ಇಲ್ಲಿ 20 ಪರ್ಸೇಟೇಜ್ ನೀಡಿದ್ರೆ ಮಾತ್ರ ಕೆಲಸವಂತೆ! ರೋಸಿ ಹೋದ ನಗರಸಭೆ ಕಾಂಗ್ರೆಸ್ ಸದಸ್ಯರು ಏನು ಮಾಡಿದರು ನೋಡಿ

| Updated By: ಸಾಧು ಶ್ರೀನಾಥ್​

Updated on: Aug 31, 2022 | 7:44 PM

ಈ ಕುರಿತು ಗದಗ ಬೆಟಗೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘೆವೇಂದ್ರ ಯಳವತ್ತಿ ಅವರನ್ನು ಕೇಳಿದ್ರೆ, ನಾವು ಯಾವುದೇ ರೀತಿಯಿಂದ‌‌ ಕಮಿಷನ್ ಗೆ ಒಳಗಾಗಿಲ್ಲಾ. ಪಾರದರ್ಶಕವಾಗಿ ಕೆಲಸ ಮಾಡ್ತಾಯಿದ್ದೇವೆ, ಕ್ರಿಯಾಯೋಜನೆ ರೆಡಿ ಮಾಡಿ, ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು.‌ ಆದ್ರೆ,

ಇಲ್ಲಿ 20 ಪರ್ಸೇಟೇಜ್ ನೀಡಿದ್ರೆ ಮಾತ್ರ ಕೆಲಸವಂತೆ! ರೋಸಿ ಹೋದ ನಗರಸಭೆ ಕಾಂಗ್ರೆಸ್ ಸದಸ್ಯರು ಏನು ಮಾಡಿದರು ನೋಡಿ
ಇಲ್ಲಿ 20 ಪರ್ಸೇಟೇಜ್ ನೀಡಿದ್ರೆ ಮಾತ್ರ ಕೆಲಸವಂತೆ! ರೋಸಿ ಹೋದ ನಗರಸಭೆ ಕಾಂಗ್ರೆಸ್ ಸದಸ್ಯರು ಏನು ಮಾಡಿದರು ನೋಡಿ
Follow us on

ಇಡೀ ರಾಜ್ಯಾದ್ಯಂತ ಪರ್ಸೇಂಟೇಜ್ ಆರೋಪ ಪ್ರತ್ಯಾರೋಪ ಜೋರಾಗಿ ನಡೆಯುತ್ತಿದೆ. ಇದರ ಮಧ್ಯೆ, ನರಗಸಭೆಯಲ್ಲಿಯೂ ಪರ್ಸೇಂಟೇಜ್ ಭೂತ ಆರಂಭವಾಗಿದೆ. ಹೌದು ಗದಗ-ಬೆಟಗೇರಿ ಅವಳಿ ನಗರದಲ್ಲಿ (Gadag-Betgeri City Municipal Council) 20 ಪರ್ಸೇಟೇಜ್ ನೀಡಿದ್ರೆ, ಮಾತ್ರ ಕೆಲಸವಂತೆ. ಹೀಗಾಗಿ ರೋಸಿ ಹೋದ ನಗರಸಭೆ ಕಾಂಗ್ರೆಸ್ ಸದಸ್ಯರು (Congress Members), ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರ ಕಚೇರಿಗೆ ಬೀಗ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಆಡಳಿತ ಚಹಾ ಹೊಟೇಲ್ ಗಳಲ್ಲಿ ಏಜೆಂಟರ ಮೂಲಕ ಕಮಿಷನ್ ದಂಧೆ ಮಾಡ್ತಾಯಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಈವಾಗ ರಾಜ್ಯಾದ್ಯಂತ 40 ಪರ್ಸೇಂಟೆಜ್ ಸರ್ಕಾರ ಎಂದು ವಿರೋಧ ಪಕ್ಷಗಳು ಆರೋಪ ಮಾಡ್ತಾಯಿವೆ. ಹೀಗಾಗಿ ಕಾಂಗ್ರೆಸ್ ಬಿಜೆಪಿ ನಡುವೆ ಪರ್ಸೇಂಟೆಜ್ ಜಟಾಪಟಿ ಜೋರಾಗಿದೆ. ಈ ಪರ್ಸೇಂಟೆಜ್ ಹಾವಳಿ ಈಗ ಗದಗ ಜಿಲ್ಲೆಗೂ ಕಾಲಿಟ್ಟಿದೆ. ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ವಿರುದ್ಧ ಪರ್ಸೇಂಟೆಜ್ ಆರೋಪ ಕೇಳಿ ಬಂದಿದೆ.

ಹೌದು ಗದಗ ಬೆಟಗೇರಿ ನಗರಸಭೆಯಲ್ಲಿ‌ 20 ಪರ್ಸೆಂಟೆಜ್ ಇದೆಯಂತೆ. ಗದಗ ಬೆಟಗೇರಿ ಅವಳಿ ನಗರದಲ್ಲಿ ಯಾವದೆ ಕೆಲಸ ಮಾಡಬೇಕಾದ್ರು ಅಧ್ಯಕ್ಷೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ 20 ಪರ್ಸೆಂಟೇಜ್ ನೀಡಬೇಕಂತೆ. ಆಗ ಮಾತ್ರ ಅನುದಾನ ಬಿಡುಗಡೆಯಾತ್ತೆ. ಟೆಂಡರ್ ಅದ್ರೆ, ವರ್ಕ್ ಆರ್ಡ್ ಸಿಗುತ್ತೆ ಅಂತ ಕಾಂಗ್ರೆಸ್ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಇಂದು ಬಿಜೆಪಿ ದುರಾಡಳಿತದ ವಿರುದ್ಧ ಕಾಂಗ್ರೆಸ್ ಸದಸ್ಯರು ಹೋರಾಟಕ್ಕೆ ಇಳಿದಿದ್ರು. ಗದಗ-ಬೆಟಗೇರಿ ನಗರಸಭೆಯ ಕಾಂಗ್ರೆಸ್ ಸದಸ್ಯರು ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಹಾಗೂ ಪೌರಾಯುಕ್ತರ ಕಚೇರಿಗೆ ಬಿಗ್ ಹಾಕಿ ಪ್ರತಿಭಟನೆ ಮಾಡಿದರು.

ಅಧ್ಯಕ್ಷೆ, ಪೌರಾಯುಕ್ತ ವಿರುದ್ಧ ಧಿಕ್ಕಾರ ಹಾಕಿ ಆಕ್ರೋಶ ಹೊರಹಾಕಿದ್ರು. ಕಳೆದ 8 ತಿಂಗಳಿಂದ ಆಡಳಿತರೂಢ ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ವಂತೆ, ಯಾವುದಾರು ಕೆಲಸ ಮಾಡಬೇಕು ಎಂದ್ರೆ, 20 ಪರ್ಸೇಂಟೆಜ್ ನೀಡಬೇಕು, ಹೀಗಾಗಿ ಅವಳಿ ನಗರದಲ್ಲಿ ಅಭಿವೃದ್ಧಿ ಕೆಲಸ ಆಗ್ತಾಯಿಲ್ಲಾ, ರಾಜ್ಯದಲ್ಲಿ 40 ಫರ್ಸೇಂಟೆಜ್, ಗದಗ ನಗರಸಭೆಯಲ್ಲಿ 20 ಪರ್ಸೇಂಟೆಜ್ ನೀಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಸದಸ್ಯ ಕೃಷ್ಣ ಪರಾಪುರ ಆರೋಪ ಮಾಡಿದ್ದಾರೆ.

ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಅವ್ರು 20 ಪರ್ಸೆಂಟೇಜ್ ವಸೂಲಿ ಇಳಿದಿದ್ದಾರಂತೆ. ಕಳೆದ 8 ತಿಂಗಳಿಂದ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲಾ. ಅವ್ರು ಏನಾದ್ರು ಅಭಿವೃದ್ಧಿ ಮಾಡಿದ್ರೆ ನಾನು ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ. ಇನ್ನೂ ಎಸ್ ಎಫ್ ಸಿ ಅನುದಾನ, 16 ನೇ ಹಣಕಾಸಿನ ಅನುದಾನ, ಜನರಲ್ ಫಂಡ್ ನಲ್ಲಿ ಟೆಂಟರ್ ಕರೆದಿದ್ದಾರೆ. ವರ್ಕ್ ನೀಡಿದ್ದಾರೆ. ಆದ್ರೆ ಈವರಿಗೆ ಕಾರ್ಯಾದೇಶ ಈವರಿಗೆ ನೀಡಿಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಗದಗ ಬೆಟಗೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘೆವೇಂದ್ರ ಯಳವತ್ತಿ ಅವರನ್ನು ಕೇಳಿದ್ರೆ, ನಾವು ಯಾವುದೇ ರೀತಿಯಿಂದ‌‌ ಕಮಿಷನ್ ಗೆ ಒಳಗಾಗಿಲ್ಲಾ. ಪಾರದರ್ಶಕವಾಗಿ ಕೆಲಸ ಮಾಡ್ತಾಯಿದ್ದೇವೆ, ಕ್ರಿಯಾಯೋಜನೆ ರೆಡಿ ಮಾಡಿ, ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು.‌ ಆದ್ರೆ, ತಾಂತ್ರಿಕ ಕಾರಣಗಳಿಂದ ಅದು ವಾಪಸ್ ಬಂದಿದ್ದು, ಪುನಃ ಮತ್ತೊಮ್ಮೆ ಕಳಿಸಲಾಗಿದೆ. ಸ್ವಲ್ಪ ತಡವಾಗಿದೆ ಅಂತ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಹೇಳಿದ್ದಾರೆ.

ಗದಗ ಬೆಟಗೇರಿ ನಗರಸಭೆ ಅದರಲ್ಲೂ ಬಿಜೆಪಿ ಆಡಳಿತರೂಢ ನಗರಸಭೆ ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿದೆ. ಬಿಜೆಪಿ ಆಡಳಿತ ಅಭಿವೃದ್ಧಿ ಮಾಡೋಕೆ ಅಲ್ಲ ಲೂಟಿ ಮಾಡೋಕೆ ಬಂದಿದೆ ಅಂತ ಸದಸ್ಯರು ಕಿಡಿಕಾರಿದ್ದಾರೆ. 20 ಪರ್ಸೇಂಟೆಜ್ ನೀಡಬೇಕು, ಆಗ ಮಾತ್ರ ಕೆಲಸವಾಗುತ್ತೇ ಎಂದು ಕಾಂಗ್ರೆಸ್ ಸದಸ್ಯರ ಆರೋಪ ಮಾಡಿ ಕಚೇರಿಗೆ ಬಿಗ್ ಹಾಕಿದ್ದಾರೆ. ಇನಾದ್ರು ಜಿಲ್ಲೆಯ ಸಚಿವರು, ಹಿರಿಯ ಶಾಸಕರು, ಹಿರಿಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ.

– ಸಂಜೀವ ಪಾಂಡ್ರೆ, ಟವಿ 9, ಗದಗ