ಗದಗದಲ್ಲಿ 15ಕ್ಕೂ ಹೆಚ್ಚು ಮಕ್ಕಳಲ್ಲಿ ಪೋಸ್ಟ್ ಕೋವಿಡ್ ಲಕ್ಷಣಗಳು ಪತ್ತೆ, ಆತಂಕ
ಹೊಸ ಕೋವಿಡ್ ಪ್ರಭೇದದ ನಡುವೆಯೂ ಪೋಸ್ಟ್ ಕೋವಿಡ್ ಲಕ್ಷಣ ಮಕ್ಕಳಲ್ಲಿ ಕಂಡುಬರುತ್ತಿರುವುದು ಜಿಲ್ಲೆಯ ಮಕ್ಕಳ ತಜ್ಞರನ್ನೂ ಆತಂಕಗೊಳಿಸಿದೆ. 15 ಮಕ್ಕಳಲ್ಲಿ ಪೋಸ್ಟ್ ಕೋವಿಡ್ ಲಕ್ಷಣ ಕಂಡುಬಂದಿದ್ದು ಕೆಲವು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ.

ಗದಗ: ಹೊಸ ಕೋವಿಡ್ ಪ್ರಭೇದದ ನಡುವೆಯೂ ಪೋಸ್ಟ್ ಕೋವಿಡ್ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುತ್ತಿರುವುದು ಜಿಲ್ಲೆಯ ಮಕ್ಕಳ ತಜ್ಞರನ್ನೂ ಆತಂಕಗೊಳಿಸಿದೆ. 15 ಮಕ್ಕಳಲ್ಲಿ ಪೋಸ್ಟ್ ಕೋವಿಡ್ ಲಕ್ಷಣ ಕಂಡುಬಂದಿದ್ದು ಕೆಲವು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ ಎಂದು ಮಕ್ಕಳ ತಜ್ಞ ಡಾ ಜಯರಾಜ್ ಪಾಟೀಲ್ ಟಿವಿ9 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಮಕ್ಕಳಲ್ಲಿ ಪೋಸ್ಟ್ ಕೋವಿಡ್ ಲಕ್ಷಣಗಳು ಬಂದಿರುವುದು ಜನರಿಗೆ ಆತಂಕ ಮೂಡಿಸುತ್ತಿದೆ. ಮಕ್ಕಳಿಗೆ ಗೊತ್ತಾಗದ ರೀತಿಯಲ್ಲಿ ಪೋಸ್ಟ್ ಕೋವಿಡ್ ಬಂದು ಹೋಗಿದ್ದು, ಈಗ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ ಎಂದು ಹೇಳಿದ್ದಾರೆ.
15ಕ್ಕೂ ಹೆಚ್ಚು ಮಕ್ಕಳಿಗೆ ಪೋಸ್ಟ್ ಕೋವಿಡ್ ಪತ್ತೆಯಾಗಿದೆ. ವಿಪರೀತ ಜ್ವರ, ಮೈ ಎಲ್ಲ ಕೆಂಪಗಾಗೋದು, ಅತಿಯಾದ ಹೊಟ್ಟೆ ನೋವಿನಂತಹ ಲಕ್ಷಣಗಳು ಕಂಡು ಬರುತ್ತಿವೆ. ಮಕ್ಕಳ IGG ಟೆಸ್ಟ್ ರಿಪೋರ್ಟ್‌ನಲ್ಲಿ ಪಾಸಿಟಿವ್ ವರದಿ ಬಂದಿದೆ. ಇದರಲ್ಲಿ, ಕೆಲ ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ. ಇದು ತಜ್ಞರನ್ನೇ ಬಿಚ್ಚಿ ಬೀಳಿಸುವಂತಿದೆ ಎಂದು ಚಿಕ್ಕ ಮಕ್ಕಳ ತಜ್ಞ ಡಾ. ಜಯರಾಜ್ ಹೇಳಿದ್ದಾರೆ.
Published On - 9:56 am, Wed, 30 December 20