ಗದಗ-ಬೆಟಗೇರಿ ಅವಳಿ ನಗರ ಇನ್ನು ಶಾಂತಿಯ ತೋಟ: ಹೇಗೆ ಅಂತೀರಾ? ಈ ವರದಿ ನೋಡಿ

Commando Security Services in Nargund, Gadag: ಒಂದು ಕಮಾಂಡ್​​ ರೂಂನಲ್ಲಿ ಕುಳಿತು ಇಡೀ ಅವಳಿ ನಗರ ನಿಯಂತ್ರಣ ಮಾಡ್ತಾಯಿರೋ ಸಿಬ್ಬಂದಿ. ಮೂಲೇ ಮೂಲೆಯಲ್ಲೂ ಅತ್ಯಾಧುನಿಕ ಕ್ಯಾಮರಾ ಅವಳಡಿಕೆ ಮಾಡಿ ಕ್ರೈಂಗಳ ಬಗ್ಗೆ ಹದ್ದಿನ ಕಣ್ಣು ಇಂತಹ ಹೈಟೆಕ್ ಕಮಾಂಡ್ ರೂಂ ಉದ್ಘಾಟನೆಗೊಂಡಿದೆ. ಹೌದು ಈ ಎಲ್ಲ ಸೌಲಭ್ಯಗಳು ಕಂಡಿದ್ದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ.

ಗದಗ-ಬೆಟಗೇರಿ ಅವಳಿ ನಗರ ಇನ್ನು ಶಾಂತಿಯ ತೋಟ: ಹೇಗೆ ಅಂತೀರಾ? ಈ ವರದಿ ನೋಡಿ
ಗದಗ-ಬೆಟಗೇರಿ ಅವಳಿ ನಗರ ಇನ್ನು ಶಾಂತಿಯ ತೋಟ: ಹೇಗೆ ಅಂತೀರಾ?
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on: Sep 09, 2023 | 1:35 PM

ಕಿಡಿಗೇಡಿಗಳೇ ಹುಷಾರ್ ನಾವು ಆಡಿದ್ದೇ ಆಟ ಅಂತ ರೌಡಿಸಂ ಮಾಡಿದ್ರೆ ಅಷ್ಟೇ, ನಿಮಗೆ ಗೋತ್ತಿಲ್ಲದೇ ನಿಮ್ಮ ಆಟ ಮೂರನೇ ಕಣ್ಣಲ್ಲಿ ಸೆರೆಯಾಗೋದು ಪಕ್ಕಾ. ಅಷ್ಟೇ ಅಲ್ಲ ಯಾವುದೇ ಕ್ರಿಮಿನಲ್ ಎಕ್ಟಿವಿಟಿ ಮಾಡಿದ್ರೂ ನಿಮಗೆ ಗೊತ್ತಿಲ್ಲದೇ ಎಲ್ಲವೂ ಮೂರನೇ ಕಣ್ಣು ರೆಕಾರ್ಡ್ ಮಾಡುತ್ತೆ. ಹೌದು ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನ ಬಳಸಿ ಇಡೀ ಅವಳಿ ನಗರ ಕಬ್ಜಾ ಪಡೆದಿದೆ. ಕಮಾಂಡೋ ರೂಂನಲ್ಲೇ ಕುಳಿತು ಇಡೀ ಅವಳಿ ನಗರದ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಈ ಮೂಲಕ ಕ್ರೈಂ ಸೇರಿದಂತೆ ಎಲ್ಲ ರೀತಿಯ ಅಪರಾಧ ತಡೆಯಲು ಸಹಕಾರಿಯಾಗಲಿದೆ. ಇಡೀ ರಾಜ್ಯದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಕಮಾಂಡ್​​ ರೂಂ ಇದಾಗಿದೆ ಅಂತ ಗೃಹ ಸಚಿವರು ಹೇಳಿದ್ದಾರೆ. ಏನಿದು ಮೂರನೇ ಕಣ್ಣು ಅಂತೀರಾ ಈ ಸ್ಟೋರಿ ನೋಡಿ. ಒಂದು ಕಮಾಂಡ್​​ ರೂಂನಲ್ಲಿ ಕುಳಿತು ಇಡೀ ಅವಳಿ ನಗರ ನಿಯಂತ್ರಣ ಮಾಡ್ತಾಯಿರೋ ಸಿಬ್ಬಂದಿ (Commando Security Services in Nargund, Gadag). ಮೂಲೇ ಮೂಲೆಯಲ್ಲೂ ಅತ್ಯಾಧುನಿಕ ಕ್ಯಾಮರಾ ಅವಳಡಿಕೆ ಮಾಡಿ ಕ್ರೈಂಗಳ ಬಗ್ಗೆ ಹದ್ದಿನ ಕಣ್ಣು ಇಂತಹ ಹೈಟೆಕ್ ಕಮಾಂಡ್ ರೂಂ ಉದ್ಘಾಟನೆಗೊಂಡಿದೆ. ಹೌದು ಈ ಎಲ್ಲ ಸೌಲಭ್ಯಗಳು ಕಂಡಿದ್ದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ.

ಗದಗ ಪೊಲೀಸ್ ಇಲಾಖೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮೂರನೇ ಕಣ್ಣಿನ ನಿಗಾವಹಿಸಿದೆ. ಹೌದು ಅತ್ಯಾಧುನಿಕ ತಂತ್ರಜ್ನಾನ ಬಳಸಿ ಎಸ್ಪಿ ಕಚೇರಿಯಲ್ಲಿ ಕಮಾಂಡ ಸೆಂಟರ್ ತೆರೆದಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ರೌಡಿಗಳು, ಪುಡಿ ರೌಡಿಗಳು, ಕಳ್ಳರು ಬಾಲ ಮುದುಡಿಕೊಂಡು ಇರುವಂತೆ ಪ್ಲಾನ್ ಮಾಡಿದೆ. ಹೌದು ಗದಗ-ಬೆಟಗೇರಿ ಅವಳಿ ನಗರದಲ್ಲಿ 1.50 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ತಂತ್ರಜ್ಞಾನ ಉಳ್ಳ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಅವಳಿ ನಗರ ಪ್ರವೇಶ ಮಾಡುವ ಎಲ್ಲ ಪ್ರಮುಖ ಹೆದ್ದಾರಿಗಳಲ್ಲಿ ಸಿಸಿ ಕ್ಯಾಮರಾಗಳು ಅಳವಡಿಸಲಾಗಿದೆ. ಅಷ್ಟೇ ನಗರದ ಪ್ರಮುಖ ಸರ್ಕಲ್ ಗಳು, ರಸ್ತೆಗಳು, ಬಡಾವಣೆಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಮೂಲಕ ಕ್ರೈಂಗಳ ನಿಯಂತ್ರಣಕ್ಕೆ ಹದ್ದಿನ ಕಣ್ಣು ಇಡಲಾಗಿದೆ. ಹಾದಿ ಬೀದಿಯಲ್ಲಿ ರೌಡಿಗಳು, ಪುಡಿ ರೌಡಿಗಳು ಏನಾದ್ರೂ ಬಾಲ ಬಿಚ್ಚಿದ್ರೆ ಎಲ್ಲರೂ ಕಮಾಂಡ್ ಸೆಂಟರ್ ನಲ್ಲಿ ಸೆರೆಯಾಗುತ್ತಾರೆ. ದಿನ 24 ಗಂಟೆಗಳ ಕಾಲ ಎಸ್ಪಿ ಕಚೇರಿಯಲ್ಲಿ ಸಿಬ್ಬಂದಿ ನಿಗಾವಹಿಸಲಿದ್ದಾರೆ.

ಅಪಘಾತ, ಗಲಾಟೆ, ಅಟ್ಯಾಕ್, ಕಳ್ಳತನ ಸೇರಿ ಯಾವುದೇ ಪ್ರಕರಣಗಳು ನಡೆದ್ರು ಕಮಾಂಡ್ ಸೆಂಟರ್ ಸಿಬ್ಬಂದಿ ನಿಗಾ ಇಡಲಿದ್ದಾರೆ. ಈ ಮೂಲಕ ಕ್ರೈಂ ತಡೆಯಲು ಆಧುನಿಕ ತಂತ್ರಜ್ಞಾನ ಬಳಿಸಿ ಕಮಾಂಡ್ ಸೆಂಟರ್ ಮಾಡಲಾಗಿದೆ. ಥರ್ಡ್ ಐ ಉದ್ಘಾಟಿಸಿದ ಗೃಹ ಸಚಿವ ಜಿ. ಪರಮೇಶ್ವರ, ಪೊಲೀಸ್ ಇಲಾಖೆ ಸದಾ ಹೊಸ ಹೊಸ ತಂತ್ರಜ್ಞಾನ ಕಡೆ ನೋಡುತ್ತಿದೆ. ಗದಗ ಪೊಲೀಸ್ ಇಲಾಖೆಯ ಅತ್ಯಾಧುನಿಕ ಕಮಾಂಡ್​ ಸೆಂಟರ್ ರಾಜ್ಯದಲ್ಲೇ ನಂಬರ್ ಒನ್ ಆಗಿದೆ. ಇದು ಅವಳಿ ನಗರಕ್ಕೆ ಮಾತ್ರ ಸೀಮಿತವಾಗಬಾರದು ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಿಗೂ ವಿಸ್ತರಿಸಬೇಕು. ಗದಗ ಪೊಲೀಸ್ ಇಲಾಖೆ ಪ್ಲಾನ್ ನಿಜಕ್ಕೂ ಮೆಚ್ಚುವಂಥದ್ದು, ಇದು ಯಶಸ್ವಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ್ರು.

ಮೂರನೇ ಕಣ್ಣು ಕೇವಲ ರೌಡಿ, ಪುಡಿರೌಡಿಗಳ ನಿಯಂತ್ರಣ ಮಾತ್ರವಲ್ಲ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡೋ ಸವಾರರ ಮೇಲೂ ನಿಗಾವಹಿಸಲಿದೆ. ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ರೆ, ಹೆಲ್ಮೆಟ್ ಧರಿಸದಿದ್ದರೆ ಹೀಗೆ ನಿಯಮ ಉಲ್ಲಂಘಿಸಿದ್ರೆ ನಿಮ್ಮ ಮನೆಗೆ ದಂಡದ ರಸೀದಿ ಬರುತ್ತೆ. ಹೀಗಾಗಿ ಅವಳಿ ನಗರದ ಜನ್ರು ಇನ್ಮುಂದೆ ಬೈಕ್ ಹತ್ತೊ ಮೊದ್ಲು ಹೆಲ್ಮೆಟ್ ಕಡ್ಡಾಯ ಹಾಕಿಕೊಂಡು ಬರ್ಬೇಕು. ಬೈಕ್ ಹಿಡಿದ್ರೆ ರಾಜಕೀಯ ನಾಯಕರು, ಜನಪ್ರತಿನಿಧಿಗಳಿಂದ ಫೋನ್ ಮಾಡಿದರೂ ಡೋಂಟ್​ ಕೇರ್​ ಬಟ್​, ದಂಡ ಫಿಕ್ಸ್. ಹೀಗಾಗಿ ಬೈಕ್ ಸವಾರರು ಇನ್ಮುಂದೆ ಟ್ರಾಫಿಕ್ ನಿಯಮ ಪಾಲನೆ ಕಡ್ಡಾಯ.

ಇನ್ನು ರಾಜ್ಯದಲ್ಲಿ ಡ್ರಗ್​ ಮಾಫಿಯಾ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದೆ. ಆದ್ರೆ, ಗದಗ ಜಿಲ್ಲೆಯಲ್ಲಿ ಡ್ರಗ್​ ಮಾಫಿಯಾ, ಕ್ರೈಂ ಹಾವಳಿ ಅಷ್ಟೇನೂ ಇಲ್ಲ. ಹೆಮ್ಮಯ ವಿಷಯ. ಗದಗ ಜನ್ರು ಒಳ್ಳೆಯವ್ರು. ಆದ್ರೆ, ಆರು ತಿಂಗಳಲ್ಲಿ ಗದಗ ಜಿಲ್ಲೆ ಡ್ರಗ್ಸ್ ಮುಕ್ತ ಜಿಲ್ಲೆ ಮಾಡಬೇಕು ಅಂತ ಗದಗ ಎಸ್ಪಿ ಅವ್ರಿಗೆ ಗೃಹ ಸಚಿವರು ಟಾಸ್ಕ್ ನೀಡಿದ್ದಾರೆ. ಇನ್ನೂ ಪೊಲೀಸ್ ಇಲಾಖೆ ಕಮಾಂಡ್ ಸೆಂಟರ್ ನೋಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್ ಪೊಲೀಸ್ ಇಲಾಖೆ ಕ್ರೈಂ ನಿಯಂತ್ರಣಕ್ಕೆ ಕೈಗೊಂಡ ಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ರು..

ಅದು ಪೊಲೀಸ್ ಇಲಾಖೆಯ ಮೂರನೇ ಕಣ್ಣು. ರಾಜ್ಯದಲ್ಲೇ ನಂಬರ್ ಒನ್ ಆಗಿದೆ. ಪೊಲೀಸ್ ಇಲಾಖೆಯ ಈ ಕಾರ್ಯವನ್ನು ಅವಳಿ ನಗರದ ಜನ್ರು ಮೆಚ್ಚಿದ್ದಾರೆ. ಗದಗ ಪೊಲೀಸ್ ಇಲಾಖೆಯಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಪದೇ ಪದೇ ಆಗುತ್ತಿರೋ ಚಾಕು, ಚೂರಿ ಇರಿತ ಪ್ರಕರಣಗಳು ಕಡಿಮೆಯಾಗಲೀ. ಅವಳಿ ನಗರದ ಜನ್ರು ನೆಮ್ಮದಿಯ ಬದುಕು ಸಾಗಿಸುವಂತಾಗಲೀ ಅನ್ನೋದು ಎಲ್ಲರ ಆಶಯ

ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್