ಇದ್ದೂ ಇಲ್ಲದಂತಿರುವ ಶಿರಹಟ್ಟಿ ಸಾರಿಗೆ ಘಟಕದ ಬಸ್‌ಗಳು! ಸಮರ್ಪಕ ಬಸ್ ಸೌಕರ್ಯವಿಲ್ಲದೆ ಪ್ರಯಾಣಿಕರ ಪರದಾಟ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 02, 2023 | 10:02 PM

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಸಾರಿಗೆ ಸಂಸ್ಥೆ ಬಸ್ ಸೌಲಭ್ಯ ಮರಿಚೀಕೆ ಆಗಿದೆ. ಪ್ರಯಾಣಿಕರು ಸಮರ್ಪಕ ಬಸ್ ಸೌಕರ್ಯ ಇಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇದ್ದೂ ಇಲ್ಲದಂತಿರುವ ಶಿರಹಟ್ಟಿ ಸಾರಿಗೆ ಘಟಕದ ಬಸ್‌ಗಳು! ಸಮರ್ಪಕ ಬಸ್ ಸೌಕರ್ಯವಿಲ್ಲದೆ ಪ್ರಯಾಣಿಕರ ಪರದಾಟ
ಶಿರಹಟ್ಟಿ ಬಸ್ ಡಿಪೊ
Follow us on

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಸಾರಿಗೆ ಸಂಸ್ಥೆ ಬಸ್ (Bus) ಸೌಲಭ್ಯ ಮರಿಚೀಕೆ ಆಗಿದೆ. ಪ್ರಯಾಣಿಕರು (Passengers) ಸಮರ್ಪಕ ಬಸ್ ಸೌಕರ್ಯ ಇಲ್ಲದೇ ಪರದಾಡುವಂತಾಗಿದೆ. ಹಲವು ದಶಕಗಳಿಂದಲೂ ಈ ಭಾಗದ ಜನತೆಗೆ ಸಮರ್ಪಕ ಮೂಲಸೌಲಭ್ಯಗಳು ಸಿಗುತ್ತಿಲ್ಲ. ಶಿರಹಟ್ಟಿ ಪಟ್ಟಣದ ಜನತೆಯ ತಿಂಗಳ ಹೋರಾಟದ ಫಲವಾಗಿ ಸಾರಿಗೆ ಘಟಕ ಸ್ಥಾಪನೆಯಾಗಿದೆ. 2022 ಮಾರ್ಚ್ 13 ರಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರೇ ಘಟಕ ಉದ್ಘಾಟಿಸಿದ್ದಾರೆ. ಆದ್ರೆ ಘಟಕಕ್ಕೆ ಹೊಸ ಬಸ್ ನೀಡದೇ ತೀರಾ ಹಳೆಯ ಬಸ್ ನೀಡಿದ್ದಾರೆ. ಇದೀಗ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ ಅಂತ ಜನರು ಆರೋಪಿಸಿದ್ದಾರೆ. 17 ಶೆಡ್ಯೂಲ್ ನೀಡಲಾಗಿದ್ದು, ಒಟ್ಟು 19 ಬಸ್‌ಗಳು ಇವೆ. ಇದರಲ್ಲಿ 15 ಬಸ್ ಗಳು ಕಾರ್ಯರಂಭ ಮಾಡ್ತೀವೆ. ಹಾಗೂ 3 ಬಸ್​ಗಳು ರಿಪೇರಿ ಹಂತದಲ್ಲಿವೆ. ಶೆಡ್ಯೂಲ್‌ಗಳಿಗೆ ತಕ್ಕಂತೆ ಮೆಕ್ಯಾನಿಕ್ ಸಿಬ್ಬಂದಿಗಳು ಸಹ ಇಲ್ಲಿದ್ದಾರೆ.

ಡೀಸೆಲ್ ವ್ಯವಸ್ಥೆ ಇಲ್ಲ

ಶಿರಹಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ 50 ಗ್ರಾಮಗಳಿವೆ. ಈಗಿರುವಂತಹ 17 ಶೆಡ್ಯೂಲ್‌ಗಳಲ್ಲಿ ಎಲ್ಲ ಗ್ರಾಮೀಣ ಪ್ರದೇಶಗಳಿಗೂ ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯ ಸಿಗದೇ ಜನರು ಪರದಾಡುತ್ತಿದ್ದಾರೆ. ಇರುವುದರಿಂದ ತಾಲೂಕಾ ಕೇಂದ್ರಕ್ಕೆ ಬರುವ ಗ್ರಾಮೀಣ ಪ್ರದೇಶಗಳ ಜನತೆ ಹರಸಾಹಸ ಪಡಬೇಕಾದ ಸ್ಥಿತಿ ಇದೆ.

ಇದನ್ನೂ ಓದಿ: Gadag News: ಗ್ರಾಮೀಣ ಭಾಗದ ಜನ್ರ ಮುಗ್ಧತೆ ದುರುಪಯೋಗ: ಕ್ರೇಡಿಟ್ ಕಾರ್ಡ್ ಬಳಸಿ 6 ಲಕ್ಷ ರೂ. ದೋಚಿದ ಸೇಲ್ಸ್ ಮನ್

ವಿದ್ಯಾರ್ಥಿಗಳು ಪರದಾಟ

ಅಸಮರ್ಪಕ ಬಸ್ ಸೌಲಭ್ಯದಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಬಾರಿ ವಿದ್ಯಾರ್ಥಿಗಳು ಪ್ರತಿಭಟನೆ ಸಹ ಮಾಡಿದ್ದಾರೆ. ಕಳೆದ ವರ್ಷ ಬಸ್ ಸರಿಯಾದ ಸಮಯಕ್ಕೆ ಬರದೇ ಇದ್ದುದರಿಂದ ವಿದ್ಯಾರ್ಥಿನಿಯೋರ್ವಳು ಟ್ರ್ಯಾಕ್ಟರ್​ನಲ್ಲಿ ಪ್ರಯಾಣಿಸಿ ಜೀವ ಕಳೆದುಕೊಂಡ ಘಟನೆ ಸಹ ನಡೆದಿದೆ. ತರಗತಿಯಲ್ಲಿ ಹೆಚ್ಚಿನ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ಬಸ್ ನಿಲ್ದಾಣದಲ್ಲಿಯೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಮಯವ ಸ್ಥಿತಿ ನಿರ್ಮಾಣವಾಗಿದೆ ಅಂತ ಹಿಡಿಶಾಪ ಹಾಕುತ್ತಿದ್ದಾರೆ.

ಹೆಸರಿಗಷ್ಟೇ ಸಾರಿಗೆ ಘಟಕ

ಹೊಸದಾಗಿ ಘಟಕ ಕಾರ್ಯಾರಂಭ ದಿನಗಳಲ್ಲಿ ಈ ಭಾಗದ ಜನತೆ ಅನೇಕ ಕನಸುಗಳನ್ನು ಕಂಡಿದ್ದರು. ಇದೀಗ ಬಸ್‌ಗಳ ಕೊರತೆಯಿಂದ ಬೇಸತ್ತು ಹೋಗಿದ್ದಾರೆ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಹಟ್ಟಿಯ ಸಾರಿಗೆ ಘಟಕ ಕೇವಲ ಹೆಸರಿಗಷ್ಟೇ ಸಿಮೀತವಾಗಿದೆಯಾ? ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದ್ದು, ಇದಕ್ಕೆ ಸಾರಿಗೆ ಸಚಿವರು ಹಾಗೂ ಸಂಸ್ಥೆಯ ಮೇಲಾಧಿಕಾರಿಗಳು ಯಾವಾಗ ಗಮನ ಹರಿಸುತ್ತಾರೆಂಬುದನ್ನು ಕಾಯುತ್ತಿದ್ದಾರೆ.

ಇದನ್ನೂ ಓದಿ: Kalasa Banduri: ಗದಗ ಜಿಲ್ಲೆಯ ಬಂಡಾಯದ ನಾಡಿನಲ್ಲಿ ನಡೆದ ಐತಿಹಾಸಿಕ ಹೋರಾಟಕ್ಕೆ ಕೊನೆಗೂ ಜಯ

ಘಟಕ ವ್ಯವಸ್ಥಾಪಕರೇ ನೇರ ಹೊಣೆ

ಈ ಕುರಿತಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಸೀನಯ್ಯ ಅವರು ಮಾತನಾಡಿ, ಬಸ್‌ಗಳು ಕೆಟ್ಟು ನಿಲ್ಲುವ ಬಗ್ಗೆ ಗಮನಕ್ಕೆ ಬಂದರೆ ಮುಲಾಜಿಲ್ಲದೇ ಘಟಕ ವ್ಯವಸ್ಥಾಪಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ವಹಿಸುತ್ತೇನೆ. ಬಿಡಿ ಭಾಗಗಳ ಕೊರತೆ ಇಲ್ಲ. ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿದೆ. ಮೆಕ್ಯಾನಿಕ್ ಸಿಬ್ಬಂದಿ ಗೈರು ಉಳಿಯುತ್ತಿರುವ ಬಗ್ಗೆಯೂ ಸಹ ಕ್ರಮ ವಹಿಸುತ್ತೇನೆ. ಸ್ಥಳೀಯರಿಗೆ ಅಪ್ರೆಂಟಿಸ್ ತರಬೇತಿ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಜನವರಿ 1 ರಿಂದ ಬೆಂಗಳೂರು ಶೆಡ್ಯೂಲ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:00 pm, Mon, 2 January 23