AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cheat fund: 6 ವರ್ಷಕ್ಕೆ ಡಬಲ್‌ ಮಾಡುವುದಾಗಿ‌ ಹಣ ತುಂಬಿಸಿಕೊಂಡ ಕಂಪನಿಗಳು ಮಾಯ! 30 ಚಿಟ್ ಫಂಡ್ ಕಂಪನಿಗಳಿಂದ ಕೋಟಿ ಕೋಟಿ ಲೂಟಿ -ಗದಗ ಡಿಸಿಗೆ ಮೊರೆ

Chit fund: ದೊಡ್ಡ ದೊಡ್ಡ ಚಿಟ್ ಫಂಡ್ ಕಂಪನಿಗಳು ನಾಪತ್ತೆಯಾಗಿವೆ. ಸ್ಥಳೀಯ ಏಜೆಂಟ್ ಮಾತನ್ನು ನಂಬಿ ಪಾಲಿಸಿ ಮಾಡಿದ ಸಂತ್ರಸ್ತರು ನಮಗೆ ಹಣ ನೀಡಿ ಎಂದು ಅವರ ಬೆನ್ನು ಬಿದ್ದಿದ್ದಾರೆ. ಆ ಕಂಪನಿಗಳಿಗೆ ಸರ್ಕಾರ ಪರವಾನಗಿ ನೀಡಿದೆ ಎಂದು ಹೇಳಿದ ಮೇಲೆಯೇ ನಾವು ಪಾಲಿಸಿ ಮಾಡಿಸಿರುವುದು ಎಂದು ಡಿಸಿ ದುಂಬಾಲು ಬಿದ್ದಿದ್ದಾರೆ. 

Cheat fund: 6 ವರ್ಷಕ್ಕೆ ಡಬಲ್‌ ಮಾಡುವುದಾಗಿ‌ ಹಣ ತುಂಬಿಸಿಕೊಂಡ ಕಂಪನಿಗಳು ಮಾಯ! 30 ಚಿಟ್ ಫಂಡ್ ಕಂಪನಿಗಳಿಂದ ಕೋಟಿ ಕೋಟಿ ಲೂಟಿ -ಗದಗ ಡಿಸಿಗೆ ಮೊರೆ
ದೊಡ್ಡ ದೊಡ್ಡ ಚಿಟ್ ಫಂಡ್ ಕಂಪನಿಗಳಿಂದ ಕೋಟಿ ಕೋಟಿ ಲೂಟಿ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​|

Updated on: Jul 22, 2023 | 11:47 AM

Share

ಗದಗ, ಜುಲೈ 22: ಅದು ಬಡವರ ಹಣ. ಕಷ್ಟಪಟ್ಟು ದುಡಿದ ಹಣ. ಕಂಪನಿ ಬಣ್ಣದ‌ ಮಾತುಗಳಿಗೆ ಮರುಳಾದ ಏಜಂಟ್ರು ಕಮಿಷನ್ ಆಸೆಗಾಗಿ ಜನ್ರ ಮೈಂಡ್ ವಾಶ್ ಮಾಡಿ ಹಣ ಹೂಡಿಕೆ ಮಾಡಿಸಿದ್ದಾರೆ. ನಮ್ಮ ಹಣ ಡಬಲ್ ಆಗುತ್ತೆ. ಮುಂದೆ ಮಕ್ಕಳ ಭವಿಷ್ಯಕ್ಕೆ ಅನಕೂಲ ಆಗುತ್ತೆ ಅಂತ ದೊಡ್ಡ ದೊಡ್ಡ ಚಿಟ್ ಫಂಡ್ ಕಂಪನಿಗಳಲ್ಲಿ ಜನ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದ್ದಾರೆ. ಆದ್ರೆ, ಈ ಕಂಪನಿಗಳು (Chit fund) ಬಡ ಜನ್ರಿಗೆ (Loot) ಉಂಡೆ ನಾಮ ಹಾಕಿ‌ ನೂರಾರು ಕೋಟಿ ಲೂಟಿ ಮಾಡಿ (Loot) ಮಾಯವಾಗಿವೆ. ಹಣ ಕಳೆದುಕೊಂಡ ಜನ ಕಣ್ಣೀರು ಹಾಕ್ತಾಯಿದ್ದಾರೆ. ಜನ್ರು ಏಜಂಟ್ರಿಗೆ ಹಣ ಕೊಡಿಸುವಂತೆ ದುಂಬಾಲು ಬಿದ್ದಿದ್ದು, ಏಜಂಟ್ರು ಕಂಗಾಲಾಗಿದ್ದಾರೆ. ಹಣ ಕೊಡಿಸಿ ಅಂತ ಸರ್ಕಾರದ ಮೊರೆ ಹೋಗಿದ್ದಾರೆ. ಕಣ್ಣೀರು ಹಾಕ್ತಾಯಿರೋ ನೊಂದವರು.. ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿರುವ ಏಜೆಂಟ್‌ಗಳು. ವಿಶೇಷ ಚೇತನ ಮಹಿಳೆಯರು ಸೇರಿದಂತೆ ನೂರಾರು‌ ಜನ್ರ ಆಕ್ರೋಶ. ಆರು ವರ್ಷಕ್ಕೆ ಹಣ ಡಬಲ್‌ ಮಾಡುವುದಾಗಿ‌ ಹಣ ತುಂಬಿಸಿಕೊಂಡು ಪಂಗನಾಮ. ಎಸ್ ಈ ಎಲ್ಲಾ ಗೋಳಾಟದ ದೃಶ್ಯಗಳು ಕಂಡಿದ್ದು ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ (Gadag DC).

ಅಂದಹಾಗೇ ಗದಗ ಜಿಲ್ಲೆಯ ಸಾವಿರಾರು ಜನ್ರು ಹಣಕ್ಕೆ ಮರುಳಾದ್ರೆ. ನೂರಾರು ಏಜೆಂಟ್ಗಳು ಕಮಿಷನ್ ಆಸೆಗೆ ಮರಳಾಗಿ ಮೊಸ ಹೋಗಿದ್ದಾರೆ. ಹೌದು PACL INDIA LTD, ಗರಿಮಾ, ಅಗ್ರೀಗೊಲ್ಡ್, ಸಾಯಿ ಪ್ರಸಾದ್ ಗ್ರೂಪ್ ಸಾಯಿ, ಸಮೃದ್ಧ ಜೀವನ, ಕಲ್ಪತರು, ಸಂಜೀವಿನಿ, ನವಜೀವನ, ಸೇರಿದಂತೆ 30 ಕ್ಕೂ ಹೆಚ್ಚು ಕಂಪನಿ ಬಾಗಿಲು ಹಾಕಿಕೊಂಡು ನಾಪತ್ತೆಯಾಗಿವೆ.

ಗದಗ ಜಿಲ್ಲೆಯ ಸಾವಿರಾರು ಜನ್ರು ಮಕ್ಕಳ ಭವಿಷ್ಯ, ಮನೆ ನಿರ್ಮಾಣ ಸೇರಿ ಹಲವಾರು ಕನಸುಗಳ ಹೊತ್ತು‌ಹಣ ಹೂಡಿಕೆ ಮಾಡಿ‌ ಮೋಸ ಹೋಗಿದ್ದಾರೆ. ಒಬ್ಬೊಬ್ರು ಹತ್ತಾರು ಲಕ್ಷ ಹಣ ಹೂಡಿಕೆ ಮಾಡಿ‌ ಹಣಕ್ಕಾಗಿ ಒದ್ದಾಡುತ್ತಿದ್ದಾರೆ. ನೂರಾರು ಏಜೆಂಟಗಳು ಕಮಿಷನ್ ಹಣಕ್ಕಾಗಿ ಜನ್ರಿಂದ ಕೋಟ್ಯಾಂತರ ಮೊತ್ತದ ಹಣ ಹೂಡಿಕೆ ಮಾಡಿಸಿದ್ದಾರೆ. ಆರು ವರ್ಷದಲ್ಲಿ ಡಬಲ್ ಆಗುತ್ತೆ ಆಸೆ ಹುಟ್ಟಿಸಿದ್ದಾರೆ.

ಆದ್ರೆ, ಹಲವು ವರ್ಷಗಳಿಂದ ತಾವು ಹೂಡಿಕೆ ಮಾಡಿದ ಹಣವೂ ಇಲ್ಲ. ಡಬಲ್ಲೂ‌ ಇಲ್ಲದೇ ಗೋಳಾಡುತ್ತಿದ್ದಾರೆ. ಈಗ ಏಜಂಟರಿಗೆ ಫಲಾನುಭವಿಗಳು ಹಣ ನೀಡುವಂತೆ ಒತ್ತಡ ಹಾಕ್ತಾಯಿದ್ದಾರೆ. ನಿತ್ಯ ಮನೆಗೆ ಬಂದು, ಹಣ ನೀಡಿ ಇಲ್ಲವಾದರೆ ನಿಮ್ಮ ಜಮೀನು, ಮನೆ ನಮಗೆ ಕೊಡಿ ಎಂದು ಒತ್ತಡ ಹಾಕ್ತಾಯಿದ್ದಾರೆ‌. ಹೀಗಾಗಿ ಏಜೆಂಟ್‌ಗಳು ರೋಸಿ ಹೋಗಿದ್ದಾರೆ. ನಮಗೆ ಚಿಟ್ ಫಂಡ್, ವಿಮೆ ಕಂಪನಿಗಳಿಂದ ಹಣ ವಾಪಾಸ್ಸ್ ಕೊಡಿಸಿ ಎಂದು ಡಿಸಿ ಮೂಲಕ ಸರ್ಕಾರದ ಮೊರೆ ಹೋಗಿದ್ದಾರೆ.

ಗದಗ ಜಿಲ್ಲೆಯಲ್ಲಿಯೇ ವಿವಿಧ ಕಂಪನಿಗಳಲ್ಲಿ ನೂರಾರು‌ ಕೋಟಿ ಹಣ ಹೂಡಿಕೆ ಆಗಿದೆ ಅಂತ ಏಜಂಟರು ಹೇಳಿದ್ದಾರೆ. ಬಡ ಜನ್ರು, ರೈತರು, ವ್ಯಾಪಾರಸ್ಥರು ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ಜನ್ರು ಲಕ್ಷ ಲಕ್ಷ ಹೂಡಿಕೆ ಮಾಡಿಸಿದ್ದಾರೆ. ಒಂದೊಂದು ರೂಪಾಯಿ ಕೂಡಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಪಾಲಿಸಿಯನ್ನು ಈ ಏಜೆಂಟ್ ಮೂಲಕ ಮಾಡಿಸಿದ್ದಾರೆ.

ಆದ್ರೆ ಈವಾಗ ಏಜೆಂಟ‌ಗಳ‌‌ ಕೈಗೂ ಸಿಗ್ತಾಯಿಲ್ಲಾ ಕಂಪನಿಗಳು, ಸ್ಥಳೀಯ ಏಜೆಂಟ್ ಮಾತನ್ನು ನಂಬಿ ಪಾಲಿಸಿ ಮಾಡಿದ ಸಂತ್ರಸ್ತರು ನಮಗೆ ಹಣ ನೀಡಿ ಎಂದು ಏಜೆಂಟ್ ಬೆನ್ನು ಬಿದ್ದಿದ್ದಾರೆ. ಕಂಪನಿಗಳು ನಾಪತ್ತೆಯಾಗಿವೆ. ಆದ್ರೆ, ಆ ಕಂಪನಿಗಳಿಗೆ ಸರ್ಕಾರ ಪರವಾನಗಿ ನೀಡಿದೆ ಎಂದು ಹೇಳಿದ ಮೇಲೆ ನಾವು ಪಾಲಿಸಿ ಮಾಡಿಸಿದ್ದೇವೆ.

ಸರ್ಕಾರ 2019 ರಲ್ಲಿ ಬಡ್ಸ್ ಆಕ್ಟ್ ಪಾಸ್ ಮಾಡಿದೆ. ಆ ಕಾನೂನು ಅಡಿಯಲ್ಲಿ ವಿಮೆ ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಆ ಹಣವನ್ನು ಪಾಲಿಸಿದಾರರಿಗೆ ವಾಪಾಸ್ಸ್ ಕೊಡಿಸಬೇಕೆಂದು ಕಾನೂನು ಮಾಡಿದೆ. ಹೀಗಾಗಿ ಗದಗ ಜಿಲ್ಲಾಧಿಕಾರಿಗಳು ಒಂದು ಕೌಂಟರ್ ತೆಗೆದು, ನೊಂದ‌ ಫಲಾನುಭವಿಗಳ ಮಾಹಿತಿ ಪಡೆದುಕೊಂಡು ಹಣ ಮರಳಿ ನೀಡ್ಬೇಕು ಎಂದು ಒತ್ತಾಯ ಮಾಡಿದ್ದಾರೆ.

ಅಂದು ಕಮೀಷನ್ ಹಣಕ್ಕಾಗಿ ಕೋಟ್ಯಾಂತರ ರೂಪಾಯಿ ಪಾಲಿಸಿ ಮಾಡಿಸಿದ ಏಜೆಂಟ್‌ಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಂಭವ ಎದುರಾಗಿದೆ ಅಂತ‌ ಕಿಡಿಕಾರಿದ್ದಾರೆ. ಆ ಕಡೆ ಚಿಟ್ ಫಂಡ್, ವಿಮೆ ಕಂಪನಿಗಳು ಬಂದ್ ಆಗಿವೆ. ಪಾಲಿಸಿ ಮಾಡಿಸಿದವರು ಹಣ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸರ್ಕಾರವೇ ಪರಿಶೀಲನೆ ಮಾಡಿ ಸೂಕ್ತವಾದ ನ್ಯಾಯ ನೀಡಬೇಕಾಗಿದೆ.

ಚಿಟ್ ಫಂಡ್ ಕುರಿತಾದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ