಟು ವರ್ಷ ದೇಶದಲ್ಲಿ ಆಮೂಲಾಗ್ರ ಬದಲಾವಣೆ ನಡೆಯುತ್ತಿದೆ. ಚೀನಾದಲ್ಲಿ ಕರೊನಾದಿಂದ ಹೇಳರಿಯದ ಸಮಸ್ಯೆ ಇದೆ. ಆದ್ರೆ ಭಾರತದಲ್ಲಿ ಜನ್ರು ಆರಾಮವಾಗಿದ್ದಾರೆ. ಕಾರಣ ದೇಶದಲ್ಲಿ 230 ಕೋಟಿ ವ್ಯಾಕ್ಸಿನ್ ನೀಡಿದ್ದೇವೆ. ಪುಣ್ಯಾತ್ಮ ಐದು ವರ್ಷ ಸಿಎಂ ಆದರೂ ಸ್ವಂತ ಕ್ಷೇತ್ರದಲ್ಲಿ ಗೆಲ್ಲುವ ತಾಕತ್ತಿಲ್ಲ. ಬಾದಾಮಿಯಲ್ಲಿ ಬಂದು ನಿಂತ್ರು. 1600 ಮತಗಳಿಂದ ಗೆದ್ರು. 700-800 ಮತ ಹೆಚ್ಚು ಕಮ್ಮಿ ಆಗಿದ್ರೆ ಗೋವಿಂದ ಆಗೋದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಎಂದಿದ್ದ ಸೋನಿಯಾ ಗಾಂಧಿ ಪಕ್ಷ, ಯಾವ ಪುರುಷಾರ್ಥಕ್ಕಾಗಿ ಮಹದಾಯಿ ಸಮಾವೇಶ ಮಾಡ್ತಿದೆ? -ಸಚಿವ ಜೋಶಿ ಪ್ರಶ್ನೆ

ಇನ್ನು ಅಮಿತ್ ಶಾ ಬಗ್ಗೆ ಮಾತಾಡ್ತಾರೆ ಅಂತ ಕಿಡಿಕಾರಿದ್ದು, ಬಿಜೆಪಿ ಭಯೋತ್ಪಾದನಗೆ ಬಂಬಲಿಸುತ್ತೆ ಅಂತ ಹೇಳಿದ್ರು. ಕುಕ್ಕರ್ ಬಾಂಬ್ ಸ್ಪೋಟ್ ಆದಾಗ ಡಿ.ಕೆ. ಶಿವಕುಮಾರ್​ ಏನ್ ಹೇಳಿದ್ರು. ಹಿಂದೆ ಘಟನೆಯೊಂದಲ್ಲಿ ಇನ್ಸ್ಪೆಕ್ಟರ್ ಮೋಹನ್ ಚಂದ್ ಧರ್ಮಾ ಸಾವನ್ನಪ್ಪಿದ್ರು. ಆಗ ಕಾಂಗ್ರೆಸ್ ‌ಕಣ್ಣೀರು ಹಾಕಲಿಲ್ಲ. ಸತ್ತ ಭಯೋತ್ಪಾದಕರ ಬಗ್ಗೆ ಕಣ್ಣೀರು ಹಾಕಿದ ಪಾರ್ಟಿ ಕಾಂಗ್ರೆಸ್. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ಕಡಿಮೆಯಾಗಿದೆ ಎಂದು ಹೇಳಿದರು.

ಇಡೀ ಕುಟುಂಬವೇ ರಾಜಕೀಯಕ್ಕೆ ಧುಮುಕಿದೆ: ಹೆಚ್​ಡಿಕೆ ವಿರುದ್ಧ ಜೋಶಿ ಲೇವಡಿ

ಬಿಜೆಪಿ ತಮ್ಮ ಗುಂಡಿ ತಾನೇ ತೋಡಿಕೊಳ್ಳುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಯಾರ ಗುಂಡಿ ಯಾರು ತೋಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಇಡೀ ದೇಶ ಮತ್ತು ರಾಜ್ಯದಲ್ಲಿ ಗೊತ್ತಾಗಿದೆ. HDD ಕುಟುಂಬ ಇರುವುದು ರಾಜಕಾರಣ ಮತ್ತು ಹಣ ಲೂಟಿ ಮಾಡಲು. ಇಡೀ ಕುಟುಂಬವೇ ರಾಜಕೀಯಕ್ಕೆ ಧುಮುಕಿದೆ. ನಾನು ರಾಜಕೀಯಕ್ಕೆ ಬಂದು 25 ವರ್ಷ ಆಯ್ತು. ನನ್ನ ಕುಟುಂಬವನ್ನು ರಾಜಕೀಯಕ್ಕೆ ತಂದಿಲ್ಲ, ಮುಂದೆಯೂ ತರಲ್ಲ. ಖಡಾಖಂಡಿತವಾಗಿ ಹೇಳ್ತೀನಿ ಮೋದಿಯವರ ಆದರ್ಶ ಪಾಲಿಸುತ್ತೇನೆ. ನೀವು ಹೀಗೆ ಹೇಳ್ತೀರಾ ಎಂದು ದೇವೇಗೌಡ ಕುಟುಂಬಕ್ಕೆ ಜೋಶಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ, ಎಚ್​ಕೆ ಪಾಟೀಲ್ ಪೊಲಿಟಿಕಲಿ ಔಟ್ ಡೇಟೆಡ್, 2 ತಿಂಗಳಲ್ಲಿ ಕಳಸಾ ಬಂಡೂರಿ ಯೋಜನೆಗೆ ಶಂಕುಸ್ಥಾಪನೆ -ಪ್ರಲ್ಹಾದ್ ಜೋಶಿ ಸ್ಪಷ್ಟನೆ

ಸಿದ್ದೇಶ್ವರ ಸ್ವಾಮೀಜಿ ಆಪ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ

ಇನ್ನು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೆ ಅನಾರೋಗ್ಯ ಕುರಿತು ಪ್ರತಿಕ್ರಿಯೆ ನೀಡಿದ ಅವರು ಸಿದ್ದೇಶ್ವರ ಸ್ವಾಮೀಜಿ ಆಪ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸಿದ್ದೇಶ್ವರ ಶ್ರೀಗಳು ಒಪ್ಪಿಗೆ ಕೊಟ್ಟರೆ ಎಲ್ಲಾ ರೀತಿಯ ಚಿಕಿತ್ಸೆಗೆ ಸಿದ್ಧ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಿಂದ ಚಿಕಿತ್ಸೆ ಕೊಡಿಸಲು ಸಿದ್ಧ. ಶ್ರೀಗಳಿಗೆ ಎಲ್ಲಿ ಬೇಕಾದರೂ ಚಿಕಿತ್ಸೆ ಕೊಡಿಸುವುದಕ್ಕೆ ತಯಾರಿದ್ದೇವೆ. ಸಿದ್ದೇಶ್ವರ ಸ್ವಾಮೀಜಿ ಮಹಾವಿಭೂತಿ ಪುರುಷರು, ಪುಣ್ಯದ ಜೀವ. ಸಿದ್ದೇಶ್ವರ ಶ್ರೀಗಳು ಸ್ಥಳೀಯವಾಗಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:28 pm, Mon, 2 January 23