ಗೋವುಗಳ ಸಾಗಾಟ, ಅನ್ಯಕೋಮಿನ ವ್ಯಕ್ತಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಥಳಿತ ಆರೋಪ

| Updated By: ವಿವೇಕ ಬಿರಾದಾರ

Updated on: Sep 10, 2023 | 12:12 PM

ಅಕ್ರಮವಾಗಿ ಗೋವುಗಳ ಸಾಗಾಣೆ ಮಾಡುತ್ತಿದ್ದ ಎಂದು ಅನ್ಯಕೋಮಿನ ವ್ಯಕ್ತಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಥಳಿಸಿರುವ ಆರೋಪ ಕೇಳಿಬಂದಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಗೋವುಗಳ ಸಾಗಾಟ, ಅನ್ಯಕೋಮಿನ ವ್ಯಕ್ತಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಥಳಿತ ಆರೋಪ
ನರಗುಂದ ಪೊಲೀಸ್​ ಠಾಣೆ
Follow us on

ಗದಗ ಸೆ.10: ನರಗುಂದ (Naragund) ಪಟ್ಟಣದ ಹೊರವಲಯದಲ್ಲಿ ಅಕ್ರಮವಾಗಿ ಗೋವುಗಳ (Catteles) ಸಾಗಾಣೆ ಮಾಡುತ್ತಿದ್ದ ಎಂದು ಅನ್ಯಕೋಮಿನ ವ್ಯಕ್ತಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು (Hindu Activists) ಥಳಿಸಿರುವ ಆರೋಪ ಕೇಳಿಬಂದಿದೆ. ಅಷ್ಫಾಕ್ ಬೇಪಾರಿ, ಮೊಹಮ್ಮದ್ ಗೌಸ್ ಬೇಪಾರಿ ಹಲ್ಲೆಗೊಳಗಾದವರು. ಬಸವರಾಜ ಮಮಟಗೇರಿ, ಮಲ್ಲಿಕಾರ್ಜುನ ಹಿರೇಮಠ, ಶರಣಪ್ಪ ಹಂಚಿನಾಳ, ಅಜಯ ಅಣ್ಣಿಗೇರಿ, ದೇವರಾಜು ಕಮ್ಮಾರ ಹಲ್ಲೆ ಮಾಡಿದ ಆರೋಪಿಗಳು. ವಾಹನ ಚಾಲಕ ಮೊಹಮ್ಮದ್ ಗೌಸ್​​ರಿಗೆ  ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೊಹಮ್ಮದ್, ಅಷ್ಫಾಕ್ ಗದಗ ಜಾನುವಾರು ಸಂತೆಯಿಂದ ಎಮ್ಮೆ ಹೇರಿಕೊಂಡು ಟಾಟಾ ಏಸ್ ವಾಹನದಲ್ಲಿ  ನರಗುಂದಕ್ಕೆ ಬರುತ್ತಿದ್ದರು. ಈ ವೇಳೆ ಡಿಸೇಲ್ ಖಾಲಿಯಾಗಿದೆ ಎಂದು ನರಗುಂದ ಹೊರವಲಯದ ಕುರ್ಲಗೇರಿ ಬಳಿ
ನಿಂತಿದ್ದಾಗ ಆರೋಪಿಗಳು ಹಲ್ಲೆ ಮಾಡಿದ್ದಾರೆ.  ಮೊಹಮ್ಮದ್ ಗೌಸ್ ಬೇಪಾರಿ ಎಂಬುವರಿನಿಗೆ ತಲೆ, ಹೊಟ್ಟೆ, ಎದೆಯ ಭಾಗಕ್ಕೆ ಗಾಯಗಳಾಗಿದೆ.  ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಇದನ್ನೂ ಓದಿ: ಗೋ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ, ಗುಳೇದಗುಡ್ಡ ಬಂದ್​​​

ಇನ್ನು ನರಗುಂದ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ ಮಾಡಿದ್ದಾರೆ. ಇಬ್ಬರು ಡಿವೈಎಸ್​ಪಿ ನೇತೃತ್ವದಲ್ಲಿ ಎರಡು ಡಿಆರ್ ತುಕಡಿ ಸೇರಿದಂತೆ 150 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:33 am, Sun, 10 September 23