AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಎಂದಿದ್ದ ಸೋನಿಯಾ ಗಾಂಧಿ ಪಕ್ಷ, ಯಾವ ಪುರುಷಾರ್ಥಕ್ಕಾಗಿ ಮಹದಾಯಿ ಸಮಾವೇಶ ಮಾಡ್ತಿದೆ? -ಸಚಿವ ಜೋಶಿ ಪ್ರಶ್ನೆ

Mahadayi rally: 2006 ರಲ್ಲಿ ಲೋಕಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮೂಲಕ ಕುಡಿಯುವ ನೀರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇಂದ್ರಕ್ಕೆ ನಾನು ಒತ್ತಾಯಿಸಿದ್ದೆ. ಮಹದಾಯಿಗಾಗಿ ರೈತರು ಹೋರಾಟ ಕೈಗೊಂಡಾಗ ಮಹಿಳೆಯರು, ರೈತರ ಮೇಲೆ ಲಾಠಿಚಾರ್ಜ್ ಮಾಡಿಸಿದ್ದು ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ.

ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಎಂದಿದ್ದ ಸೋನಿಯಾ ಗಾಂಧಿ ಪಕ್ಷ, ಯಾವ ಪುರುಷಾರ್ಥಕ್ಕಾಗಿ ಮಹದಾಯಿ ಸಮಾವೇಶ ಮಾಡ್ತಿದೆ? -ಸಚಿವ ಜೋಶಿ ಪ್ರಶ್ನೆ
ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಎಂದಿದ್ದ ಸೋನಿಯಾ ಗಾಂಧಿ
TV9 Web
| Edited By: |

Updated on: Jan 02, 2023 | 5:02 PM

Share

ಹುಬ್ಬಳ್ಳಿಯಲ್ಲಿ ಇಂದು ಸೋಮವಾರ ಮಹದಾಯಿ (Mahadayi) ಸಮಾವೇಶ ನಡೆಸುತ್ತಿರುವ ಕಾಂಗ್ರೆಸ್ ನಡೆಯನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಖಂಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಹದಾಯಿ ಸಮಾವೇಶ ಕುರಿತು ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು (Pralhad Joshi), ಮಹದಾಯಿ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಕಾಂಗ್ರೆಸ್ ಕೊಡುಗೆ ಏನು..? ಎಂದು ಪ್ರಶ್ನಿಸಿದರು.

ಕುಡಿಯುವ ನೀರಿಗೋಸ್ಕರ ನಾವು ಕಾಲುವೆ ಕಟ್ಟಿದರೆ, ಕಾಲುವೆಗೆ ನೀರು ಹೋಗದಂತೆ ಗೋಡೆ ಕಟ್ಟಿದ್ದು ಗೋವಾ ಕಾಂಗ್ರೆಸ್ ಸರ್ಕಾರ.‌ ಕರ್ನಾಟಕಕ್ಕೆ ಮಹದಾಯಿಯ ಒಂದು ಹನಿ ನೀರನ್ನು ಕೊಡಲ್ಲ ಎಂದು ಗೋವಾಗೆ (Goa) ಹೋಗಿ ಭಾಷಣ ಮಾಡಿದವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು. ಮನಮೋಹನ್ ಸಿಂಗ್ ಅವರಿಗೆ ನಾವೆಲ್ಲ ಹೋಗಿ ಕುಡಿಯುವ ನೀರನ್ನಷ್ಟು ಬಿಟ್ಟು ಉಳಿದಿದ್ದನ್ನ ಟ್ರಿಬುನಲ್ ಗೆ ವಹಿಸಿ ಎಂದು ಮನವಿ ಮಾಡಿದ್ದೆವು. ಆದರೆ ಅಂದು ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಸಮಸ್ಯೆ ಬಗೆಹರಿಸದೆ ಮಹದಾಯಿ ವಿವಾದವನ್ನ ಟ್ರಿಬುನಲ್ ಗೆ ವಹಿಸಿದ್ರು. ಈಗ ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ ನಡೆಸ್ತಿದೆ..? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.

2006 ರಲ್ಲಿ ಲೋಕಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮೂಲಕ ಕುಡಿಯುವ ನೀರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಾನು ಒತ್ತಾಯಿಸಿದ್ದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಳಸ ಬಂಡೂರಿ ಯೋಜನೆ ಸಿದ್ಧಪಡಿಸಿದರೆ ಅದರ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿದ್ದು ಗೋವಾ ಕಾಂಗ್ರೆಸ್ ಸರ್ಕಾರ. ಮಹದಾಯಿಗಾಗಿ ರೈತರು ಬೃಹತ್ ಹೋರಾಟ ಕೈಗೊಂಡಾಗ, ಮಹಿಳೆಯರ ಮೇಲೆ, ರೈತರ ಮೇಲೆ ಲಾಠಿಚಾರ್ಜ್ ಮಾಡಿಸಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.

ಮಹದಾಯಿ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಕೊಡುಗೆ ನೀಡಿದ್ದರೆ ಅದು ಬಿಜೆಪಿ ಸರ್ಕಾರ:

ಟ್ರಿಬುನಲ್ ಅವಾರ್ಡ್ ಬಳಿಕ ಅದನ್ನ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು ನರೇಂದ್ರ ಮೋದಿಯವರು. ಅಲ್ಲದೇ ಇದೀಗ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕಳಸ ಬಂಡೂರಿ ಯೋಜನೆಯ ಡಿಪಿಆರ್ ಗೂ ಅನುಮತಿ ನೀಡಿದೆ.

ಎರಡೂವರೆ ತಿಂಗಳೊಳಗೆ ಕಳಸ ಬಂಡೂರಿ ಯೋಜನೆ ಕಾಮಗಾರಿ ಆರಂಭಿಸಲು ಶಂಕುಸ್ಥಾಪನೆ ನೆರವೇರಿಸುವುದಾಗಿ ಸ್ವತಃ ಸಿಎಂ, ನೀರಾವರಿ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ. ಫಾರೆಸ್ಟ್ ಕ್ಲಿಯರೆನ್ಸ್ ಕೂಡ ರಾಜ್ಯ ಸರ್ಕಾರದ ಮಟ್ಟದಲ್ಲೇ ತೆಗೆದುಕೊಳ್ಳಲು ಅವಕಾಶವಿದೆ. ಹೀಗಿರುವಾಗ ಕಾಂಗ್ರೆಸ್ ಯಾವ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ ನಡೆಸ್ತಿದೆ ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:

ಮಹದಾಯಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ: ಕಾಂಗ್ರೆಸ್ಸಿಗರ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಸಿಎಂ ಬೊಮ್ಮಾಯಿ

ಡಿಪಿಆರ್ ಗೆ ಕೇಂದ್ರ ಅನುಮೋದನೆ ನೀಡಿದ ಆದೇಶದಲ್ಲಿ ಡೇಟ್ ಇಲ್ಲ ಎಂದು ಎಚ್.ಕೆ. ಪಾಟೀಲ್ ಹೇಳಿದ್ರು. ಎಲ್ಲರಿಗೂ ಸಿಕ್ಕಿರುವ ಡೇಟ್ ಇವರಿಗೆ ಮಾತ್ರ ಸಿಗಲ್ವಾ..? ಎಚ್.ಕೆ ಪಾಟೀಲ್ ನೀರಾವರಿ ಸಚಿವರಾಗಿ ಪುಸ್ತಕ ಬರೆಸಿದ್ದು ಬಿಟ್ಟರೆ ಬೇರೆ ಏನೂ ಮಾಡಲಿಲ್ಲ ಎಂದು ಇದೇ ವೇಳೆ ಪ್ರಲ್ಹಾದ್ ಜೋಶಿ ಟೀಕೆ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್